ಪಂಚಾಯತ್‌ರಾಜ್ ಸಿಬ್ಬಂದಿ ನೇಮಕಕ್ಕೆ ಶೀಘ್ರ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

ಪಂಚಾಯತ್‌ರಾಜ್ ಸಿಬ್ಬಂದಿ ನೇಮಕಕ್ಕೆ ಶೀಘ್ರ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

ಮಂಗಳೂರು: ಪಂಚಾಯತ್‌ರಾಜ್ ಇಲಾಖೆಯಲ್ಲಿ ಸಾಕಷ್ಟು ಸಿಬ್ಬಂದಿಗಳ ಕೊರತೆಯನ್ನು ನಿಗೀಸುವ ನಿಟ್ಟಿನಲ್ಲಿ ನೇಮಕಾತಿಗೆ ಶೀಘ್ರವೇ ಕ್ರಮಕೈಗೊಳ್ಳಲಾಗುತ್ತದೆ. ಮುಖ್ಯವಾಗಿ ಕೆಇಎಯ ಮೂಲಕ ಮಾಡಿದ ನೇಮಕಾತಿ ಪೂರ್ಣವಾಗಿದ್ದು, ಕೆಪಿಎಸ್‌ನಿಂದಲ್ಲೇ ನಮಗೆ ಸಮಸ್ಯೆ ಹೆಚ್ಚಾಗಿದೆ ಎಂದು ಆರ್‌ಡಿಪಿಆರ್, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಬುಧವಾರ ದ.ಕ.ಜಿ.ಪಂ.ನಲ್ಲಿ ಮಾಧ್ಯಮ ಪ್ರತಿನಿಈಜಿಗಳ ಜತೆಗೆ ಮಾತನಾಡಿ, ಅತೀ ಹೆಚ್ಚು ನೇಮಕಾತಿ ನಡೆಯುತ್ತಿರುವುದು ಪಂಚಾಯತ್ ರಾಜ್ ಇಲಾಖೆಯಲ್ಲಿ ಆರಂಭದಲ್ಲಿ ನಾವು ಕೆಇಎಗೆ ಎರಡು ಹಾಗೂ ಕೆಪಿಎಸ್‌ಇಗೆ ಎರಡು ನೇಮಕಾತಿ ಪ್ರಕ್ರಿಯೆಗೆ ಚಾಲನೆ ಕೊಟ್ಟರೆ ಸಮಸ್ಯೆ ಬಗೆಹರಿಯಬಹುದು ಎಂದು ಅಂದುಕೊಂಡಿದ್ದೇವು ಆದರೆ ಕೆಪಿಎಸ್‌ಇಯಲ್ಲಿ ಮೂರು ನೇಮಕಾತಿ ಪ್ರಕ್ರಿಯೆಗಳನ್ನು ಬಾಕಿ ಉಳಿಸಿಕೊಂಡಿದೆ. ನಮ್ಮಲ್ಲಿ ಕೆಪಿಎಸ್‌ಇ ಇರುವ ತನಕ ಜನರಿಗೆ ಉದ್ಯೋಗ ಸಿಗಲ್ಲಘಿ. ಕೆಪಿಎಸ್‌ಇವನ್ನು ವಿಸರ್ಜನೆ ಮಾಡಬೇಕು ಎಂದು ಸರಕಾರಕ್ಕೆ ಪ್ರಸ್ತಾವನೆ ಕೊಟ್ಟಿದ್ದೇವೆ. ಎರಡೂವರೆ ಲಕ್ಷದಷ್ಟು ಖಾಲಿ ಹುದ್ದೆಗಳು  ಇದ್ದು ಸರಕಾರಕ್ಕೂ ಬದ್ಧತೆಯಿದೆ. ಸಾಂವಿಧಾನಿಕ ಸಂಸ್ಥೆ ಎನ್ನುವ ಕಾರಣಕ್ಕೆ ಹಸ್ತಕ್ಷೇಪನೂ ಮಾಡಲು ಆಗುತ್ತಿಲ್ಲಘಿ. ಮುಂದೆ ಎಲ್ಲವೂ ಕೆಇಎಗೆ ನೀಡಲು ಯೋಚಿಸಿದ್ದೇವೆ. ಇತರ ಜತೆಗೆ ಒಳಮೀಸಲಾತಿ ಕೂಡ ಬಂತು ಎಂದರು.

