ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಮೃತ್ಯು
Tuesday, October 14, 2025
ಬಂಟ್ವಾಳ: ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನವೊಂದು ರಸ್ತೆಯಲ್ಲಿ ಉರುಳಿ ಬಿದ್ದು ಸವಾರ ಮೃತಪಟ್ಟಿರುವ ಘಟನೆ ರಾ.ಹೆ.ಯ ತುಂಬೆ ರಾಮಲ್ ಕಟ್ಟೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮೃತ ಸವಾರನನ್ನು ಬಂಟ್ವಾಳಕಸ್ಬಾ ಗ್ರಾಮದ ಹೊಸ್ಮಾರು ನಿವಾಸಿ ಗೋಪಾಲ ಪೂಜಾರಿ ಎಂಬವರ ಪುತ್ರ ಧನುಷ್ (23) ಎಂದು ಗುರುತಿಸಲಾಗಿದೆ.
ಸರ್ವೆ ಇಲಾಖೆಯ ಗುತ್ತಿಗೆಯಾಧಾರದಲ್ಲಿ ಉದ್ಯೋಗಿಯಾಗಿರುವ ಧನುಷ್ ಸಂಜೆಯ ಹೊತ್ತಿಗೆ ಮಂಗಳೂರಿನಿಂದ ಬಂಟ್ವಾಳ ಹೊಸ್ಮಾರುವಿನಲ್ಲಿರುವ ಮನೆಗೆ ಬರುತ್ತಿದ್ದಾಗ ರಾಮಲ್ ಕಟ್ಟೆ ತಿರುವಿನಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ಈ ಅಪಘಾತ ಸಂಭವಿಸಿದೆ.
ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಇವರನ್ನು ಕೂಡಲೇ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತಾದರೂ ಧನುಷ್ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ತಿಳಿದು ಬಂದಿದೆ.
ಬಂಟ್ವಾಳ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.