ಸಾಂಪ್ರದಾಯಿಕ ಸಂಗೀತ ಜನಪದ ಕಲಾವಿದರ 12ನೇ ವಷ೯ದ ವಾಷಿ೯ಕ ಮಹಾಸಭೆ

ಸಾಂಪ್ರದಾಯಿಕ ಸಂಗೀತ ಜನಪದ ಕಲಾವಿದರ 12ನೇ ವಷ೯ದ ವಾಷಿ೯ಕ ಮಹಾಸಭೆ


ಮೂಡುಬಿದಿರೆ: ಸಾಂಪ್ರದಾಯಿಕ ಸಂಗೀತ ಜನಪದ ವಾದ್ಯ ಕಲಾವಿದರ ಸಂಘ (ರಿ) ಮೂಡುಬಿದಿರೆ ಇದರ 12ನೇ ವಷ೯ದ ವಾಷಿ೯ಕ ಮಹಾಸಭೆಯು ಸಮಾಜ ಮಂದಿರದಲ್ಲಿ ಭಾನುವಾರ ನಡೆಯಿತು. 

ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುದಶ೯ನ್ ಎಂ. ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಲಾವಿದರು ಮುಖ್ಯವಾಹಿನಿಗೆ ಬರಬೇಕು. ಸಂಘಟನೆಗಳು ವಿಘಟನೆಯಾಗದೆ ಪರಸ್ಪರ ಹೊಂದಾಣಿಕೆಯೊಂದಿಗೆ ಸಾಗಿದಾಗ ಯಶಸ್ಸು ಸಾಧ್ಯ ಎಂದು ಹೇಳಿದರು.


ನೋಟರಿ, ಮೂಡುಬಿದಿರೆ ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷೆ ಶ್ವೇತಾ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಅಭಿವೃದ್ಧಿಗೆ ಸಂಘಟನೆಯ ಸದಸ್ಯರು ಜತೆಯಾಗಿರಬೇಕು. ಸಂಘದ ಸದಸ್ಯರಿಗೆ ತೊಂದರೆಯಾದಾಗ  ಸಂಘಟನೆ ಒಗ್ಗಟ್ಟಾಗಿ ಪರಿಹರಿಸಬೇಕು. ಇಂದು ಆರೋಗ್ಯದ ಸಮಸ್ಯೆಗಳು ಪ್ರತಿಯೊಬ್ಬರಿಗೂ ಕಾಡುತ್ತಿವೆ ಆದ್ದರಿಂದ ಕಲಾವಿದರು ಆರೋಗ್ಯ ವಿಮೆಗಳನ್ನು ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಅಶಕ್ತ ಕಲಾವಿದರಿಗೆ ನೆರವು:

ಅನಾರೋಗ್ಯ ಹೊಂದಿರುವ ಕಲಾವಿದರಾದ ಬಜ್ಪೆ ಸುಂದರ ಶೇರಿಗಾರ್ ಮತ್ತು ಗಂಗಾಧರ ಎಡಪದವು ಅವರಿಗೆ ನೆರವು ನೀಡಲಾಯಿತು. 

ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. 

ಸಂಘದ ಅಧ್ಯಕ್ಷ ಸುರೇಶ್ ದೇವಾಡಿಗ, ಗೌರವಾಧ್ಯಕ್ಷ ಕೇಶವ ಶೆಟ್ಟಿಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲಕ್ಷ್ಮೀನಾರಾಯಣ ನಾಯಕ್ ಸ್ವಾಗತಿಸಿ ಕಾಯ೯ಕ್ರಮ ನಿರೂಪಿಸಿದರು. ಶ್ರೀ ಲಕ್ಷ್ಮಿ ಪ್ರಾಥಿ೯ಸಿದರು. ಉಪನ್ಯಾಸಕಿ ವಿನುತಾ ರೈ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article