ತೋಟದ ಬಾವಿಗೆ ಬಿದ್ದ ಚಿರತೆ ಮರಿಯ ರಕ್ಷಣೆ..!
ಬಾವಿಯಲ್ಲಿ ಚಿರತೆ ಮರಿಯನ್ನು ಗಮನಿಸಿದ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಮರಿಯನ್ನು ಮೇಲಕ್ಕೆತ್ತಿ ಸೋಮೇಶ್ವರ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.
ಘಟನೆಯ ವಿವರ:
ಕೃಷಿಕರಾದ ಜೇಕಬ್ ಸಿಕ್ವೇರಾ ಮನೆಯವರು ಮಧ್ಯಾಹ್ನದ ಹೊತ್ತಿಗೆ ತೋಟದ ಬಾವಿಯ ಪಂಪ್ ಚಾಲು ಮಾಡಿದಾಗ ಅದು ನಿಷ್ಕ್ರೀಯವಾಗಿ ಇರುವುದನ್ನು ಗಮನಿಸಿ ಬಾವಿಯ ಸಮೀಪಕ್ಕೆ ಬಂದು ನೋಡಿದಾಗ ಚಿರತೆ ಮರಿಯೊಂದು ನೀರಿನಲ್ಲಿ ಬಿದ್ದು ಒದ್ದಾಡುತ್ತಿರುವುದನ್ನು ಗಮನಿಸಿದ್ದಲದೆ ಅದು ವಯರ್ ಕಟ್ ಮಾಡಿದ್ದರಿಂದ ಮೋಟರ್‌ಗೆ ವಿದ್ಯುತ್ ಸಂಪರ್ಕ ಅಗದೆ ನೀರು ಮೇಲಕ್ಕೆ ಬಂದಿಲ್ಲ ಎಂದು ತಿಳಿದು ಬಂದಿದೆ. ತಕ್ಷಣ ಜೇಜಬ್‌ರವರ ಪುತ್ರ ಆವಿಲ್ ಸಿಕ್ವೇರಾ ಚಿರತೆಯ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಲ್ಲದೆ ತಂದೆಯ ಸಹೋದರರಾದ ಜೋನ್ ಸಿಕ್ವೇರಾ, ಕಾಮಿಲ್ ಸಿಕ್ವೇರಾರವರಿಗೆ ತಿಳಿಸಿದ್ದಾರೆ.
ಅಂದಾಜು 2 ರಿಂದ 3 ವರ್ಷ ಪ್ರಾಯದ ಹೆಣ್ಣು ಚಿರತೆಮರಿ ಇದಾಗಿದ್ದು, ಅರಣ್ಯ ಇಲಾಖೆಯವರು ಮತ್ತು ಎನ್‌ಜಿಒ ಉಡುಪಿಯ ಅಕ್ಷಯ್ ಶೇಟ್ ಹಾಗೂ ಸ್ಥಳೀಯ ಸಹಕಾರದಿಂದ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೋನಿನಲ್ಲಿ ಚಿರತೆ ಮರಿಯನ್ನು ಸೆರೆ ಹಿಡಿದಿದ್ದಾರೆ.
ಆರ್‌ಎಫ್‌ಒ ವಾರಿಜಾಕ್ಷಿ ಮಾರ್ಗದರ್ಶನದಲ್ಲಿ ಉಪ ವಲಯಾಧಿಕಾರಿ ಶಿವಾನಂದ, ಗಸ್ತು ಅರಣ್ಯ ಪಾಲಕರುಗಳಾದ ದೇವರಾಜ್, ರಾಮಚಂದ್ರ ನಾಯಕ್, ಶ್ರೀನಿವಾಸ ಜೋಗಿ, ಅಖಿಲೇಶ್, ಮಂಜುನಾಥ್, ಪಾಣ ಕಾರ್ಯಾಚರಣೆಯಲ್ಲಿ ಸಾಥ್ ನೀಡಿದ್ದರು.
