ಬಿಜೆಪಿ ಮಹಿಳಾ ಮೋರ್ಚಾದಿಂದ ಶಿಕ್ಷಕರ ದಿನಾಚರಣೆ: ಶಿಕ್ಷಕಿ ಶಾಂತಿ ಲೀನಾ ಪೈಸ್ ಅವರಿಗೆ ಅಭಿನಂದನೆ

ಬಿಜೆಪಿ ಮಹಿಳಾ ಮೋರ್ಚಾದಿಂದ ಶಿಕ್ಷಕರ ದಿನಾಚರಣೆ: ಶಿಕ್ಷಕಿ ಶಾಂತಿ ಲೀನಾ ಪೈಸ್ ಅವರಿಗೆ ಅಭಿನಂದನೆ


ಮಂಗಳೂರು: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ಮಹಿಳಾ ಮೋರ್ಚಾದ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ  ನಮ್ಮ ಕ್ಷೇತ್ರದವರೇ ಆಗಿರುವ ಶಿಕ್ಷಕಿ ಶಾಂತಿ ಲೀನಾ ಪೈಸ್ ಅವರನ್ನು ಅಭಿನಂದಿಸಲಾಯಿತು. 

ಇವರು ನಗರದ ಬಿಕರ್ನಕಟ್ಟೆಯ ನಾಲ್ಯಪದವು ಶಾಲೆಯಲ್ಲಿ ಹಲವು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ, ಪ್ರಸ್ತುತ ಈಗ ಬಂಟ್ವಾಳ ತಾಲೂಕಿನ ದೇವಸ್ಯ ಪಡೂರು ಪ್ರಾಥಮಿಕ ಶಾಲೆಯಲ್ಲಿ  ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಈ ಬಾರಿ 2025-26ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯು ದೊರಕಿರುತ್ತದೆ.

 ಈ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಮಂಡಲದ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ, ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷೆ ಪೂರ್ಣಿಮಾ ರಾವ್, ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗೂ ಮಹಿಳಾ ಮೋರ್ಚಾದ ಪ್ರಭಾರಿ ಸಂಧ್ಯಾ ವೆಂಕಟೇಶ್, ಆ ಭಾಗದ ನಿಕಟಪೂರ್ವ ಮನಪಾ ಸದಸ್ಯರಾದ ಕಿಶೋರ್ ಕೊಟ್ಟಾರಿ, ಪೂರ್ವ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರವಿಚಂದ್ರ, ಮಂಡಲದ ಕಾರ್ಯದರ್ಶಿ ಹಾಗೂ ಮಹಿಳಾ ಮೋರ್ಚಾದ ಪ್ರಭಾರಿ ಮಂಗಳಾ ಆಚಾರ್, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕಮಲಾಕ್ಷಿ ಗಂಗಾಧರ್, ಮಹಿಳಾ ಮೋರ್ಚಾದ ಪದಾಧಿಕಾರಿಗಳಾದ ಸವಿತಾ ರೈ, ಜ್ಯೋತಿ ಯಲಬುರ್ಗಿ, ಲೀಲಾವತಿ ಪ್ರಕಾಶ್, ಯಶೋಧ ಗಟ್ಟಿ, ಮಾಲತಿ ಅರುಣ್, ವೀಣಾ ಕುಲಾಲ್, ಅಮಿತಾ ಹಾಗೂ ಪೂರ್ವ ಶಕ್ತಿ ಕೇಂದ್ರದ ಮಹಿಳಾ ಪ್ರಮುಖ್ ಚೇತನ  ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article