ನಿವೃತ್ತ ಬ್ಯಾಂಕ್ ಉದ್ಯೋಗಿ ಕೆ. ಪಾಂಡುರಂಗ ನಾಯಕ್ ಮನೆ ಮೇಲೆ ಮೆಸ್ಕಾಂ ಅಧಿಕಾರಿಗಳ ದಾಳಿ
Wednesday, October 15, 2025
ಕುಂದಾಪುರ: ಇಂದು ಮಧ್ಯಾಹ್ನ ಕುಂದಾಪುರದ ಹಂಗಳೂರು ಗ್ರಾಮಪಂಚಾಯತ್ ವ್ಯಾಪ್ತಿಯ ಸಂಜಯ ಗಾಂಧಿ ರಸ್ತೆಯಲ್ಲಿರುವ ಗುರುಪ್ರಸಾದ್ ನಿಲಯದ ನಿವೃತ್ತ ಬ್ಯಾಂಕ್ ಉದ್ಯೋಗಿ ಕೆ. ಪಾಂಡುರಂಗ ನಾಯಕ್ ರವರು ತಾನು ವಾಸವಾಗಿರುವ ಹೊಸ ಮನೆಗೆ ಒಂದೇ ಡೋರ್ ನಂಬರ್ ಪಡೆದಿರುತ್ತಾರೆ.
ಆದರೆ ಸರಿಸುಮಾರು 20 ವರ್ಷಗಳಿಂದ ತಾನು ಇದ್ದ ಹಳೆ ಹಂಚಿನ ಮನೆಗೆ ಯಾವುದೇ ಡೋರ್ ನಂಬರ್ ಪಡೆದಿರುವುದಿಲ್ಲ ಅಲ್ಲದೆ ಹಂಚಿನ ಮನೆಯನ್ನು ಬಾಡಿಗೆ ನೀಡಿದ್ದು ಅದಕ್ಕೆ ಯಾವುದೇ ಡೋರ್ ನಂಬರ್ ಪಡೆಯದೇ, ತನ್ನ ಹೊಸ ಮನೆಗೆ ನೀಡಿದ ವಿದ್ಯುತ್ ಮೀಟರ್ ನಿಂದ ಬಾಡಿಗೆ ಮನೆಗೆ ಕರೆಂಟ್ ಒದಗಿಸಿದ್ದನ್ನು ಸಾರ್ವಜನಿಕರು ಮೆಸ್ಕಾಂ ದೂರು ಪ್ರಾಧಿಕಾರಕ್ಕೆ ಇವರ ಅಕ್ರಮ ಕರೆಂಟ್ ಕಳ್ಳತನದ ಮಾಹಿತಿ ನೀಡಿದ್ದು, ಸಾರ್ವಜನಿಕ ಮಾಹಿತಿ ಮೇರೆಗೆ ಮೆಸ್ಕಾಂ ಅಧಿಕಾರಿಗಳು ಮತ್ತು ಮೆಸ್ಕಾಂ ಜಾಗ್ರತ್ ದಳ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ, ಪರಿಶೀಲಿಸಿ ಇವರ ಅಕ್ರಮ ಸಾಭಿತ್ತಾಗಿದ್ದು ಇವರ ಮೇಲೆ ಮುಂದಿನ ಕ್ರಮಕ್ಕೆ ಆದೇಶ ಮಾಡಿದ್ದರೆ ಎಂದು ಮಾಹಿತಿ ಲಭ್ಯವಾಗಿದೆ.