ಸುಳ್ಳು ಸುದ್ದಿ: ಕೇಸು ದಾಖಲು
Monday, October 6, 2025
ಬಂಟ್ವಾಳ: ಪುದು ಗ್ರಾಮದ ಮಾರಿಪಳ್ಳ ಪಾಡಿ ಎಂಬಲ್ಲಿ ಮನೆಯನ್ನೇ ಅಕ್ರಮ ಕಸಾಯಿ ಖಾನೆಯನ್ನಾಗಿಸಿಕೊಂಡು ಅಕ್ರಮವಾಗಿ ಗೋಹತ್ಯೆ ನಡೆಸಿದ ಹಿನ್ನೆಲೆಯಲ್ಲಿ ಆರೋಪಿಯ ಮನೆಯನ್ನು ಕಾನೂನು ಬದ್ದವಾಗಿ ಜಪ್ತಿ ಮಾಡಲಾಗಿರುವ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿ ಸುಳ್ಳು ಸುದ್ದಿ ಹರಡಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಸ್ಲಿಂ ವಾಯ್ಸ್ ಎಂಬ ವಾಟ್ಸಾಪ್ ಗ್ರೂಪಿನಲ್ಲಿ ರಾಯಲ್ ಜಾಕೀರ್ ಎಂಬ ಹೆಸರಿನ ಮೊಬೈಲ್ ಸಂಖ್ಯೆಯಿಂದ ಕಾನೂನು ಬದ್ದವಾಗಿ ನಡೆಸಲಾಗಿರುವ ಜಪ್ತಿ ಕಾರ್ಯದ ಬಗ್ಗೆ ಅಕ್ಷೇಪ ವ್ಯಕ್ತಪಡಿಸುತ್ತಾ, ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುವ ಮೂಲಕ ಸಾರ್ವಜನಿಕರಿಗೆ ಭಯ ಬೀತಿಯನ್ನುಂಟು ಮಾಡಿ ಹಾಗೂ ಸಾರ್ವಜನಿಕ ನೆಮ್ಮದಿಯ ವಿರುದ್ಧ ಅಪರಾಧವೆಸಗುವಂತೆ ಮಾಡಿರುವುದು ಕಂಡು ಬಂದಿದೆ ಎಂದು ಆರೋಪಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.