ರೋಹನ್ ಸಿಟಿಯಲ್ಲಿ ಒಣಂ ಸಂಭ್ರಮ

ರೋಹನ್ ಸಿಟಿಯಲ್ಲಿ ಒಣಂ ಸಂಭ್ರಮ


ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ರೋಹನ್ ಕಾರ್ಪೋರೇಶನ್ ರೇಶನ್ ಸಂಸ್ಥೆಯ ವತಿಯಿಂದ ರೋಹನ್ ಸಿಟಿ ಕಚೇರಿಯಲ್ಲಿ ಒಣಂ ಹಬ್ಬವನ್ನು ಆಚರಿಸಲಾಯಿತು. ಸಿಬ್ಬಂದಿಗಳು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು, ಸಾಂಸ್ಕೃತಿಕ ವೈಭವವನ್ನು ಹಂಚಿಕೊಂಡರು.

ಕಾರ್ಯಕ್ರಮವು ದೀಪಪ್ರಜ್ವಲನದೊಂದಿಗೆ ಆರಂಭಗೊಂಡಿತು. ಸಂಸ್ಥೆಯ ನಿರ್ದೇಶಕ ಡಿಯೋನ್ ಮೊಂತೆರೋ ಮತ್ತು ಜನರಲ್ ಮ್ಯಾನೇಜರ್ ಸುಮನಾ ಅವರು ದೀಪ ಬೆಳಗುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.


ಓಣಂ ಹಬ್ಬದ ಹೂವಿನ ಅಲಂಕಾರ (ಪೂಕಳಂ), ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಂಸ್ಥೆಯ ಸಿಬ್ಬಂದಿಗಳ ಸಕ್ರಿಯ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತಂದಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿರ್ದೇಶಕ ಡಿಯೋನ್ ಮೊಂತೆರೋ ಅವರು, ‘ಒಣಂ ಹಬ್ಬವು ಏಕತೆ ಸಂಕೇತ. ಇಂತಹ ಆಚರಣೆಗಳು ನಮ್ಮ ಬಾಂಧವ್ಯವನ್ನು ಬಲಪಡಿಸುತ್ತವೆ’ ಎಂದು ಹೇಳಿದರು.

‘ಎಲ್ಲರೂ ಒಗ್ಗಟ್ಟಿನಿಂದ ಒಂದು ಕುಟುಂಬದಂತೆ ಹಬ್ಬವನ್ನು ಆಚರಿಸುತ್ತಿರುವುದು ಸಂತೋಷಕರ. ಇಂತಹ ಸಂದರ್ಭಗಳು ಪರಸ್ಪರ ಗೌರವ ಮತ್ತು ಸ್ನೇಹವನ್ನು ಹೆಚ್ಚಿಸುತ್ತವೆ’ ಎಂದು ಜನರಲ್ ಮ್ಯಾನೇಜರ್ ಸುಮನಾ ಹೇಳಿದರು.

ರೋಹನ್ ಕಾರ್ಪೋರೇಶನ್ ವತಿಯಿಂದ ಹಮ್ಮಿಕೊಂಡಿದ್ದ ಈ ಒಣಂ ಆಚರಣೆಯು ಕೇವಲ ಹಬ್ಬದ ಆಚರಣೆ ಮಾತ್ರವಲ್ಲದೆ, ಸಂಸ್ಥೆಯ ಏಕತೆ ಮತ್ತು ಸೌಹಾರ್ದತೆಯ ಮೌಲ್ಯಗಳನ್ನು ಪುನರುಚ್ಚರಿಸಿದ ಸಂದರ್ಭವಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article