1.16 ಕ್ವಿಂಟಾಲ್ ಗಾಂಜಾ ವಶ
Wednesday, October 8, 2025
ಕಾಸರಗೋಡು: ವರ್ಕಾಡಿ ಸುಳ್ಯಮೆ ಎಂಬಲ್ಲಿ ಮನೆಯ ಶೆಡ್ ನಲ್ಲಿ ಬಚ್ಚಿಡಲಾಗಿದ್ದ 1.16 ಕ್ವಿಂಟಾಲ್ ಗಾಂಜಾ ಮಂಜೇಶ್ವರ ಪೊಲೀಸರು ಮಂಗಳವಾರ ರಾತ್ರಿ ವಶಪಡಿಸಿ ಕೊಂಡಿದ್ದಾರೆ.
ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದ್ದು, ಮನೆಯ ಶೆಡ್ ನಲ್ಲಿ ನಾಲ್ಕು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಗಾಂಜಾ ಪತ್ತೆಯಾಗಿದೆ.
ಗಾಂಜಾ ಸಾಗಾಟಕ್ಕೆ ಬಳಸಿದ್ದ ಟೆಂಪೋವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.