ಮೂಡುಬಿದಿರೆ: ಟೈಲರ್, ಹೊಲಿಗೆ ಶಿಕ್ಷಕ ಕೆ. ಜೀವಂಧರ ಕುಮಾರ್ ಜೈನ್ (79) ಕರ್ಪೆ ಬಾವ ಗುತ್ತು ಇವರು ಬುಧವಾರ ನಿಧನ ಹೊಂದಿದರು.
ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಅವರು ಜೈನ್ ಪೇಟೆಯಲ್ಲಿ ಸುದೀರ್ಘ ಕಾಲ ಟೈಲರ್ ಆಗಿ ‘ದರ್ಶ್ ಟೈಲರ್ಸ್’ ನಡೆಸುತ್ತಾ ಮೂಡುಬಿದಿರೆಯ ಹಲವು ಮಂದಿಗೆ ಟೈಲರಿಂಗ್ ಕಲಿಸಿ ಜೀವನೋಪಾಯ ಕಲ್ಪಿಸಿಕೊಟ್ಟಿದ್ದರು.