ಕುಕ್ಕೆ ಸುಬ್ರಹ್ಮಣ್ಯ: 40 ಸೇವೆಗಳ ದರ ಪರಿಷ್ಕರಣೆ

ಕುಕ್ಕೆ ಸುಬ್ರಹ್ಮಣ್ಯ: 40 ಸೇವೆಗಳ ದರ ಪರಿಷ್ಕರಣೆ


ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಿವಿಧ ಸೇವೆಗಳ ದರಗಳಲ್ಲಿ ಪರಿಷ್ಕರಣೆ ಮಾಡಲಾಗಿದ್ದು, ಪರಿಷ್ಕೃತ ದರ ಸೆಪ್ಟೆಂಬರ್ 1 ರಿಂದಲೇ ಜಾರಿಗೆ ಬಂದಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಾಯವನ್ನು ಹೆಚ್ಚಿಸುವ ದೃಷ್ಟಿಯಿಂದ ದೇವಸ್ಥಾನದಲ್ಲಿ ನಷ್ಟದಲ್ಲಿ ನಡೆಯುವ ಕೆಲವು ಪ್ರಮುಖ ಸೇವೆಗಳ ಸೇವಾ ದರವನ್ನು ಹೆಚ್ಚಿಸಿ ಪರಿಷ್ಕರಿಸುವ ಅಗತ್ಯವಿರುವುದರಿಂದ, ಸೇವಾದರ ಪರಿಷ್ಕರಣೆ ಹಾಗೂ ದಕ್ಷಿಣೆ ದರ ಪರಿಷ್ಕರಣೆಗೆ ಈ ಹಿಂದಿನ ಆಡಳಿತಾಧಿಕಾರಿ ಅವರು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. 

ಇಲಾಖೆಗೆ ಸಲ್ಲಿಸಿದ ವಿವಿಧ ಸೇವೆಗಳ ಪರಿಷ್ಕರಣೆಗಳಲ್ಲಿ ಸುಮಾರು 40 ರಷ್ಟು ಸೇವೆಗಳ ದರ ಹೆಚ್ಚಳಗೊಂಡು ಪರಿಷ್ಕರಣೆ ಆಗಿದೆ. ಪರಿಷ್ಕರಣೆಯನ್ನು ಮುಂದಿನ ಅವಧಿಗೆ ಜಾರಿಗೊಳಿಸುವಂತೆ ಇಲಾಖೆಯ ಆಯುಕ್ತರು ಆದೇಶಿಸಿದಂತೆ ಪರಿಷ್ಕರಣೆ ದರ ಜಾರಿಗೆ ಬಂದಿದೆ. ಈ ಹಿಂದೆ 2010ರ ನವೆಂಬರ್‌ನಲ್ಲಿ ಕೊನೆಗೆ ಪರಿಷ್ಕರಣೆ ಮಾಡಲಾಗಿತ್ತು. ಇದೀಗ 15 ವರ್ಷದ ಬಳಿಕ ಸೇವೆಗಳ ದರ ಪರಿಷ್ಕರಣೆಗೊಂಡಿದೆ.

ಪರಿಷ್ಕರಣೆಗೊಂಡ ಸೇವೆಗಳು:

