ಪೊಳಲಿ ಅಮ್ಮನ ಸನಿಧಿಯಲ್ಲಿ ಊದು ಪೂಜೆ ಸಂಭ್ರಮ
Monday, September 29, 2025
ಪೊಳಲಿ: ಶ್ರೀ ಕ್ಷೇತ್ರ ಪೊಳಲಿಯಲ್ಲಿ ಪಿಲಿನಲಿಕೆ ಪಿಲಿ ಪರ್ಬ ಪ್ರಶಸ್ತಿ ವಿಜೇತ ತಂಡವಾದ ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್ ಮತ್ತು ಟೈಗರ್ ಬಾಯ್ಸ್ ಪೊಳಲಿ ಇದರ ಊದು ಪೂಜೆ ಕಾರ್ಯಕ್ರಮ ಸೆ.28 ರಂದು ನಡೆಯಿತು.
ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ವಿಶೇಷ ಚೆಂಡೆ ವಾದನದ ಮೂಲಕ ಭಜನೆ ಕಾರ್ಯಕ್ರಮ ನಡೆಯಿತು.
ಈ ಎರಡು ತಂಡದ ಮುಖ್ಯಸ್ಥರು ಮತ್ತು ಸದಸ್ಯರು ಹಾಗೂ ಹುಲಿ ಹಾಕುವವರು ಮತ್ತು ಹತ್ತಿರದ ಬೇರೆ ಬೇರೆ ತಂಡದಲ್ಲಿ ಹುಲಿ ಹಾಕುವವರು ಊದು ಪೂಜೆಯಲ್ಲಿ ಭಾಗವಹಿಸಿದರು.
ಹುಲಿ ವೇಷದಲ್ಲಿ ಪರಿಣಿತರಾದ ಊರಿನ ಹಿರಿಯ ವ್ಯಕ್ತಿಗಳು ಮತ್ತು ಊರಿನವರು ಸಹ ಬಂದು ಸಹಕರಿಸಿದರು.
