ಅನುವಾದದ ಮೂಲಕ ಭಾಷೆ-ಸಂಸ್ಕೃತಿಗಳ ನಡುವೆ ಕೊಡುಕೊಳುಗೆ ನಡೆಯುತ್ತದೆ

ಅನುವಾದದ ಮೂಲಕ ಭಾಷೆ-ಸಂಸ್ಕೃತಿಗಳ ನಡುವೆ ಕೊಡುಕೊಳುಗೆ ನಡೆಯುತ್ತದೆ


ಮಂಗಳೂರು: ಅನುವಾದದ ಮೂಲಕ ಭಾಷೆ-ಸಂಸ್ಕೃತಿಗಳ ನಡುವೆ ಕೊಡುಕೊಳುಗೆ ನಡೆಯುತ್ತದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಪ್ರಾಜೆಕ್ಟ್ಸ್ ಅಂಡ್ ಎನ್‌ಯುಟೆಕ್ ನಿರ್ದೇಶಕಿ ಪ್ರೊ. ಡಾ. ಇಂದ್ರಾಣಿ ಕರುಣಾಸಾಗರ್ ಹೇಳಿದರು.

ಅವರು ಇಂದು ನಗರದ ನಿಟ್ಟೆ ವಿಶ್ವವಿದ್ಯಾನಿಲಯದ ಡಾ. ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದಲ್ಲಿ ನಡೆದ ಎರಡು ದಿನದ ಅನುವಾದ ಕಾರ್ಯಾಗಾರ ‘ಗೆಯ್ಮೆದ ಕಳ’ವನ್ನು ಉದ್ಘಾಟಿಸಿ ಮಾತನಾಡಿದರು.


ಪ್ರಾಚೀನ ಹಾಗೂ ಶ್ರೀಮಂತವಾಗಿರುವ ತಮಿಳು ಭಾಷೆಯ ಶಾಸ್ತ್ರೀಯ ಕಾವ್ಯಗಳು ತುಳು ಹಾಗೂ ಕೊಂಕಣಿ ಭಾಷೆಗಳಿಗೆ ಅನುವಾದಗೊಳ್ಳುತ್ತಿರುವುದು ತಮಿಳು ಭಾಷೆಯ ಸಂಸ್ಕೃತಿ ಪರಿಚಯ ಹಾಗೂ ಈ ಭಾಷೆಗಳ ಸಾಹಿತ್ಯ ವೃದ್ಧಿಗೆ, ಸಂಶೋಧನಾ ಕಾರ್ಯಗಳಿಗೆ ಪ್ರೋತ್ಸಾಹದಾಯಕವೆಂದು ತಿಳಿಸಿದ ಅವರು ಹಿಂದಿನ ಕಾಲದ ಆಹಾರ ಪದ್ಧತಿ, ನಡವಳಿಕೆಗಳು ಅರ್ಥಪೂರ್ಣವಾದವು ಹಾಗೂ ವೈಜ್ಞಾನಿಕ ಹಿನ್ನೆಲೆ ಇರುವಂತಹುದು ಎಂದು ಉಲ್ಲೇಖಿಸಿದರು.

ಮುಖ್ಯ ಅತಿಥಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಹಾಗೂ ತುಳು ಬದುಕು ವಸ್ತುಸಂಗ್ರಹಾಲಯ ಅವಳಿ ಸಂಸ್ಥೆಗಳ ನಿರ್ದೇಶಕ ಪ್ರೊ. ತುಕಾರಾಮ್ ಪೂಜಾರಿ ಅವರು ಇತಿಹಾಸ ತಿಳಿಯದವನು ಇತಿಹಾಸ ನಿರ್ಮಿಸಲಾರ ಎಂದು ಉಲ್ಲೇಖಿಸಿ, ಪ್ರಾಮಾಣಿಕವಾಗಿ ಹಿಂದಿನ ಕಾಲಘಟ್ಟದ ಸ್ಥಿತಿಯನ್ನು ಇಂದಿನವರಿಗೆ ಅರ್ಥ ಮಾಡಿಸುವುದು ಬಹು ಅಗತ್ಯವೆಂದು ಹೇಳಿದರು.

ಪ್ರೊ. ಡಾ. ಕರುಣಾಸಾಗರ್ ಎರಡು ದಿನಗಳ ಕಾಲ ನಡೆಯಲಿರುವ ಅನುವಾದ ಕಾರ್ಯಕ್ಕೆ ಶುಭ ಹಾರೈಸಿದರು. ಅನುವಾದಕರ ತಂಡದ ಜ್ಯೋತಿ ಮಹಾದೇವ್ ಉಪಸ್ಥಿತರಿದ್ದರು. 

ಕೇಂದ್ರದ ಸಂಯೋಜಕಿ ಡಾ. ಸಾಯಿಗೀತಾ ಸ್ವಾಗತಿಸಿ, ಕೇಂದ್ರದಲ್ಲಿ ನಡೆಯುತ್ತಿರುವ ಯೋಜನೆಗಳನ್ನು ಪರಿಚಯಿಸಿದರು. ತುಳು ಅನುವಾದಿತ ತಿರುಕ್ಕುರಳ್‌ನ ದ್ವಿಪದಿಗಳ ಹಾಡುವಿಕೆಯೊಂದಿಗೆ ಕಾರ್ಯಕ್ರಮ ಆರಂಭಗೊಳಿಸಿದ ವಿಜಯಲಕ್ಷ್ಮಿ ಕಟೀಲು ಕಾರ್ಯಕ್ರಮ ನಿರೂಪಿಸಿದರು.

ಪುದ್ದರ್: ನಿಟ್ಟೆ ವಿ.ವಿ.ಯ ಡಾ. ಕೆ.ಆರ್. ಶೆಟ್ಟಿ ತುಳು ತಿರ್ಲಜಕೆ ಚಾವಡಿಗೆ ತುಳುಪರಂಪರೆಯಂತೆ ತೆನೆಯನ್ನು ತಂದು, ತೆನೆ ಕಟ್ಟುವ ಹಾಗೂ ಹೊಸಅಕ್ಕಿಯ ಊಟವನ್ನು ಸಂಭ್ರಮಿಸುವ ‘ಪುದ್ದರ್’ ಆಚರಣೆಯಲ್ಲಿ ತುಳುನಾಡಿನ ವೈವಿಧ್ಯಮಯ ಖಾದ್ಯಗಳನ್ನು ಪರಿಚಯಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article