ವೆಂಕಟರಮಣ ದೇವಳದಲ್ಲಿ ವಿಶೇಷ ಅನಂತ ಚತುರ್ದಶಿ ಆಚರಣೆ
Saturday, September 6, 2025
ಮಂಗಳೂರು: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ‘ಅನಂತ ಚತುರ್ದಶಿ’ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಸ್ವರ್ಣಾಭರಣಗಳೊಂದಿಗೆ ಅಲಂಕರಿಸಿ ವಿಜೃಂಭಣೆಯಿಂದ ಆಚರಿಸಲಾಯಿತು.
ಶ್ರೀ ಅನಂತ ಚತುರ್ದಶಿ ಪ್ರಯುಕ್ತ ಶನಿವಾರ ಪ್ರಾತಃಕಾಲ ಶ್ರೀ ದೇವರ ಪಾರ್ಥನೆ, ಬಳಿಕ ಯಮುನಾ ಪೂಜನ, ಕಲಶ ಪೂರಣ, ನಂತರ ಶ್ರೀ ಅನಂತ ಕಲ್ಪೋಕ್ತ ಪೂಜೆ ನಡೆದು ಮಧ್ಯಾಹ್ನ ಮಂಗಳಾರತಿ, ತದ ನಂತರ ಸಮಾರಾಧನೆ ಜರಗಿತು.
ರಾತ್ರಿ ಗಂಟೆ 8.15ಕ್ಕೆ ಶ್ರೀ ದೇವರ ಪೂಜೆ, ಪ್ರಸಾದ ವಿತರಣೆ ನಡೆಯಿತು.