ಶ್ರೀ ಪ್ರಗತಿ ವಿಸ್ತಾರ ಕಾಲೇಜು ಫಾರ್ ಏವಿಯೇಷನ್ ಆಂಡ್ ಮ್ಯಾನೆಜೆಂಟ್ ಕಾಲೇಜಿನಲ್ಲಿ "ಫ್ರೆಶರ್ಸ್ ಡೇ-2025"

ಶ್ರೀ ಪ್ರಗತಿ ವಿಸ್ತಾರ ಕಾಲೇಜು ಫಾರ್ ಏವಿಯೇಷನ್ ಆಂಡ್ ಮ್ಯಾನೆಜೆಂಟ್ ಕಾಲೇಜಿನಲ್ಲಿ "ಫ್ರೆಶರ್ಸ್ ಡೇ-2025"


ಮೂಡುಬಿದಿರೆ : ಪುತ್ತೂರಿನ ಮಾನ್ಯ ಆರ್ಕ್‌ನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಪ್ರಗತಿ ವಿಸ್ತಾರ ಕಾಲೇಜಿನ ವಿದ್ಯಾರ್ಥಿಗಳ ಫ್ರೆಶರ್ ಡೇ (ಆಗಮನ)ಕಾರ್ಯಕ್ರಮವು ಮಹಾವೀರ ವೆಂಚರ್ ಬೊಳ್ವಾರ್ ಸಭಾಂಗಣದಲ್ಲಿ  ಶನಿವಾರದಂದು ನಡೆಯಿತು.  ಸಂಸ್ಥೆಯ ಅಧ್ಯಕ್ಷೆ  ಹೇಮಾವತಿ ಸುದರ್ಶನ್ ಅವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಶುಭ ಹಾರೈಸಿದರು. 

ಸಂಸ್ಥೆಯ ಕಾರ್ಯದರ್ಶಿ  ಗೋಕುಲ್‌ನಾಥ್ ಪಿ. ವಿ.ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ  ಸಂಸ್ಥೆಯ ಹುಟ್ಟು ಹಾಗೂ ಮಹತ್ವವನ್ನು ವಿವರಿಸಿದರು. 


ಶ್ರೀ ಪ್ರಗತಿ ವಿಸ್ತಾರ ಕಾಲೇಜಿನ ಖಜಾಂಜಿ,  ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ  ಸುದರ್ಶನ್ ಮೂಡುಬಿದಿರೆ ಅವರು ಮಾತನಾಡಿ ಪುತ್ತೂರಿನಲ್ಲಿ ಏವಿಯೇಷನ್ ಎನ್ನುವಂತಹ ವಿನೂತನ ಕೋರ್ನ್‌ನ್ನು ಆರಂಭಿಸಿದ್ದೇವೆ. ಅದನ್ನು ಸದುಪಯೋಗ ಪಡಿಸಿಕೊಂಡಿರುವ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದ ಅವರು ಪುತ್ತೂರಿನಲ್ಲಿ ಏವಿಯೇಷನ್ ಕೋರ್ಸ್ ಹಾಗೂ ಕಾಲೇಜನ್ನು ಪ್ರಪ್ರಥಮವಾಗಿ ಪರಿಚಯಿಸಿದ ಹೆಗ್ಗಳಿಕೆ ನಮ್ಮ ಸಂಸ್ಥೆಯ ಕಾರ್ಯದರ್ಶಿಯಾಗಿರುವ ಗೋಕುಲ್‌ನಾಥ್ ಪಿ.ವಿ. ಅವರಿಗೆ ಸಲ್ಲುತ್ತದೆ ಎಂದರು.   

ಕಾಲೇಜಿನ ಪ್ರಾಂಶುಪಾಲರು ಶ್ರೀಮತಿ ಮಾಧವಿ ಮಾತಾನಾಡಿ ಫ್ರೆಶರ್ಸ್ ಡೇ ಕಾರ್ಯಕ್ರಮವು ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳ ಉತ್ತಮ ಭಾಂದವ್ಯವನ್ನು ಬೆಳೆಸುತ್ತದೆ ಹಾಗೂ ಹೊಸ ವಿದ್ಯಾರ್ಥಿಗಳ ಗೊಂದಲವನ್ನು ನಿವಾರಿಸುತ್ತದೆ ಹಾಗೂ ಕಾಲೇಜಿನ ನೀತಿ ರೀತಿಗಳ ಬಗ್ಗೆ ತಿಳಿ ಹೇಳಿದರು. 


ಸಂಸ್ಥೆಯ ಉಪಾಧ್ಯಕ್ಷೆ  ಹೇಮಲತಾ ಗೋಕುಲ್‌ನಾಥ್ ಇವರು ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. 

ಕಾಲೇಜಿನ ಆಡಳಿತ ಅಧಿಕಾರಿ ರಶ್ಮಿತಾ ಎಮ್. ಎಸ್ ಹಾಗೂ ಏವಿಯೇಷನ್ ಟ್ರೈನರ್ ಬಿಂದುಸಾಗರ್  ಶೆಟ್ಟಿ ಹೊಸದಾಗಿ ಆಗಮಿಸಿದಂತಹ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. 

