ಲಯನ್ಸ್ ಕ್ಲಬ್‌ನಿಂದ ಶಿಕ್ಷಕರ ದಿನಾಚರಣೆ: ನಿವೃತ್ತ ಶಿಕ್ಷಕರಿಗೆ ಸನ್ಮಾನ
ಕ್ಲಬ್ ಅಧ್ಯಕ್ಷ ಲ. ಶಿವಪ್ರಸಾದ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ಶಂಕರ ಭಟ್, ಕೋಟೆಬಾಗಿಲು ಸ. ಉ. ಹಿ.ಪ್ರಾ. ಶಾಲೆಯ ಮೇಬಲ್ ಫೆರ್ನಾಂಡಿಸ್ ಹಾಗೂ ಮಿಜಾರು ಕೆ.ಪಿ.ಎಸ್. ಶಾಲೆಯ ನಾಗೇಶ್ ಎಸ್. ಅವರನ್ನು ಸನ್ಮಾನಿಸಲಾಯಿತು.
ಲಯನ್ಸ್ ವಲಯಾಧ್ಯಕ್ಷ ಜೊಸ್ಸಿ ಮಿನೇಜಸ್, ಹಿರಿಯ ಸದಸ್ಯ ಕೆ. ಶ್ರೀಪತಿ ಭಟ್, ಕ್ಲಬ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ಓಸ್ವಾಲ್ಡ್ ಡಿಕೋಸ್ತ, ಕೋಶಾಧಿಕಾರಿ ಹರೀಶ್ ತಂತ್ರಿ, ನಿಕಟಪೂರ್ವ ಅಧ್ಯಕ್ಷ ಬೊನವೆಂಚರ್ ಮಿನೇಜಸ್, ಕ್ಲಬ್ ಪ್ರಥಮ ಮಹಿಳೆ ಶೋಭಾ ಎಸ್. ಹೆಗ್ಡೆ ಸನ್ಮಾನಿತರನ್ನು ಗೌರವಿಸಿದರು. ಸನ್ಮಾನಿತರು ತಮ್ಮ ಅನುಭವವನ್ನು ಹಂಚಿಕೊಂಡರು.
ಸದಸ್ಯರಾದ ಆಲ್ವಿನ್ ಮಿನೇಜಸ್, ವಿನಯ ಕುಮಾರ್ ಶೆಟ್ಟಿ ಮತ್ತು ಮಾರ್ಕ್ ಮೆಂಡೋನ್ಸಾ ಸನ್ಮಾನ ಪತ್ರ ವಾಚಿಸಿದರು.
ವೈಷ್ಣವಿ ಪ್ರಾರ್ಥಿಸಿದರು. ಅರುಣ್ ಡಿಸಿಲ್ವ ಧ್ವಜವಂದನೆ ನಡೆಸಿದರು. ರಿಚರ್ಡ್ ಕರ್ಡೋಜಾ ಲಯನ್ಸ್ ಧ್ಯೇಯವಾಕ್ಯ ಪಠಿಸಿದರು. ದಯಾನಂದ ನಿರೂಪಿಸಿದ ಕಾರ್ಯಕ್ರಮದಲ್ಲಿ ಓಸ್ವಾಲ್ಡ್ ಡಿಕೋಸ್ತ ವಂದಿಸಿದರು.
