ಮುಗೇರಕಳ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ

ಮುಗೇರಕಳ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ


ಮೂಡುಬಿದಿರೆ: ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಗೇರಕಳ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಸಭೆಯ ಅದ್ಯಕ್ಷತೆಯನ್ನು ಸುಜಾತಾ ಅವರು ವಹಿಸಿದ್ದರು. ಸಮುದಾಯ ಆರೋಗ್ಯಾಧಿಕಾರಿ  ಸಂತೋಷ್ ಅವರು ಪೌಷ್ಟಿಕ ಆಹಾರದ ಬಗ್ಗೆ  ಮಾಹಿತಿಯನ್ನು ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಲಿಂಗ ತಜ್ಞೆ  ವಿಶಾಲಾಕ್ಷಿ  ಅವರು, ಪೋಷಕರು ಮಕ್ಕಳ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮತ್ತು ಜವಾಬ್ದಾರಿಗಳ ಬಗ್ಗೆ ವಿವರಿಸಿದರು. 


ಪೋಷಣ್ ಅಭಿಯಾನದಡಿ ಗರ್ಭಿಣಿ ಸ್ವಾತಿಯವರಿಗೆ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಲಾಯಿತು. 

ಸ್ತ್ರೀಶಕ್ತಿ ಗುಂಪಿನ ಮಹಿಳೆಯರು, ಮಕ್ಕಳ ತಾಯಂದಿರು ಅವರವರ ಮನೆಯಲ್ಲಿಯೇ ಸುಮಾರು ಇಪ್ಪತೈದು ತರಹದ ಪೌಷ್ಟಿಕ ಆಹಾರವನ್ನು ತಯಾರಿಸಿ ಅಂಗನವಾಡಿ ಕೇಂದ್ರಕ್ಕೆ ತಂದಿದ್ದರು.

ಸ್ತ್ರೀಶಕ್ತಿ ಗುಂಪುಗಳ ವತಿಯಿಂದ ಭಾಗವಹಿಸಿದ ಎಲ್ಲರಿಗೂ ಬಹುಮಾನವನ್ನು ವಿತರಿಸಲಾಯಿತು. 

ಗ್ರಾಮ ಪಂಚಾಯತ್ ಸದಸ್ಯೆ ಯಶೋದ, ಕಿರಿಯ ಆರೋಗ್ಯ ಸಹಾಯಕಿ ವಿನೋದ, ಆಶಾ ಕಾರ್ಯಕರ್ತೆ  ಸುಮತಿ, ಬಾಲವಿಕಾಸ ಸಮಿತಿಯ ಪದಾಧಿಕಾರಿಗಳು, ಮಕ್ಕಳ ತಾಯಂದಿರು, ಬ್ರಹ್ಮಶ್ರೀ, ನವಶ್ರೀ, ಪದ್ಮಶ್ರೀ, ಸ್ತ್ರೀಶಕ್ತಿ ಗುಂಪುಗಳ ಪದಾಧಿಕಾರಿಗಳು, ಸರ್ವ ಸದಸ್ಯರು, ಅಂಗನವಾಡಿ ಸಹಾಯಕಿ, ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.  

ಹಳೆ ವಿದ್ಯಾರ್ಥಿಗಳಾದ  ಚಂದ್ರಶೇಖರ, ಆದರ್ಶ್, ಸ್ವಾತಿ ಹಾಜರಿದ್ದರು.

ಅಂಗನವಾಡಿ ಕಾರ್ಯಕರ್ತೆ ಶಾಂತ  ಸ್ವಾಗತಿಸಿದರು.  ಮಲ್ಲಿಕಾ ಪ್ರಾರ್ಥನೆ ಗೈದರು. ನಾಗಶ್ರೀ ಕಾರ್ಯಕ್ರಮ ನಿರೂಪಿಸಿದರು.  ಆಶಾ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article