ನಿಷೇಧಿತ ಮಾದಕ ವಸ್ತು MDMA ಮಾರಾಟ: ಇಬ್ಬರ ಬಂಧನ, ಮಾದಕ ವಸ್ತು ವಶಕ್ಕೆ

ನಿಷೇಧಿತ ಮಾದಕ ವಸ್ತು MDMA ಮಾರಾಟ: ಇಬ್ಬರ ಬಂಧನ, ಮಾದಕ ವಸ್ತು ವಶಕ್ಕೆ


ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಗ್ರಾಮದ ತಚ್ಛಣಿ ಗ್ರೌಂಡ್ ನಲ್ಲಿ ನಿಷೇಧಿತ ಮಾದಕ ವಸ್ತು MDMA ಅನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ, ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಫಝಲ್ ಹುಸೇನ್ (33) ಮತ್ತು ನೌಶಾದ್ (32) ಎಂದು ಗುರುತಿಸಲಾಗಿದೆ.

ಸೆ.1 ರಂದು ಮಂಗಳೂರು ನಗರದ ಉಳ್ಳಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಗ್ರಾಮದ ತಚ್ಛಣಿ ಗ್ರೌಂಡ್ ನಲ್ಲಿ ಭಾರತ ದೇಶದಲ್ಲಿ ನಿಷೇಧಿತ ಮಾದಕ ವಸ್ತುವಾದ MDMA ಅನ್ನು ದುಬಾರಿ ಹಣಕ್ಕೆ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ.

ಬಂಧಿತರಿದ್ದ 15 ಗ್ರಾಂ. MDMA, ಡಿಯೋ ಬೈಕ್, ಎರಡು ಮೊಬೈಲ್ ಫೋನ್, ಪೋರ್ಟಬಲ್ ಡಿಜಿಟಲ್ ತೂಕದ ಯಂತ್ರ ಒಟ್ಟು ಅಂದಾಜು ಮೊತ್ತ 95,500 ರೂ.ನ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣಾ Cr. No. 155/25 U/S NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಎಸಿಪಿ ವಿಜಯಕ್ರಾಂತಿ ಅವರ ಮಾರ್ಗದರ್ಶನ ಹಾಗೂ ನಿರ್ದೇಶನದಂತೆ ಉಳ್ಳಾಲ ಪೊಲೀಸ್ ಠಾಣಾ ಸಿಬ್ಬಂದಿಗಳು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article