ಕಾರ್ಮಿಕ ಫೆಡರೇಶನ್-ಸಿಐಟಿಯು ವತಿಯಿಂದ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಒತ್ತಾಯಿಸಿ ಉಳ್ಳಾಲ ತಾಲೂಕು ಕಚೇರಿ ಮುಂದೆ ಪ್ರತಿಭಟನೆ

ಕಾರ್ಮಿಕ ಫೆಡರೇಶನ್-ಸಿಐಟಿಯು ವತಿಯಿಂದ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಒತ್ತಾಯಿಸಿ ಉಳ್ಳಾಲ ತಾಲೂಕು ಕಚೇರಿ ಮುಂದೆ ಪ್ರತಿಭಟನೆ


ಮಂಗಳೂರು: ಕಟ್ಟಡ ನಿರ್ಮಾಣ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ, ಕರಾಳ ಲೇಬರ್ ಕೋಡ್ ರದ್ದತಿಗಾಗಿ ಒತ್ತಾಯಿಸಿ ಮತ್ತು ನೇರ ಫಲಾನುಭವಿ ವರ್ಗಾವಣೆ ಆಧಾರಿತ ಕಲ್ಯಾಣ ಯೋಜನೆಗಳ ಜಾರಿಗಾಗಿ ಒತ್ತಾಯಿಸಿ ದೇಶಾದ್ಯಂತ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ವತಿಯಿಂದ ಪ್ರತಿಭಟನಾ ಪ್ರದರ್ಶನ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ಉಳ್ಳಾಲ ತಾಲೂಕು ಸಮಿತಿ ಮತ್ತು ಸಿಐಟಿಯು ವತಿಯಿಂದ ನಾಟೆಕಲ್ ಬಳಿ ಇರುವ ಉಳ್ಳಾಲ ತಾಲೂಕು ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಸೋಮವಾರ ಬೆಳಗ್ಗೆ ನಡೆಯಿತು.


ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಕಾರ್ಮಿಕರು ಶ್ರಮವಹಿಸಿ ಹೋರಾಟ ನಡೆಸಿ ಮಾಡಿರುವಂತಹ ಕಾನೂನಿಂದ ನಾವು ಅಲ್ಪ ಸ್ವಲ್ಪ ಉಸಿರಾಡುತ್ತಿದ್ದೆವು, ಅಂತಹ 29 ಕಾನೂನುಗಳನ್ನು ಕೆಂದ್ರ ಸರಕಾರ ರದ್ದು ಮಾಡಿದ್ದಾರೆ, 56 ಇಂಚಿನ ಎದೆಯುಳ್ಳ ಪ್ರದಾನಿ, ಚೌಕಿದಾರರು ಈ ದೇಶದ ಕೋಟ್ಯಂತರ ಜನರ ಬದುಕಿಗೆ, ದುಡಿಯುವ ವರ್ಗಕ್ಕೆ ಕೊಳ್ಳಿ ಇಡಲು ಹೊರಟಿದ್ದಾರೆ ಎಂದರು.


ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ಉಳ್ಳಾಲ ತಾಲೂಕು ಸಮಿತಿ ಅಧ್ಯಕ್ಷ ಜನಾರ್ಧನ ಕುತ್ತಾರು ಅಧ್ಯಕ್ಷತೆವಹಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ಜಿಲ್ಲಾ ಖಜಾಂಜಿ ಯೋಗೀಶ್ ಜಪ್ಪಿನ ಮೊಗರು, ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್, ಸಿಐಟಿಯು ಉಳ್ಳಾಲ ತಾಲೂಕು ಸಂಚಾಲಕ ಸಂಚಾಲಕ ಯು. ಜಯಂತ್ ನಾಯಕ್, ಜನವಾದಿ ಮಹಿಳಾ ಸಂಘದ ಉಳ್ಳಾಲ ತಾಲೂಕು ಕಾರ್ಯದರ್ಶಿ ಪ್ರಮೋದಿನಿ, ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಜಗದೀಶ್ ದೇರಳೆಕಟ್ಟೆ, ಡಿವೈಎಫ್ ಐ ಜಿಲ್ಲಾ ಕಾರ್ಯದರ್ಶಿ ರಿಝ್ವಾನ್ ಹರೇಕಳ, ಇಬ್ರಾಹಿಂ ಮದಕ, ರಾಮಚಂದ್ರ ಪಜೀರ್, ಬಶೀರ್ ಪಜೀರ್, ಚಂದ್ರ ಶೇಖರ, ವಿನೋದ್ ಬಾಳೆಪುಣಿ, ಜಯರಾಮ ತೇವುಲ, ಬೋಜ ಶೆಟ್ಟಿ ಕುತ್ತಾರ್, ಮಾದವ ಭಂಡಾರಬೈಲ್, ವಲಸೆ ಕಾರ್ಮಿಕ ಸಂಗದ ಕಾರ್ಯದರ್ಶಿ ಮೆಹಬೂಬ್ ಸಾಬ್ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ಉಳ್ಳಾಲ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ್ ಪಿಲಾರ್ ಸ್ವಾಗತಿಸಿದರು, ಖಜಾಂಜಿ ರೋಹಿದಾಸ್ ಭಟ್ನಗರ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article