ತರಬೇತಿಯಲ್ಲಿ ಎಲ್ಲಾ ಸದಸ್ಯರು ಉತ್ಸಾಹದಿಂದ ತೊಡಗಿಸಿಕೊಳ್ಳಬೇಕು: ರಾಜು
ದರೆಗುಡ್ಡೆ ಗ್ರಾಮಪಂಚಾಯತ್ ಮಟ್ಟದ ಸೋಮನಾಥೇಶ್ವರ ಸಂಜೀವಿನಿ ಮಾದರಿ ಒಕ್ಕೂಟ(ರಿ.)ದ ಸದಸ್ಯರಿಗಾಗಿ ಮಂಗಳವಾರ ಆರಂಭಗೊಂಡ ನಾಲ್ಕುದಿನಗಳ ವಾರ್ಷಿಕ ಕ್ರಿಯಾಯೋಜನೆಯ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ಸ್ವಾವಲಂಬನೆಗೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದ್ದು, ಒಕ್ಕೂಟದ ಸದಸ್ಯರು ಈ ನಿಟ್ಟಿನಲ್ಲಿ ಗಮನಹರಿಸುವಂತೆ ಅವರು ಕರೆನೀಡಿದರು.
ಜಿಲ್ಲಾ ಸಂಪನ್ಮೂಲ ವ್ಯಕ್ತಿ ಮೌನೇಶ ವಿಶ್ವಕರ್ಮ ರವರು ಮಾತನಾಡಿ, ಗುರುತಿಸಲಾದ ಮಾದರಿ ಒಕ್ಕೂಟಗಳಿಗೆ ಮೊದಲ ಹಂತದಲ್ಲಿ 12 ದಿನಗಳಲ್ಲಿ ನೀಡಲಾದ ದೂರದೃಷ್ಟಿ ಯೋಜನೆಯ ತರಬೇತಿಯ ಮುಂದುವರಿದ ಭಾಗವಾಗಿ, ವಾರ್ಷಿಕ ಕ್ರಿಯಾಯೋಜನೆಯ ತರಬೇತಿ ನೀಡಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷೆ ಜಯಲಕ್ಷ್ಮೀ ಯವರು ಮಾತನಾಡಿ,ಒಕ್ಕೂಟದ ಬಲವರ್ಧನೆ ವಿಚಾರದಲ್ಲಿ ಈ ತರಬೇತಿಗೆ ಅತ್ಯಂತ ಮಹತ್ವವಿದೆ. ಸಮಯಪ್ರಜ್ಞೆ ಮೆರೆಯುವುದರ ಜೊತೆಗೆ ಈ ತರಬೇತಿಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳೋಣ ಎಂದರು.
ವಲಯ ಮೇಲ್ವಿಚಾರಕಿ ಪ್ರಜ್ವತಾ, ಒಕ್ಕೂಟದ ಕಾರ್ಯದರ್ಶಿ ಸವಿತಾ, ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ಪ್ರೇಮ ಬಿಆರ್ ಪಿ, ಕುಶಾಲ, ಬಿಆರ್ ಪಿ ಪಿಆರ್ ಐ ಸುಮಲತಾ, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಸಂಘದ ಸದಸ್ಯರು ಹಾಗೂ ಒಕ್ಕೂಟದ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.
ಕೃಷಿಸಖಿ ಸುಕನ್ಯಾ ಪ್ರಾರ್ಥಿಸಿದರು. ಎಲ್ ಸಿ ಆರ್ ಪಿ ಸುನಿತಾರವರು ಸ್ವಾಗತಿಸಿದರು. ಪಶುಸಖಿ ದೀಕ್ಷಿತಾ ವಂದಿಸಿದರು. ಎಂಬಿಕೆ ಮಾನಸ ಕಾರ್ಯಕ್ರಮ ನಿರೂಪಿಸಿದರು.