ಚಿಕಿತ್ಸೆಗೆ ಆಥಿ೯ಕ ನೆರವು
Wednesday, September 10, 2025
ಮೂಡುಬಿದಿರೆ: ಅನಾರೋಗ್ಯ ಹೊಂದಿರುವ ಅಳಿಯೂರು ನಿವಾಸಿ ಬಾಲಕಿಯೋರ್ವಳ ಚಿಕಿತ್ಸೆಗೆ ತಾಲೂಕು ಪಂಚಾಯತ್ ಮಾಜಿ ಸದಸ್ಯ, ಸಮಾಜ ಸೇವಕ ನವೋದಯ ರುಕ್ಕಯ್ಯ ಪೂಜಾರಿ ಅವರು ಆರ್ಥಿಕ ನೆರವು ನೀಡಿದರು.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಗೆ ಆಸ್ಪತ್ರೆಗೆ ತೆರಳಿ ನೆರವು ನೀಡಿದ್ದು ಮಾತ್ರವಲ್ಲದೆ ಇತರ ದಾನಿಗಳಿಂದಲೂ ಸಹಾಯ ಕೊಡಿಸುವ ಮುತುವರ್ಜಿ ವಹಿಸಿದ್ದಾರೆ.