ಸಿನೀಯರ್ ಪಿಡಿಒಗಳಿಗೆ ಉನ್ನತ ಹುದ್ದೆಗೆ ಭಡ್ತಿ:  

ಈಗಾಗಲೇ ಪಿಡಿಒಗಳ ವರ್ಗಾವಣೆ ಕೌನ್ಸೆಲಿಂಗ್‌ವನ್ನು  ಪಾರದರ್ಶಕವಾಗಿ ಸಮರ್ಥವಾಗಿ ಮಾಡಲಾಗಿದೆ. ಇದರ ಜತೆಗೆ ಕಳೆದ 12 ವರ್ಷಗಳಿಂದ ಬಾಕಿ ಉಳಿದಿರುವ ಸಿನೀಯರ್ ಪಿಡಿಒಗಳಿಒಗೆ ಭಡ್ತಿ ನೀಡುವ ವಿಚಾರದಲ್ಲೂ ಕೋರ್ಟ್‌ನಲ್ಲಿತ್ತು. ಈಗ ಅಪಿದಾವಿತ್ ಸಲ್ಲಿಕೆ ಮಾಡಲಾಗಿದೆ. ಶೀಘ್ರದಲ್ಲಿ ಉನ್ನತ ಹುದ್ದೆಗೆ ಭಡ್ತಿ ನೀಡುವ ವಿಚಾರದಲ್ಲಿ ದಿನವನ್ನು ಕೋರ್ಟ್  ಆದೇಶದ ಬಳಿಕ ನೀಡುವ ಕೆಲಸ ಮಾಡಲಾಗುತ್ತದೆ ಎಂದರು.

 ಶೀಘ್ರದಲ್ಲಿಯೇ ಚುನಾವಣೆ:  

ಜಿಲ್ಲಾ ಪಂಚಾಯಿತಿ ಚುನಾವಣೆ ಮಾಡುವ ಕೆಲಸವನ್ನು ಶೀಘ್ರದಲ್ಲಿಯೇ ಮಾಡಲಾಗುತ್ತದೆ. ಚುನಾವಣೆಯ ಕುರಿತು ಕೋರ್ಟ್‌ಗೆ ಅಪಿದಾವಿತ್ ಸಲ್ಲಿಕೆ ಮಾಡಲಾಗಿದೆ. ಕೆಲವು ಗ್ರಾಮ ಪಂಚಾಯಿತಿಗಳು ಮನಪಾ, ಸ್ಥಳೀಯ ನಗರ ಪಂಚಾಯಿತಿಗಳಿಗೆ ಸೇರಿದ ಕಾರಣಕ್ಕೆ ಪುನರ್‌ವಿಂಗಡನೆ ಕಾರ‌್ಯ ನಡೆಯಲಿದ್ದು, 3-4 ತಿಂಗಳಲ್ಲಿ ಚುನಾವಣೆಯನ್ನು ನಡೆಸಲಾಗುತ್ತದೆ ಎಂದರು.

ಕರಾವಳಿಯಲ್ಲಿ ಮುಂದಿನ ತಿಂಗಳು ಎಲ್ಲ  ಶಿಕ್ಷಣ ಸಂಸ್ಥೆಗಳು, ಉದ್ಯಮಿಗಳು ಸೇರಿ ಸಮಾಲೋಚನೆಯನ್ನು ಮಾಡಿಕೊಂಡು ಅವರು ಇಲ್ಲಿಗೆ ಏನೂ ಅವಶ್ಯಕತೆ ಇದೆ ಎನ್ನುವುದನ್ನು ತಿಳಿಸಿದರೆ ನಾವು ಅದಕ್ಕೆ ಪೂರಕ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇಲ್ಲಿನ ಯುವಕರ ಆಕಾಂಕ್ಷೆಯನ್ನು ಈ ಕಾರ‌್ಯಕ್ರಮದ ಮೂಲಕ ಈಡೇರಿಸುವುದು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತದೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article