ಹೆದ್ದಾರಿಯಲ್ಲಿ ಬಾಯ್ತೆರೆದು ಕಾಯುತ್ತಿವೆ ಮರಣಗುಂಡಿಗಳು: ಪ್ರಾಣ ಉಳಿಸಲು ರಸ್ತೆಗಳಲ್ಲಿ ವಾಹನ ಚಾಲಕರ ಹರಸಾಹಸ

ಹೆದ್ದಾರಿಯಲ್ಲಿ ಬಾಯ್ತೆರೆದು ಕಾಯುತ್ತಿವೆ ಮರಣಗುಂಡಿಗಳು: ಪ್ರಾಣ ಉಳಿಸಲು ರಸ್ತೆಗಳಲ್ಲಿ ವಾಹನ ಚಾಲಕರ ಹರಸಾಹಸ


ಮೂಡುಬಿದಿರೆ: ಮೂಡುಬಿದಿರೆ-ಧಮ೯ಸ್ಥಳಕ್ಕೆ ಸಾಗುವ ರಾಜ್ಯ ಹೆದ್ದಾರಿಯಲ್ಲಿ ಅಲ್ಲಲ್ಲಿ ದೊಡ್ಡ ದೊಡ್ಡ ಹೊಂಡಗಳು ಸೃಷ್ಟಿಯಾಗಿದ್ದು ಇದರಿಂದಾಗಿ ಜೀವ ಉಳಿಸಿಕೊಳ್ಳಲು ಚಾಲಕರು ವಾಹನಗಳನ್ನು ಹೊಂಡಕ್ಕೆ ಬೀಳದಂತೆ ಹರ ಸಾಹಸ ಮಾಡಿಕೊಂಡು ವಾಹನಗಳನ್ನು ಚಲಾಯಿಸಬೇಕಾದ ಪರಿಸ್ಥಿತಿ ಉಂಟಾಗಿದೆ.


ಮೂಡುಬಿದಿರೆಯಿಂದ ಧಮ೯ಸ್ಥಳಕ್ಕೆ ಸಾಗುವ ದಾರಿಯಲ್ಲಿ ಶ್ರೀ ಮಹಾವೀರ ಕಾಲೇಜು, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳು, ನ್ಯೂ ವೈಬ್ರೆಂಟ್ ಕಾಲೇಜು ಹಾಗೂ ವೇಣೂರಿನಲ್ಲಿ ಐಟಿಐ ಕಾಲೇಜುಗಳಿದ್ದು ಈ  ಸಂಸ್ಥೆಗಳಿಗೆ ಮೂಡುಬಿದಿರೆ ಕಡೆಯಿಂದ ಸಾವಿರಾರು ವಿದ್ಯಾಥಿ೯ಗಳು ಹೋಗಿ ವಿದ್ಯೆಯನ್ನು ಪಡೆಯುತ್ತಿದ್ದಾರೆ.

ವಿದ್ಯಾಥಿ೯ಗಳು, ಉಪನ್ಯಾಸಕರು, ಟೀಚರ್ಸ್ ಳು ಕಾಲೇಜಿನ ಅಥವಾ ಖಾಸಗಿ ಬಸ್ ಗಳಲ್ಲೋ ಅಥವಾ ತಮ್ಮ ದ್ವಿಚಕ್ರ ವಾಹನಗಳಲ್ಲಿಯೋ ಶಾಲಾ ಕಾಲೇಜುಗಳಿಗೆ ಹೋಗಬೇಕಾಗಿದ್ದು ಆಗ ಈ ಹೊಂಡ ಬಿದ್ದಿರುವ ರಸ್ತೆಯಲ್ಲಿ ಜೀವ ಭಯದಿಂದ ಸಾಗಬೇಕಾಗಿದೆ. 

ಹೆಲ್ಮೆಟ್ ಗಳನ್ನು ಧರಿಸದೆ ತಮ್ಮ ದ್ವಿಚಕ್ರ ವಾಹನಗಳಲ್ಲಿ ಅತೀ ವೇಗದಿಂದ ಸಾಗುವ ವಿದ್ಯಾರ್ಥಿಗಳು, ಕಾಲೇಜಿಗೆ ಅಥವಾ ಆಫೀಸುಗಳಿಗೆ ತಡವಾಗುತ್ತದೆ ಬೇಗ ತಲುಪಬೇಕೆಂದು ಅವಸರದಲ್ಲಿ ಸ್ಕೂಟಿಯಲ್ಲಿ ಓಡಾಡುವ ಯುವತಿಯರು ಮತ್ತು ಮಹಿಳಾಮಣಿಗಳು ಈ ಮರಣಗುಂಡಿಗಳಿರುವ ರಸ್ತೆಯಲ್ಲಿ ಜೀವ ಭಯದಿಂದಲೇ ಹೋಗುತ್ತಿದ್ದಾರೆ.

