ಪತ್ರಕರ್ತ ಬಿ.ಕೆ. ಅಶ್ರಫ್ ವಾಲ್ಪಾಡಿ ಸಹಿತ ಮೂಡುಬಿದಿರೆಯ 18 ಮಂದಿ ಸಾಧಕರಿಗೆ ಸಮಾಜಮಂದಿರ ಗೌರವ

ಪತ್ರಕರ್ತ ಬಿ.ಕೆ. ಅಶ್ರಫ್ ವಾಲ್ಪಾಡಿ ಸಹಿತ ಮೂಡುಬಿದಿರೆಯ 18 ಮಂದಿ ಸಾಧಕರಿಗೆ ಸಮಾಜಮಂದಿರ ಗೌರವ


ಮೂಡುಬಿದಿರೆ: ಪತ್ರಕರ್ತ, ಸಂಘಟಕ ಬಿ.ಕೆ. ಅಶ್ರಫ್ ವಾಲ್ಪಾಡಿ ಸಹಿತ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಮೂಡುಬಿದಿರೆಯ 18 ಮಂದಿ ಸಾಧಕರನ್ನು ಈ ಬಾರಿಯ ಸಮಾಜ ಮಂದಿರದ ಗೌರವ ಪುರಸ್ಕಾರ -2025ಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸಮಾಜ ಮಂದಿರದ ಸಭಾದ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಐದು ದಿನಗಳ ದಸರಾದ ಉತ್ಸವದ ಅವಧಿಯಲ್ಲಿ ಹಂತ ಹಂತವಾಗಿ ಸಾಧಕರನ್ನು ಗೌರವಿಸಲಾಗುವುದು.  ವೇ.ಮೂ ಎಂ. ಹರೀಶ್ ಭಟ್ (ಧಾರ್ಮಿಕ), ಆಡ್ಲಿನ್ ಜೆ. ಜತನ್ನ (ಶಿಕ್ಷಣ), ಗೌರಾ ಗೋವರ್ಧನ್ (ಶಿಕ್ಷಣ, ಸಾಹಿತ್ಯ), ಹರ್ಷವರ್ಧನ್ ಪಡಿವಾಳ್ (ಆಹಾರ ಉದ್ಯಮ) ಪಿ. ರಾಜಾರಾಮ ಭಟ್ (ಸಾಹಿತ್ಯ ಸೇವೆ) ಡಾ.ರೇವತಿ ಭಟ್ (ಆರೋಗ್ಯ) ರವಿ ಕೋಟ್ಯಾನ್ (ಛಾಯಾಗ್ರಹಣ) ಸೀತಾರಾಮ ಶೆಟ್ಟಿ ತೋಡಾರು (ವೇದಿಕೆ ವಿನ್ಯಾಸ) ಯಶವಂತ ಎಂ.ಜಿ. (ಸಂಗೀತ), ರಾಜೇಶ್ ಆರ್. ಶ್ಯಾನುಭಾಗ್ (ಛಾಯಾಗ್ರಹಣ) ತಿಲಕ್ ಕುಲಾಲ್ (ಚಿತ್ರ ಕಲೆ) ಅಶ್ರಫ್ ವಾಲ್ಪಾಡಿ (ಕಲೆ, ಪತ್ರಿಕೋದ್ಯಮ) ,ಹೆರಾಲ್ಡ್ ತಾವೋ (ಸಂಗೀತ) ಪ್ರಕಾಶ್ ಅಮೀನ್ (ಯೋಗ ಸಂಸ್ಕೃತಿ), ದಾಮೋದರ ಡಿ.ಸಪಲಿಗ (ಸಮುದಾಯ ಸೇವೆ) ದಿನೇಶ್ ಪೂಜಾರಿ (ಸಮುದಾಯ ಸೇವೆ) ರಾಜೇಶ್ ಒಂಟಿಕಟ್ಟೆ (ಕಲೆ) ಕಿರಣ್ ಕುಮಾರ್ (ಶಿಕ್ಷಣ) ಅವರನ್ನು ಪುರಸ್ಕರಿಸಲಾಗುವುದು ಎಂದು  ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article