ಈಜಲು ಹೋದ ಮೂವರು ಸಮುದ್ರಪಾಲು
Tuesday, October 14, 2025
ಕುಂದಾಪುರ: ಈಜಲು ತೆರಳಿದ್ದ ನಾಲ್ವರು ಮಕ್ಕಳಲ್ಲಿ ಮೂವರು ಸಮುದ್ರಪಾಲದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ತು ಬೀಚ್‌ನಲ್ಲಿ ಮಂಗಳವಾರ ಸಂಜೆ ನಡೆದಿದೆ.
ಸ್ಥಳೀಯ ನಿವಾಸಿಗಳಾದ ಸಂಕೇತ್ (16), ಸೂರಜ್ (15), ಆಶೀಶ್ (14) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಮೃತದೇಹ ಪತ್ತೆಯಾಗಿದೆ.
ಈಜಲು ತೆರಳಿದ್ದ ನಾಲ್ವರಲ್ಲಿ ಓರ್ವ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.ಮೃತರಲ್ಲಿ ಓರ್ವ ಪಿಯುಸಿ ವಿದ್ಯಾರ್ಥಿಯಾಗಿದ್ದು ಇನ್ನಿಬ್ಬರು ಸರಕಾರಿ ಶಾಲೆಯಲ್ಲಿ ಓದುತ್ತಿದ್ದರು ಎಂದು ತಿಳಿದುಬಂದಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.ಘಟನಾ ಸ್ಥಳಕ್ಕೆ ಬೈಂದೂರು ಪಿಎಸ್‌ಐ ತಿಮ್ಮೇಶ್ ಮೊದಲಾದವರು ಭೇಟಿ ನೀಡಿದ್ದಾರೆ.