ಪರಿಷ್ಕರಣೆಗೊಂಡು ಹೆಚ್ಚಳಗೊಂಡ ಸೇವೆಗಳ ದರ ಈ ರೀತಿ ಇದೆ. ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ನಡೆಯುವ ಚಿಕ್ಕರಥೋತ್ಸವ ಪರಿಷ್ಕರಣೆ ದರ 12,000 ರೂ., ಚಂದ್ರಮಂಡಲ ಉತ್ಸವ 9,500 ರೂ., ಹೂವಿನ ತೇರಿನ ಉತ್ಸವ 8,700 ರೂ., ರಾಜಾಂಗಣದಲ್ಲಿ ಶೇಷ ವಾಹನಯುಕ್ತ ಭಂಡಿ ಉತ್ಸವ 4,500 ರೂ., ದೀಪಾರಾಧನೆಯುಕ್ತ ಪಾಲಕಿ ಉತ್ಸವ 5,600 ರೂ., ಪಾಲಕಿ ಉತ್ಸವಯುಕ್ತ ಮಹಾಪೂಜೆ 4,000 ರೂ., ಇಡೀ ದಿನದ ಸಪರಿವಾರ ಸೇವೆ 4,050 ರೂ., ಪವಮಾನಯುಕ್ತ  ಪಂಚಾಮೃತ ಅಭಿಷೇಕ 160 ರೂ., ಕಲಶ ಪೂಜಾಯುಕ್ತ ಪಂಚಾಮೃತ ಅಭಿಷೇಕ 160 ರೂ., ಪಂಚಾಮೃತಾಭಿಷೇಕ 100 ರೂ., ರುದ್ರಾಭಿಷೇಕ 100 ರೂ., ಶೇಷ ಸೇವೆ (ಅಷ್ಟೋತ್ತರ ಸಹಿತ) 160 ರೂ., ಹರಿವಾಣ ನೈವೇದ್ಯ 125 ರೂ., ಕಾರ್ತಿಕ ಪೂಜೆ 100 ರೂ., ಚಿತ್ರಾನ್ನ ಸಮರ್ಪಣೆ 200 ರೂ., ಹಾಲು ಪಾಯಸ 160 ರೂ., ಸಹಸ್ರನಾಮಾರ್ಚನೆ 25 ರೂ., ಮೃಷ್ಠಾನ್ನ ಸಮರ್ಪಣೆ 925 ರೂ., ರಾತ್ರಿ ಮಹಾಪೂಜೆಯುಕ್ತ ಪಾಲಕಿ ಉತ್ಸವ 4,600 ರೂ., ಹರಿಕೆಗಳಾದ ನಾಗ ಪ್ರತಿಷ್ಠೆ 500 ರೂ., ನಾಮಕರಣ 250 ರೂ., ಅಶ್ಲೇಷ ಬಲಿ 500 ರೂ., ಆಶ್ಲೇಷ ಬಲಿ ಉದ್ಯಾಪನೆ 500 ರೂ., ಷಷ್ಠಿವೃತ ಉದ್ಯಾಪನೆ ೫೦೦ ರೂ., ಮಂಗಳ ಕಾರ್ಯಗಳಾದ ಉಪನಯನ (ಬ್ರಹ್ಮಪ್ರತಿಷ್ಠೆ) 800 ರೂ., ಸತ್ಯನಾರಾಯಣ ಪೂಜೆ 1000 ರೂ., ಶ್ರೀ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಏಕದಶಾವಾರ. ರುದ್ರಾಭಿಷೇಕ 120 ರೂ., ಪಂಚಾಮೃತಾಭಿಷೇಕ 100 ರೂ., ಹರಿವಾಣ ನೈವೇದ್ಯ 150 ರೂ., ಕಾರ್ತಿಕ ಪೂಜೆ 100 ರೂ., ಸಹಸ್ರನಮಾರ್ಚನೆ 20 ರೂ., ಶ್ರೀ ಕುಕ್ಕೆಲಿಂಗ ದೇವರ ಸನ್ನಿಧಿಯಲ್ಲಿ ಏಕದಶಾವಾರ ರುದ್ರಾಭಿಷೇಕ 120 ರೂ., ತ್ರಿಮಧುರ ಸಮರ್ಪಣೆ 50 ರೂ., ಕಾರ್ತಿಕ ಪೂಜೆ 100 ರೂ., ಶ್ರೀ ಆದಿ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ 100 ರೂ., ರಂಗಪೂಜೆ 850 ರೂ., ತ್ರಿಮಧುರ ಸಮರ್ಪಣೆ 50 ರೂ., ಕಾರ್ತಿಕ ಪೂಜೆ 100 ರೂ., ಹೊಸಳಿಗಮ್ಮನ ಸನ್ನಿಧಿಯಲ್ಲಿ ಪುರುಷರಾಯನಿಗರ ಒಂಟಿನೇಮ 2,500 ರೂ., ಕಾಶಿಕಟ್ಟೆ ಗಣಪತಿ ದೇವರ ಸನ್ನಿಧಿಯಲ್ಲಿ ರಂಗಪೂಜೆ 850 ರೂ., ಶ್ರೀ ಅಭಯ ಆಂಜನೇಯ ದೇವರ ಸನ್ನಿಧಿಯಲ್ಲಿ ಸತ್ಯನಾರಾಯಣ ಪೂಜೆ 900 ರೂ. ದರಗಳ ಪರಿಷ್ಕರಣೆಗೊಂಡಿದೆ.

ಪರಿಷ್ಕರಣೆಗೊಂಡ ಸೇವೆಗಳ ದರಗಳಲ್ಲಿ ಕೆಲವುದರಲ್ಲಿ ಸ್ವಲ್ಪ ಮಟ್ಟಿನ ಪರಿಷ್ಕರಣೆ ಆಗಿದ್ದು, ಕೆಲ ಸೇವೆಗಳ ದರದಲ್ಲಿ ಅಧಿಕ ದರದ ಹೆಚ್ಚಳಗೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article