ಉಡುಪಿ ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಎಸೋಸಿಯೇಶನ್‌ಗೆ ರಾಜ್ಯ ಮಟ್ಟದ ರೋಡ್ ಸೈಕ್ಲಿಂಗ್ ಸ್ಫರ್ಧೆಯಲ್ಲಿ 1 ಚಿನ್ನ. 1 ಕಂಚು

ಉಡುಪಿ ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಎಸೋಸಿಯೇಶನ್‌ಗೆ ರಾಜ್ಯ ಮಟ್ಟದ ರೋಡ್ ಸೈಕ್ಲಿಂಗ್ ಸ್ಫರ್ಧೆಯಲ್ಲಿ 1 ಚಿನ್ನ. 1 ಕಂಚು


ಶಿರ್ವ: ನೂತನವಾಗಿ ರಚಿತವಾದ ಉಡುಪಿ ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಎಸೋಸಿಯೇಶನ್ ತನ್ನ ಪಾದಾರ್ಪಣಾ ಪ್ರಯತ್ನದಲ್ಲೇ ಬೆಳಗಾವಿಯಲ್ಲಿ ನಡೆದ 16ನೇ ಕರ್ನಾಟಕ ರಾಜ್ಯ ಮಟ್ಟದ ರೋಡ್ ಸೈಕ್ಲಿಂಗ್ ಸ್ಫರ್ಧೆಯಲ್ಲಿ 1 ಚಿನ್ನ. 1 ಕಂಚಿನ ಪದಕ ಪಡೆಯುವುದರೊಂದಿಗೆ, ಮೂವರು ಸೈಕ್ಲಿಸ್ಟ್‌ಗಳು ರಾಷ್ಟ್ರೀಯ ಮಟ್ಟದ ರೋಡ್ ಸೈಕ್ಲಿಂಗ್ ಸ್ಫರ್ಧೆಗೆ ಆಯ್ಕೆಯಾಗಿದ್ದಾರೆ.

ಮಹಿಳೆಯರ ಮುಕ್ತ ಸ್ಫರ್ಧೆಯಲ್ಲಿ ಗ್ಲಿಯೋನಾ ಡಿಸೋಜ ಚಿನ್ನದ ಪದಕವನ್ನೂ, ಪುರುಷರ 23 ವರ್ಷದ ಸ್ಫರ್ಧೆಯಲ್ಲಿ ಹಾರ್ದಿಕ್ ರೈ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕವನ್ನು ಪಡೆಯುವುದರೊಂದಿಗೆ ನವೆಂಬರ್ ತಿಂಗಳಲ್ಲಿ ಒರಿಸ್ಸಾದಲ್ಲಿ ಜರುಗುವ ರಾಷ್ಟ್ರೀಯ ಮಟ್ಟದ ರೋಡ್ ಸೈಕ್ಲಿಂಗ್ ಸ್ಫರ್ಧೆಗೆ ಆಯ್ಕೆಯಾಗಿದ್ದಾರೆ. ಪುರುಷರ 23 ವರ್ಷದ ವಯೋಮಿತಿ ವರ್ಗದಲ್ಲಿ ನೀಲ್ ಡಿಸೋಜಾರವರು ತಮ್ಮ ಅಸಾಧಾರಣ ಸಾಧನೆಯೊಂದಿಗೆ ರಾಷ್ಟ್ರೀಯ ಮಟ್ಟದ ಸ್ಫರ್ಧೆಗೆ ಆಯ್ಕೆಯಾಗಿದ್ದಾರೆ.

ತಂಡದ ಇತರ ಸೈಕ್ಲಿಸ್ಟ್‌ಗಳಾದ ಶ್ರೀನಿಧಿ ಉರಾಳ, ದೀಪಕ್ ಕುಮಾರ್, ಶುಭಾ, ದರ್ಶಿಲ್, ಜೋಶುವಾ ಫೆರ್ನಾಂಡಿಸ್ ಗಮನಾರ್ಹ ಸಾಧನೆಯೊಂದಿಗೆ ಗಮನ ಸೆಳೆದಿದ್ದಾರೆ. ಹಾರ್ದಿಕ್ ರೈಯವರು ಈ ತಿಂಗಳಲ್ಲಿ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ನಡೆಯುವ ರಾಷ್ಟ್ರೀಯ ಎಮ್‌ಟಿಬಿ ಸೈಕ್ಲಿಂಗ್ ಸ್ಫರ್ಧೆಗೂ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ವಿಧಾನ ಪರಿಷತ್ ಸದಸ್ಯ ವಿವೇಕ್ ರಾವ್ ಪಾಟೀಲ್, ರಾಜ್ಯ ಸೈಕ್ಲಿಂಗ್ ಎಸೋಸಿಯೇಶನ್ ಅದ್ಯಕ್ಷ ಜಿ.ವಿ.ಪಾಟೀಲ್, ರಾಜ್ಯ ಕಾರ್ಯದರ್ಶಿ ಶ್ರೀಶೈಲ ಎಂ,ಕುರನಿ, ನಿರ್ದೇಶಕ ರಾಜಿ ಬೀರಾದಾರ, ಸಂಚಾಲಕ ರಮೇಶ್ ಪೂಜಾರಿ ಇವರಿಂದ ತಂಡದೊಂದಿಗೆ ಅಧ್ಯಕ್ಷ ಹಾಗೂ ತರಬೇತುದಾರರಾದ ಶಿರ್ವದ ಖ್ಯಾತ ದಂತ ವೈದ್ಯ ಡಾ. ಗುರುರಾಜ್, ತಂಡದ ವ್ಯವಸ್ಥಾಪಕ ಹಾಗೂ ಉಪಾಧ್ಯಕ್ಷ ಡಾ. ಸೈಯದ್ ಮುಸ್ತಾಫಾ ಹಸನಿ, ಕೋಶಾಧಿಕಾರಿ, ಕ್ರೀಡಾ ಸಂಯೋಜಕ ದೀಪಕ್ ಕುಮಾರ್, ತಂಡದೊಂದಿಗೆ ಪ್ರಶಸ್ತಿ ಸ್ವೀಕರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article