ತಾಯಿ-ಮಗಳ ನಡುವೆ ಜಗಳ: ಪುತ್ರಿಯನ್ನೇ ಕೊಂದ ತಾಯಿ

ತಾಯಿ-ಮಗಳ ನಡುವೆ ಜಗಳ: ಪುತ್ರಿಯನ್ನೇ ಕೊಂದ ತಾಯಿ

ಕಾರ್ಕಳ: ತಾಯಿ-ಮಗಳ ನಡುವೆ ಜಗಳ ತೀವ್ರಗೊಂಡು ತಾಯಿಯೇ ತನ್ನ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದಲ್ಲಿ ನಡೆದಿದೆ. 

ಮೃತ ಯುವತಿಯನ್ನು ಕಾರ್ಕಳದ ಹಿರ್ಗಾನ ಗ್ರಾಮದ ನಿವಾಸಿಗಳಾದ ಶೇಖ್ ಮುಸ್ತಫಾ ಮತ್ತು ಗುಲ್ಜಾರ್ ಬಾನು ಅವರ ಪುತ್ರಿ ಶಿಫನಾಜ್ ಎಂದು ಗುರುತಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಶಿಫನಾಜ್ ತಾನು ಪ್ರೀತಿಸುತ್ತಿದ್ದ ಯುವಕನನ್ನು ಭೇಟಿಯಾಗಲು ಉಡುಪಿಗೆ ಹೋಗುವುದಾಗಿ ಹೇಳಿಕೊಂಡಿದ್ದಳು. ಇದಕ್ಕೆ ಆಕೆಯ ತಾಯಿ ಗುಲ್ಜಾರ್ ಬಾನು ವಿರೋಧ ವ್ಯಕ್ತಪಡಿಸಿದ್ದು, ಆವೇಶದಲ್ಲಿ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮೊದಲಿಗೆ, ಈ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಲಾಗಿತ್ತು. ಆದರೆ, ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಕತ್ತು ಹಿಸುಕುವಿಕೆಯಿಂದಲೇ ಸಾವು ಸಂಭವಿಸಿದೆ ಎಂದು ದೃಢಪಟ್ಟಿದೆ.

ವರದಿಯ ಆಧಾರದ ಮೇಲೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ತಾಯಿ ಗುಲ್ಜಾರ್ ಬಾನು (45) ಅವರನ್ನು ಬಂಧಿಸಿದ್ದಾರೆ. ಬಂಧನದ ನಂತರ ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಕಾರ್ಕಳ ನಗರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article