ದೇಶದ ಸಂಸ್ಕೃತಿಯನ್ನು ಬಿಂಬಿಸುವ ಡೆಕೋರೇಷನ್ ಗಳ ಪ್ರಯೋಗಗಳು ಅಗತ್ಯ: ಡಾ.ಎಂ.ಮೋಹನ ಆಳ್ವ

ದೇಶದ ಸಂಸ್ಕೃತಿಯನ್ನು ಬಿಂಬಿಸುವ ಡೆಕೋರೇಷನ್ ಗಳ ಪ್ರಯೋಗಗಳು ಅಗತ್ಯ: ಡಾ.ಎಂ.ಮೋಹನ ಆಳ್ವ


ಮೂಡುಬಿದಿರೆ: ಶಾಮಿಯಾನ ಕ್ಷೇತ್ರದಲ್ಲಿ ಸೌಂದರ್ಯ ಪ್ರಜ್ಞೆ, ದೇಶಿಯ ಶೈಲಿಯೂ ಮುಖ್ಯ. ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಡೆಕೋರೇಶನ್‌ಗಳ ಪ್ರಯೋಗಗಳು ಆಗಬೇಕಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.

ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಮೂಡುಬಿದಿರೆ ಘಟಕದ ಆಶ್ರಯದಲ್ಲಿ ವಿದ್ಯಾಗಿರಿ ಆಳ್ವಾಸ್ ಕೃಷಿಸಿರಿ ವೇದಿಕೆಯಲ್ಲಿ ಬುಧವಾರ ನಡೆದ ಜಿಲ್ಲಾ ವಾರ್ಷಿಕ ಮಿಲನೋತ್ಸವ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 


ಶಾಮಿಯಾನ ಕಷ್ಟದ ವಹಿವಾಟು. ನುರಿತ ನೌಕರವೃಂದ ಬಹಳ ಮುಖ್ಯ. ಸಹನೆ, ತಾಳ್ಮೆ, ನಿರಂತರ ಕಠಿಣ ಪರಿಶ್ರಮ ಬೇಕಾಗುತ್ತದೆ. ಇದರ ನಡುವೆಯೂ ಸಮಾಜದ ಪರಿಕಲ್ಪನೆಯೊಂದಿಗೆ ಉತ್ತಮ ಸಂಘಟನೆಯೊಂದಿಗೆ ಸಾಗಬೇಕಾಗಿದೆ ಎಂದ ಅವರು ಮೂಡುಬಿದಿರೆ ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ಶಾಮಿಯಾನ ಮಾಲಕರ ಕೊಡುಗೆ ಅನನ್ಯವಾದುದು ಎಂದರು.

ಸಂಘದ ಅಧ್ಯಕ್ಷ ಬಾಬು ಕೆ. ವಿಟ್ಲ ಅಧ್ಯಕ್ಷತೆಯಲ್ಲಿ  ಡಾ. ಎಂ. ಮೋಹನ ಆಳ್ವ ಅವರನ್ನು ಸನ್ಮಾನಿಸಲಾಯಿತು. 

ಮೂಡುಬಿದಿರೆ ಚೌಟರ ಕುಲದೀಪ ಎಂ., ಮಾಜಿ ಸಂಸದ ನಳಿನ್ ಕುಮಾರ್, ಬಿಜೆಪಿ ದ.ಕ ಮಾಜಿ ಅಧ್ಯಕ್ಷ ಸುದರ್ಶನ್ ಎಂ., ಉದ್ಯಮಿ ಅಶ್ವಿನ್ ಪಿರೇರಾ, ಶ್ರೀಕ್ಷೇತ್ರ ಪುತ್ತಿಗೆಯ ಪ್ರಧಾನ ಅರ್ಚಕ ಅಡಿಗಳ್ ಅನಂತಕೃಷ್ಣ ಭಟ್, ಮೂಡುಬಿದಿರೆ ಜುಮ್ಮಾ ಮಸೀದಿಯ ಧರ್ಮಗುರು ಶರೀಫ್ ದಾರಿಮಿ, ಮೂಡುಬಿದಿರೆ ಕೊರ್ಪುಸ್ ಕ್ರಿಸ್ತಿ ಚರ್ಚ್ ನ ಧರ್ಮಗುರು ಓನಿಲ್ ಡಿ'ಸೋಜ, ವಕೀಲ ಜಯಪ್ರಕಾಶ್ ಭಂಡಾರಿ, ಉದ್ಯಮಿ ಆರ್.ಕೆ. ಭಟ್ ಮುಖ್ಯ ಅತಿಥಿಗಳಾಗಿದ್ದರು.

ಇದೇ ಸಂದಭ೯ದಲ್ಲಿ ಸಂಘದ ವೆಬ್‌ಸೈಟ್ ನ್ನು ಲೋಕಾರ್ಪಣೆಗೊಳಿಸಲಾಯಿತು. 

ಸಂಘದ ಮೂಡುಬಿದಿರೆ ಘಟಕ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಬಂಟ್ವಾಳ ಘಟಕ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಮಂಗಳೂರು ಘಟಕ ಅಧ್ಯಕ್ಷ ಬಾಲಕೃಷ್ಣ ಕದ್ರಿ, ಬೆಳ್ತಂಗಡಿ ಘಟಕ ಅಧ್ಯಕ್ಷ ಬಿ.ಹರೀಶ್ ಕುಮಾರ್, ವಿಟ್ಲ ಘಟಕ ಅಧ್ಯಕ್ಷ ಪದ್ಮನಾಭ ಶೆಟ್ಟಿ ಕುಡ್ಮುಗೇರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀಯೂಷ್ ಮ್ಯಾಕ್ಸಿಂ ಸಿಕ್ವೇರಾ, ಜಿಲ್ಲಾ ಕೋಶಾಧಿಕಾರಿ ನಿಶಿತ್ ಪೂಜಾರಿ, ಮೂಡುಬಿದಿರೆ ಘಟಕದ ಪ್ರಧಾನ ಕಾರ್ಯದರ್ಶಿ ದಿವಾಕರ ಮೂಡುಬಿದಿರೆ, ಕೋಶಾಧಿಕಾರಿ ಆಲ್ಡಿçನ್ ಫೆರ್ನಾಂಡಿಸ್, ಜಿಲ್ಲಾ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ದಿನೇಶ್ ಸುವರ್ಣ ರಾಯಿ ಹಾಗೂ ಸತೀಶ್ ಹೊಸ್ಮಾರ್ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article