‘ಹೊಸ ತಂತ್ರಜ್ಞಾನದೊಂದಿಗೆ ಗಣಿತ ಏಕೀಕರಣ’: ಕಾರ್ಯಗಾರ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿದ್ಯಾಸಂಸ್ಥೆಯ ಅಧ್ಯಕ್ಷ ಹಾಗೂ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಎನ್. ವಿನಯ ಹೆಗ್ಡೆ ಮಾತನಾಡಿ, ಶಿಕ್ಷಣದಲ್ಲಿ ತಂತ್ರಜ್ಞಾನದ ಪರಿವರ್ತಕ ಪಾತ್ರವನ್ನು ವಿವರಿಸುತ್ತಾ, ಆಧುನಿಕ ಪರಿಕರಗಳು ಮತ್ತು ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಶಿಕ್ಷಕರನ್ನು ಒತ್ತಾಯಿಸಿದ ಅವರು ಡಿಜಿಟಲ್ ಯುಗದೊಂದಿಗೆ ಹೆಜ್ಜೆಹಾಕುತ್ತಾ ತಂತ್ರಾಜ್ಞಾನಗಳನ್ನು ಅಭ್ಯಸಿಸಿ, ಶಿಕ್ಞಣದಲ್ಲಿ ಅಳವಡಿಸಿಕೊಂಡಾಗ ಶಿಕ್ಷಕರು ಇನ್ನೂ ಸಬಲರಾಗುವಿರಿ ಎಂದು ಹೇಳಿದರು.
ನಿಟ್ಟೆಯ ಎನ್‌ಎಂಎಎಂಐಟಿಯ ಎಲೆಕ್ಟ್ರಿಕಲ್ ಮತ್ತು ಎಲೆಕ್ಟಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಸೂರ್ಯನಾರಾಯಣ ಕೆ. ಮಾತನಾಡಿ, ಸಾಂಪ್ರದಾಯಿಕ ವಿಧಾನವನ್ನು ಮೀರಿ ಬೋಧನಾ ಅಭ್ಯಾಸದಲ್ಲಿ ನಾವೀನ್ಯತೆಯ ಅಗತ್ಯತೆಯ ಬಗ್ಗೆ ಹೇಳಿ, ಕುತೂಹಲಕಾರಿಯಾದ ತೊಡಗಿಸಿಕೊಳ್ಳುವ ಹೊಸ ತಂತ್ರಜ್ಙಾನವನ್ನು ಹುಟ್ಟುಹಾಕಿ ಶಿಕ್ಷಣದಲ್ಲಿ ಅಳವಡಿಸಿಕೊಳ್ಳಲು ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪುಷ್ಪರಾಜ ಚೌಟರವರು ಕಾರ್ಯಾಗಾರದಲ್ಲಿ ಭಾಗವಹಿಸುತ್ತಿರುವ ಎಲ್ಲಾ ಶಿಕ್ಷಕರಿಗೂ ಶುಭ ಹಾರೈಸಿದರು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ 18 ಸಿಬಿಎಸ್‌ಇ ಶಾಲೆಗಳ ಗಣಿತ ಶಿಕ್ಷಕರು ಸೆ.೮ ಹಾಗೂ 9 ರಂದು ನಡೆಯುವ ಈ ಕಾರ್ಯಾಗಾರದಲ್ಲಿ ಪಾಲುಗೊಳ್ಳುತ್ತಿದ್ದಾರೆ.
ಶಾಲಾ ಪ್ರಾಂಶುಪಾಲೆ ಶ್ರೀಲತಾ ರಾವ್ ಸ್ವಾಗತಿಸಿ, ಸ್ಮಿತಾ ಎಚ್.ಎಂ. ವಂದಿಸಿದರು. ಸಿರಿ ಉಡುಪ ಕಾರ್ಯಾಕ್ರಮವನ್ನು ನಿರೂಪಿಸಿದರು.
