ಕಾಂಗ್ರೆಸ್ ಹಿರಿಯ ಮುಖಂಡ ಅಬ್ದುಲ್ ರಹ್ಮಾನ್ ಭಟ್ಕಳ್ ನಿಧನ
ಭಟ್ಕಳ ಮೂಲದವರಾಗಿದ್ದ ಅಬ್ದುಲ್ ರಹ್ಮಾನ್ ಅವರು ಮಂಗಳೂರಿನ ಭಟ್ಕಳ ಬಜಾರ್‌ನಲ್ಲಿ ವಾಸವಾಗಿದ್ದರು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಹಲವು ತಿಂಗಳುಗಳಿಂದ ಪತ್ನಿ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದರು. ನೇರ ನಡೆ ನುಡಿಯ ಸರಳ ಸಜ್ಜನಿಕೆಯ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು ಜಿಲ್ಲೆಯ ಎಲ್ಲಾ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ದೂರದರ್ಶಿತ್ವ, ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆಯ ಮೂಲಕ ಕಾಂಗ್ರೆಸ್ ಮುಖಂಡರಿಗೆ ಮಾದರಿಯಾಗಿದ್ದರು. ರಾಜಕೀಯದ ಜೊತೆಗೆ ಅವರ ಸಾಮಾಜಿಕ ಸೇವೆಯೂ ಅನುಪಮವಾದುದು.
ಮೃತರು ಪತ್ನಿ, 6 ಮಂದಿ ಪುತ್ರರು, 4 ಮಂದಿ ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸಂತಾಪ:
ಅಬ್ದುಲ್ ರಹ್ಮಾನ್ ಭಟ್ಕಳ್ ಅವರ ಅಗಲಿಕೆ ಜಿಲ್ಲಾ ಕಾಂಗ್ರೆಸ್‌ಗೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ, ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಶಾಸಕ ಬಿ.ಕೆ. ಹರಿಪ್ರಸಾದ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹೀಂ, ಮಾಜಿ ಸಚಿವರಾದ ಬಿ. ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಗಂಗಾಧರ್ ಗೌಡ, ಶಾಸಕರಾದ ಅಶೋಕ್ ಕುಮಾರ್ ರೈ, ಐವನ್ ಡಿಸೋಜ, ಮಾಜಿ ಶಾಸಕರಾದ ವಿಜಯ ಕುಮಾರ್ ಶೆಟ್ಟಿ, ಎನ್.ಎಂ. ಅಡ್ಯಂತಾಯ, ಮೊಹಮ್ಮದ್ ಮಸೂದ್, ಶಕುಂತಲಾ ಶೆಟ್ಟಿ, ಜೆ.ಆರ್. ಲೋಬೊ, ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್, ಪದ್ಮರಾಜ್ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎಸ್. ಮೊಹಮ್ಮದ್, ಜಿ.ಎ. ಬಾವ, ಮಿಥುನ್ ರೈ, ರಕ್ಷಿತ್ ಶಿವರಾಂ, ಇನಾಯತ್ ಅಲಿ, ಟಿ.ಎಂ. ಶಹೀದ್, ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಬಿ.ಎಚ್. ಖಾದರ್, ಶಶಿಧರ್ ಹೆಗ್ಡೆ, ಯು.ಕೆ. ಮೋನು, ಸುರೇಶ್ ಬಳ್ಳಾಲ್, ಸದಾಶಿವ್ ಉಳ್ಳಾಲ್, ಕೆ.ಹರಿನಾಥ್, ಹಾಜಿ ಟಿ.ಎಸ್. ಅಬ್ದುಲ್ಲಾ, ಮಮತಾ ಗಟ್ಟಿ, ಜಿ.