ಕೆಲವು ಕಡೆಯ ತಿರುವಿನ ರಸ್ತೆಗಳಲ್ಲಿ ಮಧ್ಯ ರಸ್ತೆಯವರೆಗೆ ಹೊಂಡಗಳು ಆವರಿಸಿಕೊಂಡಿದ್ದು ಇದರಿಂದ ಬಲಭಾಗದಿಂದ ವಾಹನಗಳು ದಾಟುವಾಗ ಎದುರಿನಿಂದ ಬರುವ ವಾಹನಗಳಿಗೆ ಢಿಕ್ಕಿ ಹೊಡೆಯುವ ಸಾಧ್ಯತೆಯಿದೆ ಮತ್ತು ಈಗಾಗಲೇ ಹಲವು ವಾಹನಗಳು ಢಿಕ್ಕಿಯಾಗುವುದರಲ್ಲಿ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿವೆ. 

ಹೊಂಡಗಳಾಗಿ ಮರಣಕ್ಕೆ ಆಹ್ವಾನ ನೀಡುತ್ತಿರುವ ರಾಜ್ಯ, ರಾಷ್ಟ್ರೀಯ ಹಾಗೂ ಲೋಕೋಪಯೋಗಿ ರಸ್ತೆಗಳನ್ನು ಮುಚ್ಚಿ ಸಾವ೯ಜನಿಕರು ಹಾಗೂ ವಾಹನ ಚಾಲಕರು ಪ್ರಾಣಾಪಾಯವಿಲ್ಲದೆ ರಸ್ತೆಯಲ್ಲಿ ಸಂಚರಿಸುವಂತೆ ಮಾಡಲು ಸಂಬಂಧ ಪಟ್ಟ ಇಲಾಖೆಯವರು ಆದಷ್ಟು ಬೇಗ ಕಾಯ೯ಪ್ರವೃತ್ತರಾಗಬೇಕಾಗಿದೆ ಇದಕ್ಕೆ ಜನಪ್ರತಿನಿಧಿಗಳು ಕೂಡಾ ಸರಕಾರಗಳನ್ನು ಒತ್ತಾಯಿಸುವ ಅಗತ್ಯತೆಯಿದೆ.


2019 ರಿಂದ ವಾಹನ ಸಂಚಾರ ಹೆಚ್ಚಾಗಿದ್ದು ಇದರೊಂದಿಗೆ ನಗರ ವು ಬೆಳೆಯುತ್ತಿರುವುದರ ಜೊತೆಗೆ ರಸ್ತೆ ಬದಿಗಳಲ್ಲಿ ದೊಡ್ಡ ದೊಡ್ಡ ಕಟ್ಟಡ ಮತ್ತು ಮನೆಗಳು ತಲೆ ಎತ್ತುತ್ತಿರುವುದರಿಂದ ಅಲ್ಲಿಗೆ ಹೋಗಲು ರಸ್ತೆಗೆ ಇರುವ ಚರಂಡಿಗಳಿಗೆ ಮಣ್ಣನ್ನು ಹಾಕಿ ದಾರಿ ಮಾಡಿಕೊಂಡಿರುವುದರಿಂದ ಚರಂಡಿಯ ನೀರು ರಸ್ತೆ ಹರಿಯುತ್ತಿದ್ದು ಹಾಗೂ ರಸ್ತೆಯ ಅಭಿವೃದ್ಧಿಗಾಗಿ ಗುಡ್ಡಗಳಾಗಿದೆ ಗುಡ್ಡದ ಮಣ್ಣು ರಸ್ತೆಗೆ ಬರುತ್ತಿರುವುದರಿಂದ ಈ ಸಮಸ್ಯೆ ಆಗುತ್ತಿದೆ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಅಕ್ಷಯ ಜೈನ್.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article