ಮೂಡುಬಿದಿರೆ: ವಾಲ್ಪಾಡಿ ಮದರಸ ವಿದ್ಯಾರ್ಥಿಗಳ 'ಇಶ್ಕೇ ಹಬೀಬ್' ಕಾರ್ಯಕ್ರಮ
Thursday, September 4, 2025
ಮೂಡುಬಿದಿರೆ: ಈದ್ ಮಿಲಾದ್ ಪ್ರಯುಕ್ತ ಹಮ್ಮಿಕೊಳ್ಳಲಾದ ವಾಲ್ಪಾಡಿ ಹಾಗೂ ಮಕ್ಕಿ ಮದರಸ ವಿದ್ಯಾರ್ಥಿಗಳ ಮಿಲಾದ್ ಫೆಸ್ಟ್ 'ಇಶ್ಕೇ ಹಬೀಬ್' ( ಕಲಾ, ಸಾಂಸ್ಕೃತಿಕ) ಕಾರ್ಯಕ್ರಮ ವಾಲ್ಪಾಡಿ ಮಸೀದಿ ವಠಾರದಲ್ಲಿ ಬುಧವಾರ ಸಂಜೆ ನಡೆಯಿತು.
ವಾಲ್ಪಾಡಿ ಮಸೀದಿ ಖತೀಬರಾದ ಅಬ್ಬಾಸ್ ಫೈಝಿ ದಿಡುಪೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ದುವಾ ನೆರವೇರಿಸಿದರು.
ಮಸೀದಿ ಕಮಿಟಿ ಅಧ್ಯಕ್ಷ ಎಂ.ಎಂ.ಶರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಝಕರಿಯಾ ಯೂಸುಫ್, ಗೌರವಾಧ್ಯಕ್ಷ ಮುಹಮ್ಮದ್ ದೋಣಿಬಾಗಿಲು, ಮಕ್ಕಿ ಮಸೀದಿ ಖತೀಬರಾದ ಸಿರಾಜುದ್ದೀನ್ ಫೈಝಿ ಅಲ್ ಮ ಅಬರಿ, ವಾಲ್ಪಾಡಿ ಮುಅಝ್ಝಿನ್ ಹನೀಫ್ ಮುಸ್ಲಿಯಾರ್, ಮಕ್ಕಿ ಮುಅಝ್ಝಿನ್ ಅಬ್ದುಲ್ ಹಮೀದ್ ಮುಸ್ಲಿಯಾರ್, ಜಮಾಲುದ್ದೀನ್ ವಾಲ್ಪಾಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಾಲ್ಪಾಡಿ ಸದರ್ ಅಬ್ದುಲ್ ಹಕೀಮ್ ಅಶ್ರಫಿ ಕಾರ್ಯಕ್ರಮ ನಿರೂಪಿಸಿದರು.
ಶಮೀಮ್ ಹುದವಿ ದಾರುನ್ನೂರ್, ಶಾಹುಲ್ ಹಮೀದ್ ಕಾಶಿಪಟ್ಣ ತೀರ್ಪುಗಾರರಾಗಿ ಭಾಗವಹಿಸಿದ್ದರು.