ರಾಜ್ಯ ಹೆದ್ದಾರಿಯಲ್ಲಿ ಹೊಂಡಗಳದ್ದೇ ಕಾರುಬಾರು: ಜೀವ ಉಳಿಸಲು ರಸ್ತೆಗಳಲ್ಲಿ ವಾಹನ ಚಾಲಕರ ಹರಸಾಹಸ
ಹೆಲ್ಮೆಟ್‌ಗಳನ್ನು ಧರಿಸದೆ ತಮ್ಮ ದ್ವಿಚಕ್ರ ವಾಹನಗಳಲ್ಲಿ ಅತೀ ವೇಗದಿಂದ ಸಾಗುವ ವಿದ್ಯಾರ್ಥಿಗಳು, ಕಾಲೇಜಿಗೆ ಅಥವಾ ಆಫೀಸುಗಳಿಗೆ ತಡವಾಗುತ್ತದೆ ಬೇಗ ತಲುಪಬೇಕೆಂದು ಅವಸರದಲ್ಲಿ ಸ್ಕೂಟಿಯಲ್ಲಿ ಓಡಾಡುವ ಯುವತಿಯರು ಮತ್ತು ಮಹಿಳಾಮಣಿಗಳು ಈ ಮರಣಗುಂಡಿಗಳಿರುವ ರಸ್ತೆಯಲ್ಲಿ ಜೀವ ಭಯದಿಂದಲೇ ಹೋಗುತ್ತಿದ್ದಾರೆ.
ಕೆಲವು ಕಡೆಯ ತಿರುವಿನ ರಸ್ತೆಗಳಲ್ಲಿ ಮಧ್ಯ ರಸ್ತೆಯವರೆಗೆ ಹೊಂಡಗಳು ಆವರಿಸಿಕೊಂಡಿದ್ದು ಇದರಿಂದ ಬಲಭಾಗದಿಂದ ವಾಹನಗಳು ದಾಟುವಾಗ ಎದುರಿನಿಂದ ಬರುವ ವಾಹನಗಳಿಗೆ ಢಿಕ್ಕಿ ಹೊಡೆಯುವ ಸಾಧ್ಯತೆಯಿದೆ ಮತ್ತು ಈಗಾಗಲೇ ಹಲವು ವಾಹನಗಳು ಢಿಕ್ಕಿಯಾಗುವುದರಲ್ಲಿ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿವೆ.
ಹೊಂಡಗಳಾಗಿ ಮರಣಕ್ಕೆ ಆಹ್ವಾನ ನೀಡುತ್ತಿರುವ ರಾಜ್ಯ, ರಾಷ್ಟ್ರೀಯ ಹಾಗೂ ಲೋಕೋಪಯೋಗಿ ರಸ್ತೆಗಳನ್ನು ಮುಚ್ಚಿ ಸಾವ೯ಜನಿಕರು ಹಾಗೂ ವಾಹನ ಚಾಲಕರು ಪ್ರಾಣಾಪಾಯವಿಲ್ಲದೆ ರಸ್ತೆಯಲ್ಲಿ ಸಂಚರಿಸುವಂತೆ ಮಾಡಲು ಸಂಬಂಧ ಪಟ್ಟ ಇಲಾಖೆಯವರು ಆದಷ್ಟು ಬೇಗ ಕಾಯ೯ಪ್ರವೃತ್ತರಾಗಬೇಕಾಗಿದೆ ಇದಕ್ಕೆ ಜನಪ್ರತಿನಿಧಿಗಳು ಕೂಡಾ ಸರಕಾರಗಳನ್ನು ಒತ್ತಾಯಿಸುವ ಅಗತ್ಯತೆಯಿದೆ.
2019 ರಿಂದ ವಾಹನ ಸಂಚಾರ ಹೆಚ್ಚಾಗಿದ್ದು ಇದರೊಂದಿಗೆ ನಗರ ವು ಬೆಳೆಯುತ್ತಿರುವುದರ ಜೊತೆಗೆ ರಸ್ತೆ ಬದಿಗಳಲ್ಲಿ ದೊಡ್ಡ ದೊಡ್ಡ ಕಟ್ಟಡ ಮತ್ತು ಮನೆಗಳು ತಲೆ ಎತ್ತುತ್ತಿರುವುದರಿಂದ ಅಲ್ಲಿಗೆ ಹೋಗಲು ರಸ್ತೆಗೆ ಇರುವ ಚರಂಡಿಗಳಿಗೆ ಮಣ್ಣನ್ನು ಹಾಕಿ ದಾರಿ ಮಾಡಿಕೊಂಡಿರುವುದರಿಂದ ಚರಂಡಿಯ ನೀರು ರಸ್ತೆ ಹರಿಯುತ್ತಿದ್ದು ಹಾಗೂ ರಸ್ತೆಯ ಅಭಿವೃದ್ಧಿಗಾಗಿ ಗುಡ್ಡಗಳಾಗಿದೆ ಗುಡ್ಡದ ಮಣ್ಣು ರಸ್ತೆಗೆ ಬರುತ್ತಿರುವುದರಿಂದ ಈ ಸಮಸ್ಯೆ ಆಗುತ್ತಿದೆ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಅಕ್ಷಯ ಜೈನ್.

