
ಇರುವೈಲು ಸಾರ್ವಜನಿಕ ಗಣೇಶೋತ್ಸವ ಸಮಿತಿ: ಅಧ್ಯಕ್ಷರಾಗಿ ಸೋಮಶೇಖರ್, ಕಾರ್ಯದರ್ಶಿಯಾಗಿ ಯತೀಶ್ ಕರ್ಕೇರ ಆಯ್ಕೆ
Monday, September 1, 2025
ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇರುವೈಲು ಇದರ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಸೋಮಶೇಖರ್ ಅಣ್ಣುಕೋಡಿ ಹಾಗೂ ಕಾರ್ಯದರ್ಶಿಯಾಗಿ ಯತೀಶ್ ಕರ್ಕೇರ ತಂಗಿಲ ಅವರು ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಪ್ರಶಾಂತ್ ಆಚಾರ್ಯ, ಉಪಾಧ್ಯಕ್ಷರಾಗಿ ಲೋಕೇಶ್ ಆಚಾರ್ಯ, ಜೊತೆ ಕಾರ್ಯದರ್ಶಿ ಸುರೇಂದ್ರ ಬಂಗಾರಗುಡ್ಡೆ, ಕೋಶಾಧಿಕಾರಿಯಾಗಿ ಪವನ್ ಶೆಟ್ಟಿ, ಜೊತೆ ಕೋಶಾಧಿಕಾರಿ ಮಿಥುನ್ ಕುತ್ಯಾಡಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಾಗೇಶ್ ಅಮೀನ್ ಬಿಯಂದಕೋಡಿ, ಜತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗಿರೀಶ್ ಆಚಾರ್ಯ ಕೊಪ್ಪಳ, ಸಂಘಟನಾ ಕಾರ್ಯದರ್ಶಿಯಾಗಿ ಲೋಕೇಶ್ ಪೂಜಾರಿ ಅಡ್ಕರಪಲ್ಕೆ ಹಾಗೂ ಜತೆ ಸಂಘಟನಾ ಕಾರ್ಯದರ್ಶಿಗಳಾಗಿ ಲಕ್ಷ್ಮಣ ಮಧುವನಗಿರಿ, ಕೃಷ್ಣ ಪೂಜಾರಿ ದೇವರಗುಡ್ಡೆ ಹಾಗೂ ಕೃಷ್ಣ ದೇವಾಡಿಗ ಅಂಬೋಡಿಮಾರು ಅವರು ಲೆಕ್ಕ ಪರಿಶೋಧಕರಾಗಿ ಆಯ್ಕೆಯಾಗಿದ್ದಾರೆಂದು ಸಮಿತಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.