ಅ.12 ರಂದು ರಾಜ್ಯಮಟ್ಟದ ಮೆಡಲಿಸ್ಟ್, ನಾನ್ ಮೆಡಲಿಸ್ಟ್ ಈಜು ಸ್ಪರ್ಧೆ

ಅ.12 ರಂದು ರಾಜ್ಯಮಟ್ಟದ ಮೆಡಲಿಸ್ಟ್, ನಾನ್ ಮೆಡಲಿಸ್ಟ್ ಈಜು ಸ್ಪರ್ಧೆ

ಮಂಗಳೂರು: ನಗರದ ಮಂಗಳಾ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ರಾಜ್ಯಮಟ್ಟದ ಮೆಡಲಿಸ್ಟ್ ಹಾಗೂ ನಾನ್ ಮೆಡಲಿಸ್ಟ್ ಈಜು ಸ್ಪರ್ಧೆ ಅ.12ರಂದು ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಮಂಗಳಾ ಕ್ರೀಡಾಂಗಣದ ಕಾರ್ಪೋರೇಶನ್ ಈಜುಕೊಳದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಗಳಾ ಈಜು ಸಂಸ್ಥೆ ಅಧ್ಯಕ್ಷ ಪ್ರಮುಖ್ ರೈ, ಮಂಗಳಾ ಈಜು ಕ್ಲಬ್ 35 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಸ್ಪರ್ಧೆ ನಡೆಯಲಿದೆ. ಅಂತಾರಾಷ್ಟ್ರೀಯ, ರಾಷ್ಟ್ರ, ರಾಜ್ಯಮಟ್ಟದ ಪದಕ ವಿಜೇತರ ಸಹಿತ 350ಕ್ಕೂ ಅಧಿಕ ಮಂದಿ ಸ್ಪರ್ಧಾಳುಗಳು, 50ಕ್ಕೂ ಹೆಚ್ಚು ತೀರ್ಪುಗಾರರು, ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆಯಿದೆ. 6 ವರ್ಷ ಮೇಲ್ಪಟ್ಟ ಮಕ್ಕಳಿಂದ ಹಿಡಿದು ಹಿರಿಯ ಈಜುಪಟುಗಳು ಸೇರಿದಂತೆ ವಿವಿಧ ವಯೋಮಾನದ 18 ವಿಭಾಗಗಳಲ್ಲಿ ಬಾಲಕರು, ಬಾಲಕಿಯರು, ಪುರುಷರು, ಮಹಿಳೆಯರ ತಂಡಗಳು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಈಜು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಅ.12ರಂದು ಬೆಳಗ್ಗೆ 10ಕ್ಕೆ ಒಲಿಂಪಿಯನ್ ಹಾಕಿ ಕ್ರೀಡಾಪಟು, ಲಕ್ಷ್ಯಣ್ ಕ್ರೀಡಾ ಅಕಾಡೆಮಿ ಜಂಟಿ ನಿರ್ದೇಶಕ ಧನರಾಜ್ ಪಿಳ್ಳೆ ಕ್ರೀಡಾಕೂಟ ಉದ್ಘಾಟಿಸುವರು. ಲಕ್ಷ್ಯಣ್ ಕ್ರೀಡಾ ಅಕಾಡೆಮಿ ಸಹಸಂಸ್ಥಾಪಕ ಜೀವನ್ ಮಹದೇವು, ಎಲ್. ಯಾಶ್ಚಿಕಾ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಗಣ್ಯರು ಭಾಗವಹಿಸುವರು. ಸಮಾರೋಪ ಮತ್ತು ಬಹುಮಾನ ವಿತರಣೆ ಸಮಾರಂಭದಲ್ಲಿ ಸ್ಪೀಕರ್ ಯು.ಟಿ. ಖಾದರ್, ಸಂಸದ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಕಿಶೋರ್ಕುಮಾರ್ ಪುತ್ತೂರು, ಐವನ್ ಡಿಸೋಜ, ಗಣ್ಯರು ಭಾಗವಹಿಸುವರು. ಪನಾಮಾ ಕಾರ್ಪೋರೇಶನ್ ಕ್ರೀಡಾಕೂಟಕ್ಕೆ ಸಹಯೋಗ ಹಾಗೂ ಪ್ರಾಯೋಜಕತ್ವ ವಹಿಸಿದೆ ಎಂದರು.

ಮಂಗಳಾ ಈಜು ಸಂಸ್ಥೆ ಕಾರ್ಯದರ್ಶಿ ಎಂ. ಶಿವಾನಂದ ಗಟ್ಟಿ, ಮುಖ್ಯ ಈಜು ತರಬೇತುದಾರ ಶಿಶಿರ್ ಎಸ್. ಗಟ್ಟಿ, ತರಬೇತುದಾರ ರಾಜೇಶ್ ಖಾರ್ವಿ, ಕೋಶಾಧಿಕಾರಿ ಧನಂಜಯ್ ಶೆಟ್ಟಿ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article