ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲು: ಅಧಿಕಾರಿಗಳ ನಡೆ ಖಂಡನಿಯ

ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲು: ಅಧಿಕಾರಿಗಳ ನಡೆ ಖಂಡನಿಯ

ಬಂಟ್ವಾಳ: ತಾಲೂಕು ಪಂಚಾಯತ್ ಮಾಜಿ ಸದಸ್ಯರೂ ಹಾಗೂ ಬಿಜೆಪಿ ಮುಖಂಡರಾದ ಪ್ರಭಾಕರ ಪ್ರಭು ಅವರು ಬಂಟ್ವಾಳ ತಾಲೂಕು ಪಂಚಾಯತ್ ಹೆಸರನ್ನು ತನ್ನ ಲೆಟರ್ ಹೆಡ್ ನಲ್ಲಿ ಬಳಸಿಕೊಂಡು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕುರಿತು ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಜ್ಞಾಪನ ಪತ್ರ ಮೂಲಕ ಒತ್ತಡ ಹೇರದಂತೆ ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಮನವಿ ಮಾಡಿರುವ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸೂಚನೆಯಂತೆ ಬಂಟ್ವಾಳ ತಾ. ಪಂ. ಇಒ ಅವರು ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸಿರುವ ಅಧಿಕಾರಿಗಳ ನಡೆಯನ್ನು ಬಂಟ್ವಾಳ ತಾಲೂಕು ರಾಯಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹರೀಶ್ ಆಚಾರ್ಯ ರಾಯಿ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಮೇಲಾಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ತಾ.ಪಂ. ಇಒ ಅವರ ಮೂಲಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಪ್ರಕರಣ ದಾಖಲಿಸಿರುವುದು ಸಾರ್ವಜನಿಕರಲ್ಲಿ ಸಂಶಯ ಮೂಡಿದೆಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಭಾಕರ ಪ್ರಭು ರವರು ಬರೆದಿರುವ ಲೇಟರ್ ಹೆಡ್ ಪತ್ರದಲ್ಲಿ ಮಾಜಿ ಸದಸ್ಯರು ಎಂದೂ ಉಲ್ಲೇಖಿಸಲಾಗಿದ್ದರೂ ರಾಜಕೀಯ ದುರುದ್ದೇಶದಿಂದ ತಾ.ಪಂ. ಇಒ ಅವರು ದೂರು ದಾಖಲಿಸಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವಿಚಾರದ ಬಗ್ಗೆ ಪತ್ರದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ಆದೇಶ ಮತ್ತು ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿಯವರ ಪತ್ರಿಕಾ ಪ್ರಕಟಣೆಯಂತೆ ಇರುವ ವಿಷಯ ಕುರಿತು ಯಾರಿಗೂ ಒತ್ತಡ ಹೇರದಂತೆ  ಜಿಲ್ಲಾ ಮಟ್ಟದ ಅಧಿಕಾರಿಯವರಿಗೆ ಅವರು ಪತ್ರ ಬರೆದಿದ್ದಾರೆಯೇ ಹೊರತು ಲೇಟರ್ ಹೆಡ್ ಮೂಲಕ ತಾಲೂಕು ಪಂಚಾಯತ್ ಇಲಾಖೆಯನ್ನು ದುರುಪಯೋಗ ಪಡಿಸಿರುವುದಿಲ್ಲ ಎಂದು ಹರೀಶ್ ಆಚಾರ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿನಕ್ಕೆ 100 ರಂತೆ ಸಮೀಕ್ಷೆ ಮಾಡಬೇಕು ಎಂದೂ ಪ್ರತಿ ಪಂಚಾಯತ್‌ನ ಸಿಬ್ಬಂದಿಗಳಿಗೆ ಗುರಿ ನಿಗದಿ ಪಡಿಸಿರುವುದು ಪರೋಕ್ಷವಾಗಿ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಭಾಗವಹಿಸಲೇಬೇಕೆಂಬಂತೆ ಬಾಸವಗುತ್ತಿದೆ. ಜಿಲ್ಲೆಯಲ್ಲಿ ಅದೆಷ್ಟೋ ಮಾಜಿ ಸಚಿವರು, ಮಾಜಿ ಶಾಸಕರು, ಮಾಜಿ ಸಂಸದರು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಅವರು ಪ್ರತಿನಿದಿಸಿರುವ ಕರ್ನಾಟಕ ಸರಕಾರ, ಇನ್ನಿತರ ಸ್ಥಳೀಯ ಸಂಸ್ಥೆಗಳ ಹೆಸರಿನಲ್ಲಿ ಲೇಟರ್ ಹೆಡ್‌ಗಳು ಕಾರ್ಯಾಚರಣೆ ಆಗುತ್ತಿರುವುದನ್ನು ನಾವೆಲ್ಲರೂ ಕಂಡಿದ್ದೇವೆ. ಕೇವಲ ಸಮೀಕ್ಷೆಗೆ ಒತ್ತಡ ಹೇರದಂತೆ ಬರೆದಿರುವ ಪತ್ರಕ್ಕೆ ಕ್ರಮ ಕೈಗೊಳ್ಳಲು ಸಾಧ್ಯ ವಾಗದ ಕಾರಣ ಲೇಟರ್ ಹೆಡ್‌ನಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಎಂಬುದುದಾಗಿ ನಮೂದು ಮಾಡಿರುವುದರ ನೆಪದಲ್ಲಿ ಪೊಲೀಸ್ ದೂರು ನೀಡಿ ಪ್ರಕರಣ ದಾಖಲಿಸಿರುವ ತಾ.ಪಂ.ಇಒ ಅವರ ನಡೆ ಹತ್ತು ಹಲವು ಸಂಶಯಕ್ಕೆ ಕಾರಣವಾಗಿದೆ ಎಂದು ಹರೀಶ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article