
ರಾಣಿ ಅಬ್ಬಕ್ಕ ಹೆಣ್ಣಿನ ಅಗಾಧ ಶಕ್ತಿಯ ಸಂಕೇತ
ಮಂಗಳೂರು: ತುಳುನಾಡಿನ ಉಳ್ಳಾಲದ ರಾಣಿ ಅಬ್ಬಕ್ಕ ಹೆಣ್ಣಿನ ಅಗಾಧ ಶಕ್ತಿಯ ಸಂಕೇತ. ಹೆಣ್ಣು ಽರೆಯಾಗಬೇಕು. ಅನ್ಯಾಯದ ವಿರುದ್ಧ ಹೋರಾಡಬೇಕು. ಈ ನಿಟ್ಟಿನಲ್ಲಿ ರಾಣಿ ಅಬ್ಬಕ್ಕ ಪ್ರತಿಯೊಂದು ಹೆಣ್ಣಿಗೂ ಆದರ್ಶವಾಗಬೇಕು ಎಂದು ಸಾಹಿತಿ ಡಾ. ಮೀನಾಕ್ಷಿ ರಾಮಚಂದ್ರ ಹೇಳಿದರು.
ಕರ್ನಾಟಕ ರಾಜ್ಯ ಮಹಾ ವಿದ್ಯಾಲಯ ಶಿಕ್ಷಕ ಸಂಘ (ಕೆಆರ್‌ಎಂಎಸ್‌ಎಸ್)ದ ಮಂಗಳೂರು ವಿಭಾಗ ವತಿಯಿಂದ ನಗರದ ಡಾ.ಎನ್‌ಎಸ್‌ಎಎಂ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಅಬ್ಬಕ್ಕ 500 ಪ್ರೇರಣಾದಾಯಿ ಉಪನ್ಯಾಸಗಳ ಸರಣಿ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ದ.ಕ.ಜಿಲ್ಲಾಧ್ಯಕ್ಷ ಪಿ.ಬಿ. ಹರೀಶ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಎನ್‌ಎಸ್‌ಎಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ಶೆಟ್ಟಿ ಕೆ. ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲೆ ಅನ್ನಪೂರ್ಣ ನಾಕ್, ಕೆಆರ್‌ಎಂಎಸ್‌ಎಸ್ ಕಾರ್ಯದರ್ಶಿ ಪ್ರೊ.ರಾಜೇಶ್, ಕಾಲೇಜಿನ ಎನ್‌ಎಸ್‌ಎಸ್ ಅಽಕಾರಿ ಸಂತೋಷ್ ಎ.ಶೆಟ್ಟಿ, ಕಾರ್ಯಕ್ರಮ ಸಂಯೋಜಕಿ ಜಯಲಕ್ಷ್ಮಿ ಆರ್.ಶೆಟ್ಟಿ, ಪ್ರೊ.ಮಮತಾ ಉಪಸ್ಥಿತರಿದ್ದರು.