ಎಕ್ಸ್‌ಪರ್ಟ್ ಪಿಯು ಕಾಲೇಜು: 15 ವಿದ್ಯಾರ್ಥಿಗಳು ಏಮ್ಸ್‌ಗೆ ಪ್ರವೇಶ

ಎಕ್ಸ್‌ಪರ್ಟ್ ಪಿಯು ಕಾಲೇಜು: 15 ವಿದ್ಯಾರ್ಥಿಗಳು ಏಮ್ಸ್‌ಗೆ ಪ್ರವೇಶ


ಮಂಗಳೂರು: ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ 15 ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಏಮ್ಸ್ ಹಾಗೂ 11 ವಿದ್ಯಾರ್ಥಿಗಳು ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಸಂಶೋಧನಾ ಕೇಂದ್ರ (ಜಿಪ್ಮರ್)ಕ್ಕೆ ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶ ಪಡೆದಿದ್ದಾರೆ.

ಇದಲ್ಲದೆ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಾದ ಬೆಂಗಳೂರಿನ ಬಿಎಂಸಿಗೆ 23, ಮೈಸೂರಿನ ಎಂಎಂಸಿಗೆ 27, ಮಂಗಳೂರಿನ ಕೆಎಂಸಿಗೆ 13, ಹುಬ್ಬಳ್ಳಿಯ ಕೆಐಎಂಎಸ್ 14, ಧಾರವಾಡದ ಎಸ್‌ಡಿಎಂಗೆ 21 ಸೇರಿದಂತೆ ಒಟ್ಟು ಅಖಿಲ ಭಾರತ ಕೋಟಾದಡಿ 78 ಹಾಗೂ ರಾಜ್ಯ ಕೋಟಾದಡಿ 478 ವಿದ್ಯಾರ್ಥಿಗಳು ಹೀಗೆ ಒಟ್ಟು 556 ವಿದ್ಯಾರ್ಥಿಗಳು ಪ್ರಥಮ ಸುತ್ತಿನಲ್ಲೇ ದೇಶದ ನಾನಾ ಎಂಬಿಬಿಎಸ್ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ. ಇದಲ್ಲದೆ 51 ವಿದ್ಯಾರ್ಥಿಗಳು ಬಿಡಿಎಸ್ ಶಿಕ್ಷಣ ಪಡೆಯಲು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಅವಕಾಶ ಪಡೆಯುವ ಮೂಲಕ ಹೊಸ ಇತಿಹಾಸವನ್ನು ಸಂಸ್ಥೆಯ ವಿದ್ಯಾರ್ಥಿಗಳು ಸೃಷ್ಟಿಸಿದ್ದಾರೆ ಎಂದು ಕಾಲೇಜಿನ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.

720ರಲ್ಲಿ 670 ಅಂಕ ಪಡೆದ ನಿಖಿಲ್ ಸೊನ್ನದ್ ಏಮ್ಸ್ ಹೊಸದಿಲ್ಲಿಯಲ್ಲಿ ಸೀಟು ಪಡೆದರೆ, ಜಿಪ್ಮರ್ ಪಾಂಡಿಚೇರಿಗೆ ಒಂಬತ್ತು ವಿದ್ಯಾರ್ಥಿಗಳು, ಏಮ್ಸ್ ಭುವನೇಶ್ವರಕ್ಕೆ ಐವರು ವಿದ್ಯಾರ್ಥಿಗಳು, ಏಮ್ಸ್ ರಿಷಿಕೇಶ್, ಏಮ್ಸ್ ಭೋಪಾಲ್, ಏಮ್ಸ್ ಗೋರಖ್‌ಪುರ, ಏಮ್ಸ್ ಮಂಗಳಗಿರಿ, ಏಮ್ಸ್ ಗೌಹಾಟಿಗೆ ತಲಾ ಓರ್ವ ವಿದ್ಯಾರ್ಥಿ ಪ್ರವೇಶ ಪಡೆದರೆ, ಏಮ್ಸ್ ಮಧುರೈ, ಏಮ್ಸ್ ಜೋದ್‌ಪುರ್, ಏಮ್ಸ್ ನಾಗ್ಪುರ ಹಾಗೂ ಜಿಪ್ಮರ್ ಕಾರೈಕಲ್‌ಗೆ ಇಬ್ಬರು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ಇದು ಪ್ರಥಮ ಸುತ್ತಿನ ಆಯ್ಕೆಯಾಗಿದ್ದು, ಅಂತಿಮ ಹಂತದಲ್ಲಿ ಇನಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಸಾಧ್ಯತೆಗಳು ಇವೆ. ಕಾಲೇಜಿನ ಶೇ. 99ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಅರ್ಹತೆ ಪಡೆದುಕೊಂಡಿದ್ದರು. ಈ ಮೂಲಕ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶೈಕ್ಷಣಿಕ ಲೋಕದಲ್ಲಿ ಹೊಸ ಇತಿಹಾಸವನ್ನು ನಿರ್ಮಾಣ ಮಾಡಿದ್ದಾರೆ.

ನಾಲ್ವರು ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಐಐಟಿ, ಓರ್ವ ಐಐಐಟಿ, 18 ವಿದ್ಯಾರ್ಥಿಗಳು ಎನ್‌ಐಟಿಗಳಿಗೆ ಪ್ರವೇಶ ಪಡೆದಿದ್ದಾರೆ. ಅದ್ವಿತೀಯ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಪರವಾಗಿ ಪ್ರೊ. ನರೇಂದ್ರ ಎಲ್. ನಾಯಕ್ ಅವರು ಅಭಿನಂಧಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article