ಇನ್ನೋರ್ವ ಏವಿಯೇಷನ್ ಟ್ರೈನರ್‌ ಅಶ್ವಿತಾ ರೈ ಇವರು ಏವಿಯೇಷನ್ ಕ್ಷೇತ್ರದಲ್ಲಿ ಇರುವ ಕೋರ್ಸ್‌ಗಳು ಮತ್ತು ಉದ್ಯೋಗವಕಾಶಗಳ ಬಗ್ಗೆ ವಿವರಿಸಿದರು.

ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಂದ ನೂತನ ವಿದ್ಯಾರ್ಥಿಗಳಿಗೆ ಗುಂಪು ಸ್ಪರ್ಧೆ ಮತ್ತು ವೈಯಕ್ತಿಕ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ಉಪನ್ಯಾಸಕಿ ರಾನಿಹ ಅಲೀಶಾ ಇವರು ಹಿರಿಯ ವಿದ್ಯಾರ್ಥಿಗಳೊಂದಿಗೆ ಸಹಕರಿಸಿ ಈ ಸ್ಪರ್ಧೆಗಳ ಯಶಸ್ವಿಯಲ್ಲಿ ಪ್ರಮುಖ ಪಾತ್ರವಹಿಸಿದರು.

*ಗಮನ ಸೆಳೆದ ರ್‍ಯಾಂಪ್ ವಾಕ್

ಸಂಸ್ಥೆಯ ನೂತನ ವಿದ್ಯಾರ್ಥಿಗಳಿಗೆ ರ್‍ಯಾಂಪ್ ವಾಕ್ ಸ್ಪರ್ಧೆಯನ್ನು ಆಯೋಜಿಸಿದ್ದು ವಿದ್ಯಾರ್ಥಿಗಳು ವಿವಿಧ ಶೈಲಿಯ ಉಡುಗೆ ತೊಡುಗೆಗಳನ್ನು ಧರಿಸಿ ಪ್ರೇಕ್ಷಕರ ಗಮನ ಸೆಳೆದರು. ಸ್ಪರ್ಧೆಗೆ ತೀರ್ಪುಗಾರರಾಗಿ ಏವಿಯೇಷನ್ ತರಬೇತುದಾರರಾದ ಬಿಂದುಸಾಗ‌ರ್ ಶೆಟ್ಟಿ, ಚೈತನ್ಯ ಹಾಗೂ ಅಶ್ವಿತಾ ರೈ ಇವರು ಸಹಕರಿಸಿದರು.

ಸ್ಪರ್ಧೆಯಲ್ಲಿ ಮಿಸ್ಟರ್ ಫ್ರೆಶರ್ ಆಗಿ ಕುಮಾರ ಅನ್ವಿತ್ ಹಾಗೂ ಮಿನ್ ಫ್ರೆಶರ್ ಆಗಿ ಕುಮಾರಿ ಹರ್ಷಿತಾ ಅವರು ಬಿರುದನ್ನು ತಮ್ಮದಾಗಿಸಿಕೊಂಡರು. ಸಂಸ್ಥೆಯ ವಿದ್ಯಾರ್ಥಿಗಳಿಂದ ಆಕರ್ಷನೀಯ ಹಾಗೂ ಮನೋರಂಜನಾತ್ಮಕ ಸಾಂಸ್ಕೃತಿಕ ವೈವಿಧ್ಯ ನಡೆದಿದ್ದು ನೋಡುಗರ ಉತ್ಸಾಹ ಹೆಚ್ಚಿಸಿತು. ಹಾಗೂ ನೂತನ ವಿದ್ಯಾರ್ಥಿಗಳಾದ ಮಹಮ್ಮದ್ ಹರ್ಷಕ್ ಹಾಗೂ ಹರ್ಷಿತಾ ಕಾಲೇಜಿನ ಅನುಭವವನ್ನು ಹಂಚಿಕೊಂಡರು. 

 ಸಂಸ್ಥೆಯ ವಿದ್ಯಾರ್ಥಿ ಮಹಮ್ಮದ್ ರಿಹಾಮ್  ಅಥಿತಿಗಳನ್ನು ಸ್ವಾಗತಿಸಿದರು. ಹಿರಿಯ ವಿದ್ಯಾರ್ಥಿನಿ ಪವೀಕಾ, ಅವರು ನೂತನ ವಿದ್ಯಾರ್ಥಿಗಳನ್ನು, ಸ್ವಾಗತಿಸಿದರು, ವಿದ್ಯಾರ್ಥಿಗಳಾದ ಹರ್ಷಿತ ಮತ್ತು ತಂಡವು ಪ್ರಾರ್ಥಿಸಿದರು, ಮಹಮ್ಮದ್ ಝಾಹಿದ್ ಇವರು ಧನ್ಯವಾದ ಸಮರ್ಪಿಸಿದರು.  ಉಪನ್ಯಾಸಕ ಅಬ್ದುಲ್ ನಾಸಿರ್ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article