ತಾ.ಪ. ಲೆಟರ್ ಹೆಡ್‌ನಲ್ಲಿ ಜಿ.ಪಂ. ಸಿಇಒಗೆ ಮನವಿ: ಪ್ರಭು ವಿರುದ್ಧ ಕೇಸು ದಾಖಲು

ತಾ.ಪ. ಲೆಟರ್ ಹೆಡ್‌ನಲ್ಲಿ ಜಿ.ಪಂ. ಸಿಇಒಗೆ ಮನವಿ: ಪ್ರಭು ವಿರುದ್ಧ ಕೇಸು ದಾಖಲು


ಬಂಟ್ವಾಳ: ಅಧಿಕಾರಾವಧಿ ಮುಕ್ತಾಯಗೊಂಡು ಮಾಜಿಯಾದರೂ ಹಾಲಿ ಸದಸ್ಯರಂತೆ ‘ತಾಲೂಕು ಪಂಚಾಯತ್ ಬಂಟ್ವಾಳ’ ಎಂಬ ಹೆಸರಿನ ಲೆಟರ್ ಹೆಡ್ ಅನಧಿಕೃತವಾಗಿ ಬಳಸಿಕೊಂಡು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬಗ್ಗೆ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಒತ್ತಡ ಹೇರದಂತೆ ಸುಳ್ಳು ವಿಚಾರಗಳನ್ನು  ಉಲ್ಲೇಖಿಸಿ ಜಿ.ಪಂ. ಸಿಇಒ ಅವರಿಗೆ ಮನವಿ ಸಲ್ಲಿಸಿ ಸುಳ್ಳು ಸುದ್ದಿ ಹರಡಿದ್ದಾರೆಂಬ ಆರೋಪದಲ್ಲಿ ಬಂಟ್ವಾಳ ತಾ.ಪಂ. ಸದಸ್ಯ ಪ್ರಭಾಕರ ಪ್ರಭು ವಿರುದ್ಧ ಕೇಸು ದಾಖಲಾಗಿದೆ.

ಬಂಟ್ವಾಳ ತಾ.ಪಂ. ಇಒ ಸಚ್ಚಿನ್ ಕುಮಾರ್ ಅವರ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅ.4 ರಂದು ವಿಚಾರಣೆಗಾಗಿ ಠಾಣೆಗೆ ಹಾಜರಾಗುವಂತೆಯು ಪೊಲೀಸರು ಪ್ರಭುಗೆ ನೋಟಿಸ್ ಜಾರಿಗೊಳಿಸಿದ್ದಾರೆ.

ಪ್ರಭಾಕರ ಪ್ರಭು ಅವರು ತಾ.ಪಂ. ಲೆಟರ್ ಹೆಡ್ ಉಪಯೋಗಿಸಿಕೊಂಡು ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ  ಪ್ರಗತಿ ಬಗ್ಗೆ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಒತ್ತಡ ಹೇರದಂತೆ ಜಿ.ಪಂ. ಸಿಇಒ ಅವರಿಗೆ ಮನವಿ ಸಲ್ಲಿಸಿದ್ದರು.

ಸಮೀಕ್ಷೆಯಲ್ಲಿ ಯಶಸ್ವಿಗಾಗಿ ತೊಡಗಿಸಿಕೊಳ್ಳಲು ಪಂ. ಸಿಬ್ಬಂದಿಗಳಿಗೆ ಜ್ಞಾಪನಪತ್ರ ನೀಡಿದ್ದು, ಇದು ಇಲಾಖೆಯ ಅಂತರಿಕ ವಿಚಾರವಾಗಿದೆ. ಆದರೆ ಪ್ರಭಾಕರ ಪ್ರಭು ಅವರು ತಾ.ಪಂ. ಬಂಟ್ವಾಳ ಲೆಟರ್ ಹೆಡ್‌ನ್ನು ಅನಧಿಕೃತವಾಗಿ ಬಳಸಿಕೊಂಡು ಜಿ.ಪಂ. ಸಿಇಒ ಅವರಿಗೆ ಸುಳ್ಳು ವಿಚಾರಗಳನ್ನು ಉಲ್ಲೇಖಿಸಿ ಮನವಿ ಮಾಡಿದ್ದಲ್ಲದೆ

ಸಾಮಾಜಿಕ ಜಾಲತಾಣದಲ್ಲಿಯು ಹರಿಯಬಿಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿ, ಪ್ರಭು ವಿಚಾರಣೆಗಾಗಿ ನೋಟಿಸ್ ಕೂಡ ಜಾರಿಗೊಳಿಸಿದ್ದಾರೆ. ರಾಜಕೀಯ ದುರುದ್ದೇಶದ ಕಾರಣಕ್ಕೆ ನನ್ನ ವಿರುದ್ಧ ಅಧಿಕಾರಿಯಿಂದ ದೂರು ಕೊಡಿಸಲಾಗಿದೆ.

ತಾಲೂಕು ಪಂಚಾಯತ್ ಬಂಟ್ವಾಳ:

ಲೇಟರ್ ಹೆಡ್ ದುರುಪಯೋಗ ಎಂದೂ ಹೇಳಿ ಕೇಸ್ ದಾಖಲಿಸಲಾಗಿದೆ. ತಾ.ಪಂ. ಅಧಿಕಾರವಧಿ ಮುಕ್ತಾಯವಾದಂದಿನಿಂದ ಹೆಸರಿನ ಪಕ್ಕ ಮಾಜಿ ಎಂದು ನಮೂದಿಸಿ  ಸರಕಾರದ ವಿವಿಧ ಇಲಾಖೆಯ ಮುಖ್ಯಸ್ತರಿಗೆ ಮನವಿ ಸಲ್ಲಿಸಿದ್ದೆನೆ. ಆಗ ಯಾರಲ್ಲ ಕೂಡ ಈ ರೀತಿಯ ಭಾವನೆ ಬರಲಿಲ್ಲ. ಇದೀಗ ಉದ್ದೇಶ ಪೂರ್ವಕ ಎಂಬಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಭಾಕರ ಪ್ರಭು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article