
ಧರ್ಮಸ್ಥಳ ಪ್ರಕರಣ: ಕೇರಳದ ಯುಟ್ಯೂಬರ್ ಮನಾಫ್ ವಿಚಾರಣೆ
ಕೇರಳದ ಯೂಟ್ಯೂಬರ್ ಹಾಗೂ ಲಾರಿ ಮಾಲಕ ಮನಾಫ್ ಹಾಗೂ ಯುನೈಟೆಡ್ ಮೀಡಿಯಾ ಯೂಟ್ಯೂವ್‌ನ ಅಭಿಷೇಕ್ ಎಸ್‌ಐಟಿ ಮುಂದೆ ತನಿಖೆಗೆ ಹಾಜರಾಗಿದ್ದಾರೆ.
ಮನಾಫ್ ವಿಚಾರಣೆಗೆ ಕೇರಳ ಪೊಲೀಸರಿಂದ ಭದ್ರತೆ ಕೇಳಿದ್ದರು ಆದರೆ ಭದ್ರತೆ ಇಲ್ಲದೆ ವಿಚಾರಣೆಗೆ ಒಬ್ಬಂಟಿಯಾಗಿ ಆಗಮಿಸಿದ್ದಾರೆ. ಇವರಿಬ್ಬರೂ ಕೂಡಾ ಚಿನ್ನಯ್ಯ ಮ್ಯಾಯಾಲಯಕ್ಕೆ ಬುರುಡೆ ಸಹಿತ ದೂರು ಕೊಟ್ಟಿದ್ದ ದಿನವೇ ಯೂಟ್ಯೂಬ್‌ನಲ್ಲಿ ಅದೇ ಬುರುಡೆಯನ್ನು ಕಾಡಿನಿಂದ ತರುತ್ತಿರುವ ದೃಶ್ಯವನ್ನು ಪ್ರಸಾರ ಮಾಡಿದ್ದರು, ಈ ಹಿನ್ನೆಲೆ ವಿಚಾರಣೆ ನಡೆಯುತ್ತಿದೆ.
ಕಳೆದ ಮೂರ್ನಾಲ್ಕು ದಿನದಿಂದ ಗಿರೀಶ್ ಮಟ್ಟೆಣ್ಣವರ್, ಜಯಂತ್ ಟಿ ವಿಚಾರಣೆ ನಡೆಯುತ್ತಿದೆ, ಜಯಂತ್ ಟಿ ಇಂದು ಮಾಸ್ಕ್ ಧರಿಸಿ ಕಾಡಿನ ದಾರಿಯಲ್ಲಿ ಎಸ್‌ಐಟಿ ಕಚೇರಿಗೆ ಹಿಂಬಾಗಿಲಿನಿಂದ ಜಆಗಮಿಸಿದ್ದಾರೆ. ಈ ದೃಶ್ಯ ಮಾಧ್ಯಮಗಳಲ್ಲಿ ಸೆರೆಯಾಗಿದೆ.
ಯೂಟ್ಯೂಬ್ ನಲ್ಲಿ ಮೊದಲ ಬಾರಿಗೆ ವಿಡಿಯೋ ಪ್ರಕಟಿಸಿದ್ದು ಅಭಿಷೇಕ್. ಹೀಗಾಗಿ ಈತನ ಸುದೀರ್ಘ ವಿಚಾರಣೆಯನ್ನು ಮಾಡಲಾಗುತ್ತಿದೆ. ಜಯಂತ್ ಟಿ. ಕರೆಗಳ ಮಾಹಿತಿ ದಾಖಲೆಗಳನ್ನು ಪಡೆದು ವಿಚಾರಣೆ ನಡೆಯುತ್ತಿದೆ. ಎಸ್‌ಐಟಿ ನೋಟಿಸ್ ನೀಡಿದಂತೆ ಹಾಜರಾಗಿದ್ದೇನೆ. ಸತ್ಯಾಸತ್ಯೆ ಬಗ್ಗೆ ಎಸ್‌ಐಟಿ ತನಿಖೆ ನಡೆಸಿಲಿದೆ. ಅವರ ಯಾವುದೇ ಪ್ರಶ್ನೆಗೆ ಉತ್ತರ ನೀಡುತ್ತೇನೆ ಎಂದು ಮನಾಫ್ ತಿಳಿಸಿದ್ದಾರೆ.
ಅಮ್ಮನಂತೆ ಭಾವಿಸಿದ್ದೆ..
ಈ ನಡುವೆ ಮನಾಫ್ ಅವರದ್ದು ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸುಜಾತ ಭಟ್ ನನ್ನ ಅಮ್ಮನಂತೆ ಎಂದು ಭಾವಿಸಿದೆ, ಹೀಗಾಗಿ ಅವರ ಪರ ನಿಂತೆ. ಆದರೆ ಅವರು ಅನನ್ಯಾ ಭಟ್ ನನ್ನ ಮಗಳೇ ಅಲ್ಲ ಎಂದು ಉಲ್ಟಾ ಹೊಡೆದಿರುವುದು ನನ್ನ ಮರ್ಯಾದೆ ತೆಗೆಯುವಂತೆ ಮಾಡಿದೆ. ಕೇರಳದಲ್ಲಿ ನಾನೊಬ್ಬನೆ ಧರ್ಮಸ್ಥಳ ಹೋರಾಟದಲ್ಲಿ ನಿಂತಿರುವುದು. ಎಷ್ಟೊಂದು ಜನ ಇವರಿಂದ ನನಗೆ ಅವಮಾನಿಸಿದ್ದಾರೆ. ಇವರು ದಿನಕ್ಕೆ ಒಂದೊಂದು ಹೇಳಿಕೆ ಕೊಟ್ಟಿದ್ದಾರೆ. ಇವರಿಂದ ನನಗೆ ಬೇಜಾರಾಗಿದೆ. ಇವರ ಮೇಲೆ ಒಂದು ವಿಶ್ವಾಸವಿತ್ತು ಅದೀಗ ಇಲ್ಲ. ಇಂತವರಿಗೆ ನಾವು ಪ್ರಾಮುಖ್ಯತೆ ಕೊಡಲೇ ಬಾರದು. ಇವರಿಂದ ನನಗೆ ಅವಮಾನ ಆಗಿದೆ ಎಂದು ಆಡಿಯೋದಲ್ಲಿ ಹೇಳಲಾಗಿದೆ.