ರಾಷ್ಟ್ರ ಮಟ್ಟದ ಮಿಸ್ & ಮಿಸೆಸ್ ಇಂಡಿಯಾ ಅಸ್ಟ್ರಲ್ ಸೌಂದಯ೯ ಸ್ಪಧೆ೯: ಜೂನಿಯರ್ ವಿಭಾಗದಲ್ಲಿ ಮೂಡುಬಿದಿರೆಯ ರಹಿನಿ ಪಿ. ಪೂಜಾರಿಗೆ ಪ್ರಥಮ ರನ್ನರ್ ಪ್ರಶಸ್ತಿ
Wednesday, September 10, 2025
ಮೂಡುಬಿದಿರೆ: ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಿಸ್ & ಮಿಸೆಸ್ ಇಂಡಿಯಾ ಅಸ್ಟ್ರಲ್ ಪೇಜೆಂಟ್ಸ್ 2025ರ ಸೌಂದಯ೯ ಸ್ಪಧೆ೯ಯ ಜೂನಿಯರ್ ವಿಭಾಗದಲ್ಲಿ ಮೂಡುಬಿದಿರೆಯ ರಹಿನಿ ಪಿ. ಪೂಜಾರಿ ಪ್ರಥಮ ರನ್ನರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಮೂಡುಬಿದಿರೆಯ ಆಳ್ವಾಸ್ ಸೆಂಟ್ರಲ್ ಸ್ಕೂಲ್ ನ ಏಳನೇ ತರಗತಿಯ ವಿದ್ಯಾಥಿ೯ಯಾಗಿರುವ ರಹಿನಿ ಅವರು ಮೂಡುಬಿದಿರೆಯ ಸಂಪಿಗೆ ನಿವಾಸಿ, ಕುಂದಾಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಪೂಜಾರಿ ಸೌಮ್ಯಮಣಿ ದಂಪತಿಯ ಪುತ್ರಿ.
ಮಂಗಳೂರಿನ ಫಾತ್ ವೆ ಮಾಡೆಲಿಂಗ್ ಕ್ಲಾಸ್ ದೀಪಕ್ ಗಂಗೂಲಿ ಹಾಗೂ ಮೂಡುಬಿದಿರೆಯ ಎಂಜೆ ಸ್ಟೆಪ್ ಅಫ್ ಡ್ಯಾನ್ಸ್ ಅಕಾಡೆಮಿಯ ಅನೀಶ್ ಅವರ ವಿದ್ಯಾಥಿ೯ಯಾಗಿದ್ದಾರೆ.
