ಮಂಗಳೂರು ವಿ.ವಿ.ಶೈಕ್ಷಣಿಕ ಮಂಡಳಿ ಸಭೆ-ಸೆಮಿಸ್ಟರ್ ಅವಧಿ ವಿಸ್ತರಣೆ, ಕೆನರಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ: ಪ್ರೊ. ಪಿ.ಎಲ್. ಧರ್ಮ

ಮಂಗಳೂರು ವಿ.ವಿ.ಶೈಕ್ಷಣಿಕ ಮಂಡಳಿ ಸಭೆ-ಸೆಮಿಸ್ಟರ್ ಅವಧಿ ವಿಸ್ತರಣೆ, ಕೆನರಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ: ಪ್ರೊ. ಪಿ.ಎಲ್. ಧರ್ಮ


ಮಂಗಳೂರು: ಪದವಿ, ಸ್ನಾತಕೋತ್ತರ ಪದವಿ ಸೆಮಿಸ್ಟರ್ ಅವಧಿಯನ್ನು ಒಂದು ತಿಂಗಳ ಕಾಲ ಡಿ.20 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ತಿಳಿಸಿದ್ದಾರೆ.

ಅವರು ಇಂದು ಮಂಗಳೂರು ವಿಶ್ವ ವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬದಿಂದಾಗಿ ಪಠ್ಯ ಚಟುವಟಿಕೆಗಳಲ್ಲಿ ಆಗಿರುವ ಹಿನ್ನಡೆಯನ್ನು ಸರಿದೂಗಿಸುವುದಕ್ಕಾಗಿ ಹಾಲಿ ಶೈಕ್ಷಣಿಕ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ವೇಳಾಪಟ್ಟಿಯನ್ನು ಉನ್ನತ ಶಿಕ್ಷಣ ಇಲಾಖೆಯು ಪರಿಷ್ಕರಿಸಿದೆ. ಆದುದರಿಂದ ಮಂಗಳೂರು ವಿ.ವಿ.ಯ ಸೆಮಿಸ್ಟರ್ ಅವಧಿ ಜು. 28ರಿಂದ ನ. 20ರ ತನಕ ಇದ್ದುದು ಈಗ ಡಿ. 20ರ ವರೆಗೆ ವಿಸ್ತರಣೆಗೊಂಡಿದೆ ಡಿ.29ರಂದು ಪ್ರಥಮ,ತೃತೀಯ ಹಾಗೂ ಐದನೆ ಸೆಮಿಸ್ಟರ್ ಗಳ ಪರೀಕ್ಷೆ ಮತ್ತು ಮೌಲ್ಯ ಮಾಪನ ಪ್ರಕ್ರೀಯೆ ನಡೆಯಲಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.

ಸ್ವಾಯತ್ತ ಸ್ಥಾನಮಾನ..

ನಗರದ ಮಹಾತ್ಮ ಗಾಂಧಿ ಗಾಂಧಿ ರಸ್ತೆ ಕೊಡಿಯಾಲ್ ಬೈಲ್ ನಲ್ಲಿರುವ ಕೆನರಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ನೀಡುವ ಪ್ರಸ್ತಾವನೆಯನ್ನು ಶೈಕ್ಷಣಿಕ ಮಂಡಳಿ ಸಭೆ ಅನುಮೋಧಿಸಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ದೃಹಿಕ ಶಿಕ್ಷಣ ನಿರ್ದೇಶಕ , ಪ್ರಭಾರ ಕುಲಪತಿಮತ್ತು ಕುಲಸಚಿವರಾಗಿದ್ದ ಕಿಶೋರ್ ಕುಮಾರ್ ನಿಧನರಾಗಿರುವುದಕ್ಕೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

ಯು.ಜಿ.ಸಿ ನಿರ್ದೇಶನದ ಪ್ರಕಾರ ಪಿಎಚ್ ಡಿ ಕಾರ್ಯಕ್ರಮ ನಿಯಂತ್ರಿಸುವ ಮತ್ತು ಕನಿಷ್ಟ ಮಾನದಂಡ ವಿಧಿಸುವ ಬಗ್ಗೆ ಪರಿಷ್ಕೃತ ನಿಯಮಾವಳಿಯನ್ನು ಸಭೆಯಲ್ಲಿ ಮಂಡಿಸಲಾಯಿತು.

