ಭಾರತ ಕ್ರಿಕೆಟ್ ತಂಡಕ್ಕೆ ದ.ಕ. ಬಿಜೆಪಿಯಿಂದ ಹೃತ್ಪೂರ್ವಕ ಅಭಿನಂದನೆ

ಭಾರತ ಕ್ರಿಕೆಟ್ ತಂಡಕ್ಕೆ ದ.ಕ. ಬಿಜೆಪಿಯಿಂದ ಹೃತ್ಪೂರ್ವಕ ಅಭಿನಂದನೆ


ಮಂಗಳೂರು: ನಮ್ಮ ಭಾರತದ ಕ್ರಿಕೆಟ್ ತಂಡವು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ಥಾನ ತಂಡವನ್ನು ತನ್ನ ಅಸಾಧಾರಣ ಹೋರಾಟ ಮತ್ತು ಅಜೇಯ ಮನೋಬಲದೊಂದಿಗೆ ಫೈನಲ್‌ನಲ್ಲಿ ವಿಜಯವನ್ನು ಸಾಧಿಸಿದ್ದು, ಈ ಮಹಾ ವಿಜಯಕ್ಕೆ ದಕ್ಷಿಣ ಕನ್ನಡ ಬಿಜೆಪಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ಭಯೋತ್ಪಾದನೆಯನ್ನೇ ತನ್ನ ರಾಜಕೀಯ ಹಾಗೂ ವಿದೇಶ ನೀತಿಯಾಗಿಸಿರುವ ಪಾಕಿಸ್ಥಾನ ದೇಶದ ವಿರುದ್ಧ ಭಾರತದ ಕ್ರಿಕೆಟ್ ತಂಡವು ತೆಗೆದುಕೊಂಡಿರುವ ನಿಲುವು ಹಾಗೂ ಅದೇ ರೀತಿ ಆಟವಾಡುವಾಗ ಮೆರೆದ ಕ್ರೀಡಾಸ್ಫೂರ್ತಿ ಮತ್ತು ಶ್ರಮವು ಇಡೀ ದೇಶಕ್ಕೆ ಹೆಮ್ಮೆಯನ್ನು ತಂದುಕೊಟ್ಟಿದೆ. ಹಾಗೇನೆ ‘ಆಪರೇಷನ್ ಸಿಂಧೂರ’ ಆಟದ ಮೈದಾನದಲ್ಲೂ ಜಾರಿಯಲ್ಲಿದೆ ಹಾಗೂ ಇದರಲ್ಲೂ ಗೆದ್ದದ್ದು ಭಾರತವೇ ಆಗಿದೆ ಎಂದು ಪ್ರಧಾನಿ ಮೋದೀಜಿಯವರು ಮಾಡಿರುವ ಎಕ್ಸ್‌ನ ಸಂದೇಶದೊಂದಿಗಿನ ಈ ಗೆಲುವು ಪ್ರತಿಯೊಬ್ಬ ರಾಷ್ಟ್ರಭಕ್ತ ಭಾರತೀಯರ ಮನದಲ್ಲಿ ಹೊಸ ಉತ್ಸಾಹ, ವಿಶ್ವಾಸ ಮತ್ತು ಹೆಮ್ಮೆಯನ್ನು ತುಂಬಿದೆ.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯು ನಮ್ಮ ಕ್ರಿಕೆಟಿಗರಿಗೆ ಮುಂದಿನ ದಿನಗಳಲ್ಲಿಯೂ ಇದೇ ರೀತಿ ಅನೇಕ ಸಾಧನೆಗಳು ದೊರೆಯಲಿ ಎಂಬ ಹಾರೈಕೆ ಮಾಡುತ್ತೇವೆ. ಬಿಜೆಪಿ ಜಿಲ್ಲಾ ವಕ್ತಾರ ಅರುಣ್ ಜಿ. ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article