ತಾಲೂಕು ಬಾಲಕ-ಬಾಲಕಿಯರ ತ್ರೋಬಾಲ್ ಪಂದ್ಯಾಟ: ಸಂತ ಜಾಜ್೯ ನೆಲ್ಯಾಡಿಗೆ ಅವಳಿ ಪ್ರಶಸ್ತಿ
Wednesday, September 10, 2025
ಸುಬ್ರಹ್ಮಣ್ಯ: ಎಸ್.ಎಸ್.ಪಿ.ಯು ಕಾಲೇಜು ಸುಬ್ರಹ್ಮಣ್ಯ ದ ಆಶ್ರಯದಲ್ಲಿ ಮಂಗಳವಾರ ನಡೆದ ಕಡಬ ತಾಲೂಕು ಮಟ್ಟದ ಬಾಲಕ-ಬಾಲಕಿ ಯರ ತ್ರೋಬಾಲ್ ಪಂದ್ಯಾಟದಲ್ಲಿ ನೆಲ್ಯಾಡಿ ಸಂತ ಜಾಜ್೯ ಪದವಿಪೂರ್ವ ಕಾಲೇಜಿನ ಬಾಲಕ ಮತ್ತು ಬಾಲಕಿಯರ ತಂಡಗಳು ಪ್ರಥಮ ಸ್ಥಾನ ಗಳಿಸಿ ಅವಳಿ ಪ್ರಶಸ್ತಿ ಪಡೆಯಿತು.
ಎಸ್.ಎಸ್.ಪಿಯು ಕಾಲೇಜಿನ ಅವಳಿ ತಂಡಗಳು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟಿತು.
ಜಿದ್ದಾಜಿದ್ದಿನಿಂದ ಕೂಡಿದ್ದ ಬಾಲಕರ ವಿಭಾಗದ ಪೈನಲ್ ಪಂದ್ಯಾಟದಲ್ಲಿ ನೆಲ್ಯಾಡಿ ತಂಡವು ಸುಬ್ರಹ್ಮಣ್ಯ ತಂಡವನ್ನು 25-23, 25-23 ಅಂಕಗಳಿಂದ 2-1 ಸೆಟ್ ನಿಂದ ಮಣಿಸಿತು. ಬಾಲಕಿಯರ ವಿಭಾಗದಲ್ಲಿ ನೆಲ್ಯಾಡಿ ತಂಡವು ಸುಬ್ರಹ್ಮಣ್ಯ ತಂಡವನ್ನು 17-25, 25-18,25-16 ಅಂಕಗಳೊಂದಿಗೆ 2-1 ಸೆಟ್ ಗಳಲ್ಲಿ ಪರಾಭವಗೊಳಿಸಿತು.
ವೈಯಕ್ತಿಕ ಬಹುಮಾನ:
ಬಾಲಕರ ವಿಭಾಗದಲ್ಲಿ ಮನನ ನೆಲ್ಯಾಡಿ ಕಾಲೇಜಿನ ಆಪ್ಲಲಾಲ್ ಅತ್ಯುತ್ತಮ ಆಲ್ ರೌಂಡರ್ ಆಟಗಾರ ಆಪ್ಲಲಾಲ್, ಸುಬ್ರಹ್ಮಣ್ಯ ಕಾಲೇಜಿನ ಸಾಯಿ ಸ್ಮರಣ್ ಉತ್ತಮ ಹಿಡಿತಗಾರ,
ಬಾಲಕಿಯರ ವಿಭಾಗದಲ್ಲಿ ನೆಲ್ಯಾಡಿಯ ಹರ್ಷ ಅತ್ಯುತ್ತಮ ಆಲ್ ರೌಂಡರ್, ಸುಬ್ರಹ್ಮಣ್ಯದ ರಕ್ಷಾ ಉತ್ತಮ ಹಿಡಿತಗಾರ್ತಿ ವೈಯಕ್ತಿಕ ಬಹುಮಾನ ಪಡೆದರು.
ಬಹುಮಾನ ವಿತರಣೆ:
ಕೆ.ಎಸ್.ಎಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ದಿನೇಶ್ ಪಿ.ಡಿ, ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್, ತಾಲೂಕು ಕ್ರೀಡಾ ಸಂಘದ ಅಧ್ಯಕ್ಷ ಹ್ಯಾರೀಸ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ಪ್ರೌಢಶಾಲಾ ಮುಖ್ಯಶಿಕ್ಷಕಿ ನಂದಾ ಹರೀಶ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ತ್ರಿವೇಣಿ ದಾಮ್ಲೆ, ಸಾಂಸ್ಕೃತಿಕ ಸಂಘದ ಸಂಚಾಲಕಿ ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸಂಘದ ಸಂಚಾಲಕ ಜಯಪ್ರಕಾಶ್. ಆರ್ ಬಹುಮಾನ ವಿತರಿಸಿದರು.
