ಜೆಸಿಐ ಮೂಡಬಿದಿರೆ ತ್ರಿಭುವನ್-ಜೇಸಿ ಸಪ್ತಾಹ: ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ

ಜೆಸಿಐ ಮೂಡಬಿದಿರೆ ತ್ರಿಭುವನ್-ಜೇಸಿ ಸಪ್ತಾಹ: ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ


ಮೂಡುಬಿದಿರೆ: ಜೆಸಿಐ ಮೂಡಬಿದಿರೆ ತ್ರಿಭುವನ್ ಜೇಸಿ ಸಪ್ತಾಹ-PRISM-110 ಅಂಗವಾಗಿ, ಗೇಮ್ ಆನ್ - ಕ್ರೀಡೆ ಮತ್ತು ಆರೋಗ್ಯ ದಿನ ಎಂಬ ವಿಷಯದಡಿ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯನ್ನು ಸೆ. 11ರಂದು 2025ರಂದು ಧವಳಾ ಕಾಲೇಜು ಕ್ಯಾಂಪಸ್ ಶಟಲ್ ಕೋಟ್೯ನಲ್ಲಿ ಆಯೋಜಿಸಲಾಯಿತು.

ಅಧ್ಯಕ್ಷೆ ವರ್ಷಾ ಕಾಮತ್, ಸಪ್ತಾಹದ ಸಂಯೋಜಕ ಸಂಯೋಜಕ ಸುಧಾಕರ್ ಶೆಟ್ಟಿ , ಪೂರ್ವ ಅಧ್ಯಕ್ಷರಾದ ಅಬುಲಾಲ್ ಪುತಿಗೆ, ಮೊಹಮ್ಮದ್ ಅರೀಫ್, ಮಹೇಂದ್ರ ವರ್ಮ ಜೈನ್ ಹಾಗೂ ಉದ್ಯಮಿ ದಿನೇಶ್ ಕಾಮತ್ ಉಪಸ್ಥಿತರಿದ್ದರು.

ಆರು ತಂಡಗಳು ಭಾಗವಹಿಸಿದವವು. ಡಾ. ಜತಿನ್ ಮತ್ತು ವಿನಯಚಂದ್ರ ಸ್ಪರ್ಧೆಯಲ್ಲಿ ವಿಜೇತರಾದರೆ, ಮೊಹಮ್ಮದ್ ಖಲೀಲ್ ಮತ್ತು ಜಯರಾಮ ಕೋಟ್ಯಾನ್ ರನ್ನರ್-ಅಪ್ ಆಗಿ ಹೊರಹೊಮ್ಮಿದರು.

ವಿಜೇತರನ್ನು ಸೆಪ್ಟೆಂಬರ್ 15ರಂದು ಸಮಾಜ ಮಂದಿರದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುತ್ತದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article