ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ‘ಶ್ರೀ ವಿಶ್ವರೂಪದರ್ಶನ’

ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ‘ಶ್ರೀ ವಿಶ್ವರೂಪದರ್ಶನ’


ಬಂಟ್ವಾಳ: ಇಲ್ಲಿನ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಪ್ರಾತಃಕಾಲ 4 ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ 24ನೇ ವರ್ಷದ ‘ಶ್ರೀ ವಿಶ್ವರೂಪದರ್ಶನ’ ನಡೆಯಿತು.

ಪ್ರಾತಕಾಲ 4 ಗಂಟೆಗೆ ದೇವಳದ ಅರ್ಚಕ ಪ್ರತಾಪ್ ಭಟ್ ಅವರು ಸಾನಿಧ್ಯದ ತುಳಸಿಕಟ್ಟೆಯ ಬಳಿ ದೀಪ ಪ್ರಜ್ವಲನೆಗೈಯುತ್ತಿದ್ದಂತೆ ನೆರೆದ ಭಕ್ತ ಸಮೂಹ ದೇವಳದ ಹೊರಾಂಗಣ ಮತ್ತು ಒಳಾಂಗಣದಲ್ಲಿ ಜೋಡಿಸಿಟ್ಟ ಸಾವಿರಾರು ಹಣತೆ ದೀಪಗಳನ್ನು ಏಕಕಾಲದಲ್ಲಿ ಬೆಳಗಿದರು.

ಬಳಿಕ ಶ್ರೀದೇವರಿಗೆ ಕಾಕಡಾರತಿ, ಜಾಗರ ಪೂಜೆ ನಂತರ ವಿಶೇಷಾಲಂಕಾರಗೊಂಡ ಶ್ರೀ ದೇವರ ವಿಶೇಷ ವಿಶ್ವರೂಪದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಬಳಿಕ  ಪ್ರಸಾದ ವಿತರಣೆಯು ನಡೆಯಿತು. ದೇವಳದ ಒಳಾಂಗಣವನ್ನು ಹೂವಿನಾಲಂಕಾರ ಶೃಂಗರಿಸಲಾಗಿತ್ತು.

ಮುಂಜಾನೆ 4.30 ರಿಂದ 7 ರ ವರೆಗೆ ಸಂತವಾಣಿ ಭಜನಾ ಸಂಕೀರ್ತನೆ ನಡೆಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರರು, ಮೊಕ್ತೇಸರರು, ಭಗವದ್ಬಕ್ತರು ನೂರಾರು ಸಂಖ್ಯೆಯಲ್ಲಿ ಹಾಜರಿದ್ದು, ದೇವರ ವಿಶ್ವರೂಪದರ್ಶನದ ಸೊಬಗನ್ನು ಕಣ್ತುಂಬಿಕೊಂಡರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article