ಓಲೈಕೆ ರಾಜಕಾರಣವೇ ಕಾಂಗ್ರೆಸ್ಸಿನ ‘ಬ್ರದರ್ಸ್’ಗಳ ಅಟ್ಟಹಾಸಕ್ಕೆ ಕಾರಣ: ಶಾಸಕ ಕಾಮತ್
ಕಲ್ಲು ತೂರಾಟದಲ್ಲಿ ಮಹಿಳೆಯರು ಹಾಗೂ ಪೊಲೀಸರು ಸಹ ತೀವ್ರವಾಗಿ ಗಾಯಗೊಂಡಿರುವ ಘಟನೆ ಅತ್ಯಂತ ಆತಂಕಕಾರಿಯಾಗಿದೆ. ಈ ಕೃತ್ಯವನ್ನು ಪ್ರತಿಭಟಿಸಿದ ಹಿಂದೂಗಳ ಮೇಲೆಯೇ ಲಾಠಿಚಾರ್ಜ್ ನಡೆಸಿ ಹಿಂದೂಗಳನ್ನು ಸದೆಬಡಿಯುವ ಹುನ್ನಾರ ನಡೆಸಿರುವ ಕಾಂಗ್ರೆಸ್ ಸರ್ಕಾರ ತಾನೆಂದಿಗೂ ಹಿಂದೂ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂ ಹಬ್ಬಗಳನ್ನು ನೆಮ್ಮದಿಯಾಗಿ ಆಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ನಾವೆಷ್ಟೇ ನೀಚ ಕೃತ್ಯ ಮಾಡಿದರೂ ಕಾಂಗ್ರೆಸ್ ಸರ್ಕಾರ ನಮ್ಮನ್ನು ರಕ್ಷಿಸುತ್ತದೆ ಎಂಬ ಭಾವನೆ ಮತಾಂಧರಲ್ಲಿ ಮೂಡಿದೆ ಎಂದರು.
ಮತಾಂಧ ಕಿಡಿಗೇಡಿಗಳಂತೆ ಎಲ್ಲಾದರೂ ಹಿಂದೂಗಳು ಈದ್ ಮಿಲಾದ್ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಗಳು ನಡೆದಿದೆಯಾ? ರಾಜ್ಯದ ಸದ್ಯದ ಪರಿಸ್ಥಿತಿಯಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಬೆಲೆಯೇ ಇಲ್ಲವಾಗಿದೆ. ‘ಕಾಂಗ್ರೆಸ್ಸಿನ ಬ್ರದರ್ಸ್’ಗಳು ಇಷ್ಟೊಂದು ಅಟ್ಟಹಾಸ ಮೆರೆದು ಹಿಂದೂಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲು ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣವೇ ನೇರ ಕಾರಣವಾಗಿದ್ದು ರಾಜ್ಯದ ಜನರೇ ಎಲ್ಲದಕ್ಕೂ ತಕ್ಕ ಪಾಠ ಕಲಿಸುವ ದಿನಗಳು ಬಹಳ ದೂರವಿಲ್ಲ ಎಂದು ಶಾಸಕರು ಪ್ರಕಟಣೆಯಲ್ಲಿ ಆಕ್ರೋಶದಿಂದ ಹೇಳಿದರು.