ನಾಲ್ಕನೇ ವರ್ಷದ ಬನ್ನಡ್ಕ ಸಾರ್ವಜನಿಕ ಶಾರದಾ ಮಹೋತ್ಸವ: ಆಮಂತ್ರಣ ಪತ್ರಕೆ ಬಿಡುಗಡೆ-ಚಪ್ಪರ ಮುಹೂರ್ತ
Monday, September 8, 2025
ಮೂಡುಬಿದಿರೆ: ಬನ್ನಡ್ಕ ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿಯ ವತಿಯಿಂದ ನಾಲ್ಕನೇ ವರ್ಷದ ಸಾರ್ವಜನಿಕ ಶಾರದಾ ಮಹೋತ್ಸವ ಆಮಂತ್ರಣ ಪತ್ರಿಕೆಯ ಬಿಡುಗಡೆ ಹಾಗೂ ಚಪ್ಪರ ಮುಹೂರ್ತ ಭಾನುವಾರ ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಬನ್ನಡ್ಕದ ಆಡಳಿತ ಮೊಕ್ತೇಸರ ಸುಕುಮಾರ್ ಬಲ್ಲಾಳ್ ಹಾಗೂ ಎಸ್ ಕೆ ಎಫ್ ನ ಪ್ರಜ್ವಲ್ ಆಚಾರ್ಯ ಆಮಂತ್ರ ಪತ್ರಿಕೆ ಬಿಡುಗಡೆಗೊಳಿಸಿದರು.
ಮಾರ್ನಾಡು ಅನಂತ ಅಸ್ರಣ್ಣ, ಶಾರದ ಮಹೋತ್ಸವ ಸಮಿತಿಯ ಅಧ್ಯಕ್ಷ ಎಂ ದಯಾನಂದ ಪೈ, ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡ್, ಉತ್ಸವದ ಆಡಳಿತ ಮಂಡಳಿಯ ಪದಾಧಿಕಾರಿಗಳು ಕಾರ್ಯಕಾರಿಣಿ ಸಮಿತಿಯ ಸದಸ್ಯರುಗಳು, ಮಹಿಳಾ ಸದಸ್ಯರು ಹಾಗೂ ಊರ ಹಿರಿಯರು ಭಾಗವಹಿಸಿದ್ದರು.