ಮೂಡುಬಿದಿರೆ: ಸೆ.9-15 ವರೆಗೆ ಜೇಸಿ ಸಪ್ತಾಹ

ಮೂಡುಬಿದಿರೆ: ಸೆ.9-15 ವರೆಗೆ ಜೇಸಿ ಸಪ್ತಾಹ


ಮೂಡುಬಿದಿರೆ: ಇಲ್ಲಿನ ತ್ರಿಭುವನ್ ಜೇಸಿಸ್ ವತಿಯಿಂದ ಸೆ.9 ರಿಂದ 15ರವರೆಗೆ ಜೇಸಿ ಸಪ್ತಾಹ ನಡೆಯಲಿದ್ದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಜೇಸಿಸ್ ಅಧ್ಯಕ್ಷೆ ವರ್ಷಾ ಕಾಮತ್ ಹೇಳಿದರು.

ಅವರು ಸೋಮವಾರ ಪ್ರೆಸ್‌ಕ್ಲಬ್‌ನಲ್ಲಿ ಈ ಕುರಿತು ಮಾಹಿತಿ ನೀಡಿದರು.

ಸೆ.9 ರಂದು ಜೇಸಿ ಕುರಿತು 10 ಮಂದಿ ರಚಿಸಿದ ರೀಲ್ಸ್ ಬಿಡುಗಡೆಗೊಳ್ಳಲಿದೆ. ಸೆ.10 ರಂದು ಮಹಾವೀರ ಕಾಲೇಜಿನಲ್ಲಿ ನಿರುದ್ಯೋಗಿಗಳಿಗೆ ವೃತ್ತಿಪರ ಕೌಶಲ್ಯ ಬೆಳೆಸಿಕೊಳ್ಳುವ ಬಗ್ಗೆ ತರಬೇತಿ, ಸೆ.11 ರಂದು ಮೊಡರ್ನ್ ಡೆಂಟಲ್ ಕ್ಲಿನಿಕ್‌ನಲ್ಲಿ ದಂತ ತಪಾಸಣಾ ಶಿಬಿರ, ಧವಳಾ ಕಾಲೇಜಿನಲ್ಲಿ ಶಟಲ್ ಬ್ಯಾಡ್ಮಿಂಟಲ್ ಸ್ಪರ್ಧೆ ಸೆ.12 ರಂದು ನ್ಯೂದುರ್ಗಾ ಡಿಜಿಟಲ್ಸ್‌ನಲ್ಲಿ ಫ್ಯಾಶನ್‌ನನ್ನು ವೃತ್ತಿಪರವಾಗಿ ರೂಪಿಸುವ ನಿಟ್ಟಿನಲ್ಲಿ ಮೇಕಪ್ ಕಲಾವಿದೆ ಸನಿಹಾ ಪೈ ಅವರಿಂದ ಮಾಹಿತಿ ಕಾರ್ಯಾಗಾರ, ಸೆ.13 ರಂದು ಸಾಮಾಜಿಕ ಜವಾಬ್ದಾರಿ ಕುರಿತು ಜಾಗೃತಿ ಅಭಿಯಾನ, ಸೆ.14 ರಂದು ಯುವಜನತೆಯನ್ನು ಜೇಸಿ ಆಂದೋಲನದಲ್ಲಿ ತೊಡಗಿಸಿಕೊಳ್ಳುವ ಕುರಿತು ಸದಸ್ಯತ್ವ ಅಭಿಯಾನ, ಸೆ.15 ರಂದು ಸಮಾರೋಪ ಸಮಾರಂಭವು ಸಮಾಜಮಂದಿರದಲ್ಲಿ ಜರಗಲಿದೆ.

ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ಟ್ರಸ್ಟಿ ಶರತ್ ಗೋರೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕಾರ್ಯಕ್ರಮದ ಬಳಿಕ ಸ್ಟೆಪ್‌ಆಪ್ ಡ್ಯಾನ್ಸ್ ಅಕಾಡೆಮಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್, ಸುನಿಲ್ ಕುಮಾರ್, ಶಾಂತಲಾ ಎಸ್. ಆಚಾರ್ಯ, ಪ್ರದೀಪ್ ಕುಮಾರ್, ಕಾರ್ಯದರ್ಶಿ ಶ್ರವಣ್ ಕುಮಾರ್, ಕಾರ್ಯಕ್ರಮ ಸಂಯೋಜಕ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article