ಕಂಬಳದ 'ಭೀಷ್ಮ' ಗುಣಪಾಲ ಕಡಂಬ ಸಹಿತ ಪ್ರಮುಖರ ತೇಜೋವಧೆ: ಮುಚ್ಚೂರು ಲೋಕೇಶ್ ಶೆಟ್ಟಿಯನ್ನು ಸಮಿತಿಯಿಂದ ವಜಾಗೊಳಿಸಲು ಕಂಬಳಾಭಿಮಾನಿಗಳ ಆಗ್ರಹ

ಕಂಬಳದ 'ಭೀಷ್ಮ' ಗುಣಪಾಲ ಕಡಂಬ ಸಹಿತ ಪ್ರಮುಖರ ತೇಜೋವಧೆ: ಮುಚ್ಚೂರು ಲೋಕೇಶ್ ಶೆಟ್ಟಿಯನ್ನು ಸಮಿತಿಯಿಂದ ವಜಾಗೊಳಿಸಲು ಕಂಬಳಾಭಿಮಾನಿಗಳ ಆಗ್ರಹ


ಮೂಡುಬಿದಿರೆ: ಜಿಲ್ಲೆಯಲ್ಲಿ ನಡೆದ ವಿವಿಧ ಕಂಬಳದಲ್ಲಿ ನಿರಂತರವಾಗಿ  ಶಿಸ್ತು ಉಲ್ಲಂಘನೆ ಮಾಡುತ್ತಿರುವ, ಸುಮಾರು 10ರಷ್ಟು ಪ್ರಕರಣಗಳಲ್ಲಿ ಕಂಬಳದ ಪ್ರಮುಖರ, ಓಟಗಾರರ ತೇಜೋವಧೆ ಹಾಗೂ ಕಂಬಳದ 'ಭೀಷ್ಮ' ಎಂದೇ ಗುರುತಿಸಿಕೊಂಡಿರುವ ಗುಣಪಾಲ ಕಡಂಬರನ್ನು ನಿರಂತರವಾಗಿ ಟೀಕಿಸುತ್ತಿರುವ  ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾಯ೯ದಶಿ೯ಹಾಗೂ ಸ್ವಯಂ ಘೋಷಿತ ರಾಜ್ಯ ಕಂಬಳ ಅಸೋಶಿಯೇಶನ್‌ ನ ಕೋಶಾಧಿಕಾರಿ ಮುಚ್ಚೂರು ಲೋಕೇಶ್ ಶೆಟ್ಟಿಯನ್ನು ಎರಡೂ ಸಮಿತಿಯಿಂದ ವಜಾ ಮಾಡಬೇಕೆಂದು  ಕಂಬಳ ಅಭಿಮಾನಿಗಳ ಆಗ್ರಹಿಸಿದರು. 


ಕಂಬಳ ಕ್ಷೇತ್ರದ ಹಿರಿಯರಾದ ಗುಣಪಾಲ ಕಡಂಬ ಅವರಿಗೆ ಮಂಗಳೂರು ಕಂಬಳದಲ್ಲಿ ಮಾಡಿರುವ ಅವಹೇಳನವನ್ನು ಖಂಡಿಸಿ ''ನ್ಯೂ ಪಡಿವಾಳ್ಸ್" ಕೋಣಗಳ ಯಜಮಾನ ಹಷ೯ವಧ೯ನ್ ಪಡಿವಾಳ್ ನೇತೃತ್ವದಲ್ಲಿ ಮೂಡುಬಿದಿರೆ ಸಮಾಜಮಂದಿರದಲ್ಲಿ ಶುಕ್ರವಾರ ಸಾಯಂಕಾಲ ನಡೆದ ಕಂಬಳಾಭಿಮಾನಿಗಳ ಸಭೆಯಲ್ಲಿ ಲೋಕೇಶ್ ಶೆಟ್ಟಿಯನ್ನು ವಜಾಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.