ಕೃಷ್ಣಪ್ಪ, ಅಬ್ದುಲ್ ರವೂಫ್, ಕೆ.ಅಶ್ರಫ್, ಸಂಶುದ್ದೀನ್ ಕುದ್ರೋಳಿ, ಸಂಶುದ್ದೀನ್ ಬಂದರ್, ಲತೀಫ್ ಕಂದಕ್, ಅಶ್ರಫ್ ಬಜಾಲ್, ಭರತ್ ಮುಂಡೋಡಿ, ಹೇಮನಾಥ ಶೆಟ್ಟಿ ಕಾವು, ಅಶ್ವಿನ್ ಕುಮಾರ್ ರೈ, ಸುರೇಂದ್ರ ಕಂಬಳಿ, ಮಹಾಬಲ ಮಾರ್ಲ, ವೆಂಕಪ್ಪ ಗೌಡ, ಮಲಾರ್ ಮೋನು, ಟಿ.ಹೊನ್ನಯ್ಯ, ಶುಭೋದಯ ಆಳ್ವ, ಆರಿಫ್ ಬಾವಾ ಬಂದರ್, ಇಮ್ರಾನ್ ಎ.ಆರ್., ಗಣೇಶ್ ಪೂಜಾರಿ, ಖಾದರ್ ಏರ್ಪೋರ್ಟ್, ಜಯಶೀಲ ಅಡ್ಯಂತಾಯ, ಸುಧೀರ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ನೀರಜ್ ಚಂದ್ರಪಾಲ್, ವಿಕಾಸ್ ಶಟ್ಟಿ, ನಝೀರ್ ಬಜಾಲ್, ಪ್ರತಿಭಾ ಕುಳಾಯಿ, ಶಬ್ಬೀರ್ ಸಿದ್ದಕಟ್ಟೆ, ಎಂ.ಎ. ಗಫೂರ್, ಫಾರೂಕ್ ಬಯಾಬೆ, ಇಸಾಕ್ ಸಾಲ್ಮರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಲಕೃಷ್ಣ ಅಂಚನ್, ಚಂದ್ರಶೇಖರ್ ಭಂಡಾರಿ, ಪುರುರೋಷತ್ತಮ ಚಿತ್ರಾಪುರ, ಪ್ರಕಾಶ್ ಸಾಲ್ಯಾನ್, ಜೆ.ಅಬ್ದುಲ್ ಸಲೀಂ, ರಮೇಶ್ ಶೆಟ್ಟಿ ಬೋಲಿಯಾರ್, ಪ್ರಶಾಂತ್ ಕಾಜೆವ, ಸತೀಶ್ ಕಾಶಿಪಟ್ಣ, ನಾಗೇಶ್ ಕುಮಾರ್ ಗೌಡ, ಕೃಷ್ಣ ಪ್ರಸಾದ್ ಆಳ್ವ, ಪದ್ಮನಾಭ ಪೂಜಾರಿ, ಪಿ. ಮೋಹನ್ ಕೋಟ್ಯಾನ್, ಪ್ರವೀಣ್ ಕುಮಾರ್ ಜೈನ್, ಪಿ.ಸಿ ಜಯರಾಂ, ಪಿ.ಕೆ. ಅಭಿಲಾಷ್, ಯು.ಟಿ. ತೌಸೀಫ್, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರಾದ ಇಬ್ರಾಹೀಂ ನವಾಝ್, ಎಸ್.ಅಪ್ಪಿ, ಉಷಾ ಅಂಚನ್, ಜೋಕಿಂ ಡಿ’ಸೋಜಾ, ಕೆ.ಕೆ. ಶಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ದಿನೇಶ್ ಮುಳೂರು, ನಾರಾಯಣ ನಾಯ್ಕ್, ಮನೋರಾಜ್ ರಾಜೀವ, ಲಾರೆನ್ಸ್ ಡಿ’ಸೋಜಾ, ಡಾ. ಶೇಖರ್ ಪೂಜಾರಿ, ಸುಭಾಶ್ಚಂದ್ರ ಶೆಟ್ಟಿ ಕುಲಾಲು, ಬಿ.ಎಂ. ಅಬ್ಬಾಸ್ ಅಲಿ, ಚೇತನ್ ಬೆಂಗ್ರೆ, ಶೈಲಜಾ, ಸುದರ್ಶನ್ ಜೈನ್, ಅಲಿಸ್ಟರ್ ಡಿಕುನ್ಹ, ಉಲ್ಲಾಸ್ ಕೋಟ್ಯಾನ್, ಸುಹಾನ್ ಆಳ್ವ, ಕೆಪಿಸಿಸಿ ಸದಸ್ಯರಾದ ಸದಾಶಿವ ಶೆಟ್ಟಿ, ಆರ್.ಕೆ. ಪೃಥ್ವಿರಾಜ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ವಸಂತ್ ಬೆರ್ನಾಡ್, ಫಾರೂಕ್ ಪುದು, ಪಿಯೂಸ್ ರೋಡ್ರಿಗಸ್, ಸತೀಶ್ ಕೆಡಿಂಜೆ, ಮೋಹನ್ ಶೆಟ್ಟಿಗಾರ್, ಚಂದ್ರಹಾಸ ಸನೀಲ್, ಕೌಶಲ್ ಪ್ರಸಾದ್ ಶೆಟ್ಟಿ ಹಾಗೂ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಸಂಪಾತ ಸೂಚಿಸಿದ್ದಾರೆ.