ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಎಜುಪಾತ್ ಸರಣಿ ಕಾರ್ಯಕ್ರಮ

ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಎಜುಪಾತ್ ಸರಣಿ ಕಾರ್ಯಕ್ರಮ


ಮಂಗಳೂರು: ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಎಜುಪಾತ್ ಸರಣಿ ಕಾರ್ಯಕ್ರಮದಲ್ಲಿ ಎಂಜಿನಿಯರಿಂಗ್ ಕ್ಷೇತ್ರದ ಬಗ್ಗೆ ಸಂಸ್ಥೆಯ ಹಳೆಯ ವಿದ್ಯಾರ್ಥಿ ಮತ್ತು ವಸ್ತು ವಿಜ್ಞಾನಿ ಡಾ. ದೇವದಾಸ್ ಭಟ್ 'ಪ್ರೀಮಿಯಂ ಸಂಶೋಧನಾ ಸಂಸ್ಥೆಗಳು ಮತ್ತು ಮುಂದಿರುವ ವೃತ್ತಿಜೀವನ' ಕುರಿತು ಮಾಹಿತಿ ನೀಡಿದರು. 

ಭಾರತ ಮತ್ತು ವಿದೇಶಗಳಲ್ಲಿ ಸಂಶೋಧನಾ-ಆಧಾರಿತ ವೃತ್ತಿಜೀವನದ ಮಹತ್ವವನ್ನು ಡಾ. ಭಟ್ ಒತ್ತಿ ಹೇಳಿದರು, ವಿದ್ಯಾರ್ಥಿಗಳಿಗೆ  IISc, IISER ಗಳು, NCBS, CCMB ಮತ್ತು ಇತರ ಕೇಂದ್ರಗಳ  ಕುರಿತು ವಿವರಿಸಿದರು. 

ನ್ಯಾನೊ ತಂತ್ರಜ್ಞಾನ, AI, ಏರೋಸ್ಪೇಸ್, ಬಯೋಮೆಡಿಕಲ್ ಎಂಜಿನಿಯರಿಂಗ್, ನವೀಕರಿಸಬಹುದಾದ ಇಂಧನ ಮತ್ತು ಅರಿವಿನ ವಿಜ್ಞಾನಗಳಂತಹ ಕ್ಷೇತ್ರಗಳಲ್ಲಿನ ಕೊಡುಗೆಗಳೊಂದಿಗೆ ಅವುಗಳ ಜಾಗತಿಕ ಸ್ಥಾನವನ್ನು ತಿಳಿಸಿದರು.

ಪ್ರಮುಖ ಸಂಸ್ಥೆಗಳ ಗುಣಮಟ್ಟದ ಶಿಕ್ಷಣ, ಸಂಶೋಧನಾ ಅವಕಾಶಗಳು, ಅಂತಾರಾಷ್ಟ್ರೀಯ  ಮಾನ್ಯತೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳು  ಹಾಗು ಉನ್ನತ ಅಧ್ಯಯನಗಳ ಬಗ್ಗೆ ಹೇಳಿದರು. ಇಂಗ್ಲಿಷ್ ಪ್ರಾವೀಣ್ಯತೆ, SAT ಅಂಕಗಳು ಮತ್ತು ವಿದ್ಯಾರ್ಥಿವೇತನಗಳ ಪ್ರಾಮುಖ್ಯತೆ, ಜಾಗತಿಕ ಶಿಕ್ಷಣದ   ಆಯ್ಕೆಗಳ ಬಗ್ಗೆ ಮಾಹಿತಿ ನೀಡಿದರು. 

ಪ್ರಾಂಶುಪಾಲ ಡಾ. ಎನ್. ಕೆ. ವಿಜಯನ್ , ಕೋಚಿಂಗ್ ಮುಖ್ಯಸ್ಥ ಗುರುದತ್ತ್ ಎನ್, ವಸತಿ ನಿಲಯದ ಮುಖ್ಯ  ಮಾರ್ಗದರ್ಶಕಿ ಅನಿತಾ ಪಿ. ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರ್ಥಿ ಮನೋಜ್ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article