ಕಂಬಳದ ಎಲ್ಲ ವ್ಯವಸ್ಥಾಪಕರನ್ನು, ಕೋಣಗಳ ಎಲ್ಲ ಯಜಮಾನರನ್ನು ಜಿಲ್ಲಾ ಕಂಬಳ ಸಮಿತಿಯಲ್ಲಿ ಶುಲ್ಕರಹಿತವಾಗಿ ಸದಸ್ಯತ್ವ ನೀಡಬೇಕು. ಜಿಲ್ಲಾ ಕಂಬಳ ಸಮಿತಿ ಹಾಗೂ ರಾಜ್ಯ ಕಂಬಳ ಅಸೋಶಿಯೇಶನ್ ಪುನರ್ ರಚನೆಯಾಗಬೇಕೆನ್ನುವ ಆಗ್ರಹಗಳು ಸಭೆಯಲ್ಲಿ ಕೇಳಿಬಂತು.

ಬಹಿರಂಗ ಕ್ಷಮಾಪಣೆಗೆ ಆಗ್ರಹ: 

ಗುಣಪಾಲ ಕಡಂಬರನ್ನು ಅವಹೇಳನ ಮಾಡಿರುವ  ಲೋಕೇಶ್ ಶೆಟ್ಟಿ ಮಿಯ್ಯಾರು ಕಂಬಳದಲ್ಲಿ ಬಹಿರಂಗ ಕ್ಷಮಾಪಣೆ ಕೇಳಬೇಕು. ಮುಂದೆ ಕಡಂಬರು ಮಾತ್ರವಲ್ಲ ಕಂಬಳ ಕ್ಷೇತ್ರದ ಯಾವುದೇ ವ್ಯಕ್ತಿಗೆ ಅವಮಾನವಾದಲ್ಲಿ ತೀವ್ರ ರೀತಿಯ ಹೋರಾಟ ಮಾಡುತ್ತೇವೆ ಎನ್ನುವ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. 

ಹೊಕ್ಕಾಡಿಗೋಳಿ ಕಂಬಳ ಆಯೋಜಕ ಅಧ್ಯಕ್ಷ ರಶ್ಮಿತ್ ಶೆಟ್ಟಿ, ಅನಿಲ್ ಶೆಟ್ಟಿ ಬಜ್ಪೆ, ಚಿತ್ತರಂಜನ್ ಭಂಡಾರಿ ಐಕಳ, ಮೂಲ್ಕಿ ಗೌತಮ್ ಜೈನ್, ಕೋಣಗಳ ಯಜಮಾನರುಗಳಾದ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲಿಯಾನ್, ಬೇಲಾಡಿ ಬಾವ ಅಶೋಕ್ ಶೆಟ್ಟಿ, ಖಾಸಿಂ ವೇಣೂರು, ಜಗತ್ಪಾಲ ಶೆಟ್ಟಿ ಹೊಕ್ಕಾಡಿಗೋಳಿ, ಗಣೇಶ್ ನಾಯಕ್ ಪಂಡಿತ್, ಪದವು ಕಾನಡ್ಕದ ಡೊಲ್ಫಿ ಡಿ'ಸೋಜ, ಸಾಣೂರು ಜಗದೀಶ್ ಪೂಜಾರಿ, ನಾಗೇಶ್ ದೇವಾಡಿಗ ಸುರತ್ಕಲ್ ತಡಂಬೈಲು ಸುರೇಶ್ ಶೆಟ್ಟಿ ಹರಿಮೀನಾಕ್ಷಿ ದೋಟ, ಸುಬ್ರಹ್ಮಣ್ಯ ಪ್ರಭು ಸುರತ್ಕಲ್, ಕಂಬಳ ಅಕಾಡೆಮಿಯ ಸುರೇಶ್ ಕೆ. ಪೂಜಾರಿ, ಸುಭಾಶ್ಚಂದ್ರ ಚೌಟ, ಜ್ವಾಲ ಪ್ರಸಾದ್, ಜೋನ್  ಸಿರಿಲ್ ಡಿ'ಸೋಜ, ಕಂಬಳ ಓಟಗಾರ ಶ್ರೀನಿವಾಸ ಗೌಡ, ಪ್ರಧಾನ ತೀರ್ಪುಗಾರರಾದ ಎಡ್ತೂರು ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article