
ರಾತ್ರಿಯೇ ರಸ್ತೆ ಸ್ವಚ್ಛತೆ: 56 ಮಂದಿ ಪೌರ ಕಾಮಿ೯ಕರಿಗೆ ಮಿಥುನ್ ರೈ ಗೌರವ
Tuesday, September 2, 2025
ಮೂಡುಬಿದಿರೆ: ಇಲ್ಲಿನ ಸಾವ೯ಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ನಡೆದ 62ನೇ ವಷ೯ ಗಣಪತಿಯ ವಿಸಜ೯ನಾ ಮೆರವಣಿಗೆ ಸಂದಭ೯ದಲ್ಲಿ ಬಿದ್ದಿರುವ ತ್ಯಾಜ್ಯಗಳನ್ನು ರಾತ್ರಿಯೇ ಗುಡಿಸಿ ಸ್ವಚ್ಛಗೊಳಿಸಿರುವ ಪುರಸಭೆಯ 56 ಮಂದಿ ಪೌರ ಕಾಮಿ೯ಕರರನ್ನು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರು ಮಂಗಳವಾರ ಪುರಸಭೆಯಲ್ಲಿ ಗೌರವಿಸಿದರು.
ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ., ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಕಾಯ೯ದಶಿ೯ ಪುರಂದರ ದೇವಾಡಿಗ, ನಗರ ಕಾಂಗ್ರೆಸ್ ಅಧ್ಯಕ್ಷ ಜೊಸ್ಸಿ ಮಿನೇಜಸ್, ಪುರಸಭಾ ಸದಸ್ಯರಾದ ಪಿ.ಕೆ. ಥೋಮಸ್, ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು, ಇಕ್ಬಾಲ್ ಕರೀಂ, ರೂಪಾ ಸಂತೋಷ್ ಶೆಟ್ಟಿ, ಶಕುಂತಳಾ ದೇವಾಡಿಗ, ಮಮತಾ ಆನಂದ್, ಯುವ ಕಾಂಗ್ರೆಸ್ ಅಧ್ಯಕ್ಷ ಅನೀಶ್ ಡಿ’ಸೋಜ, ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ಮುಡಾ ಸದಸ್ಯ ಸತೀಶ್ ಭಂಡಾರಿ ಉಪಸ್ಥಿತರಿದ್ದರು.