ಸರ್ಕಾರಿ ಪದವಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಆಗದ ಕಾರಣ ಬೋಧನಾ ಚಟುವಟಿಕೆ ಅಸ್ತವ್ಯಸ್ತಗೊಂಡಿರುವ ಕಾರಣ ಕಾಲೇಜು ಶಿಕ್ಷಣ ಇಲಾಖೆ ಈ ಪರಿಷ್ಕರಣೆ ಮಾಡಿದೆ ಎಂದರು.

ಅದರಂತೆ 1, 3, 5ನೇ ಸೆಮಿಸ್ಟರ್ ತರಗತಿಗಳು ಹಿಂದೆ ಹೇಳಿದಂತೆ ನವೆಂಬರ್ 22ಕ್ಕೆ ಮುಗಿಯುವ ಬದಲು ಡಿಸೆಂಬರ್ 20ಕ್ಕೆ ಮುಗಿಯಲಿವೆ. 2, 4, 6ನೇ ಸೆಮಿಸ್ಟರ್ ತರಗತಿಗಳು 12.01.2026 ರ ಬದಲು 10.02.2026ರಿಂದ ಕಾರ್ಯಾರಂಭಿಸಲಿವೆ. 2, 4, 6ನೇ ಸೆಮಿಸ್ಟರ್ ತರಗತಿಗಳು 08.05.2026ಕ್ಕೆ ಪೂರ್ಣಗೊಳ್ಳುವ ಬದಲಿಗೆ 05.06.2026ಕ್ಕೆ ಪೂರ್ಣಗೊಳ್ಳಲಿವೆ. ಮುಂದಿನ ಶೈಕ್ಷಣಿಕ ವರ್ಷ 2026ರ ಆಗಸ್ಟ್‌ನಲ್ಲಿ ಆರಂಭಗೊಳ್ಳಲಿದೆ ಎಂದು ಕುಲಪತಿ ತಿಳಿಸಿದರು.

ಮಂಗಳೂರು ವಿವಿಯಲ್ಲಿ ಕೋವಿಡ್ ನಂತರ ವೇಳಾಪಟ್ಟಿಯಲ್ಲಿ ಸುಮಾರು 90 ದಿನಗಳ ವಿಳಂಬ ಉಂಟಾಗಿದ್ದುದನ್ನು 45 ದಿನಕ್ಕೆ ಇಳಿಸಿದ್ದೆವು. ಹೊಸ ಶೈಕ್ಷಣಿಕ ವೇಳಾಪಟ್ಟಿಯನ್ನು ಎಲ್ಲ ಕಾಲೇಜುಗಳಿಗೆ ನೀಡಲಾಗಿತ್ತು. ಆದರೆ ಈಗ ಸರ್ಕಾರದ ಆದೇಶವಾದ್ದರಿಂದ ಏನೂ ಮಾಡುವಂತಿಲ್ಲ. ನಮ್ಮಲ್ಲಿ ಅತಿಥಿ ಉಪನ್ಯಾಸಕರ ನೇಮಕ ಮೊದಲೇ ಆಗಿತ್ತು, ಆದರೆ ಸರ್ಕಾರದ ಆದೇಶದಂತೆ ಅತಿಥಿ ಉಪನ್ಯಾಸಕರಿಗೆ ಒಂದು ತಿಂಗಳ ವೇತನ ರಹಿತ ರಜೆ ಇರುತ್ತದೆ. ವಿದ್ಯಾರ್ಥಿಗಳು ರಜೆಯಲ್ಲಿ ಅಧ್ಯಯನ ಮಾಡಬೇಕಿರುತ್ತದೆ. ಎಲ್ಲ ಅಧೀನ ಖಾಸಗಿ ಕಾಲೇಜುಗಳಲ್ಲೂ ವಿದ್ಯಾರ್ಥಿಗಳಿಗೆ ಅಧ್ಯಯನ ರಜೆ ನೀಡಬಹುದು, ಉತ್ತಮವಾಗಿ ಪರೀಕ್ಷೆಗೆ ಸಿದ್ಧಗೊಳಿಸಲು ಅವಕಾಶ ಇದೆ ಎಂದರು.

ವಿವಿಯು ಮೌಲ್ಯಮಾಪನವನ್ನು ತ್ವರಿತಗೊಳಿಸುವ ಇರಾದೆ ಹೊಂದಿದ್ದು, ರಿಮೋಟ್ ಆಧಾರದಲ್ಲಿ ಇದನ್ನು ಕೈಗೊಳ್ಳುವ ಬಗ್ಗೆ ಪ್ರಸ್ತಾವನೆಯನ್ನು ಯುಯುಸಿಎಂಎಸ್ಗೆ ಕಳುಹಿಸಲಾಗಿದೆ. ಅಲ್ಲಿ ಅನುಮೋದನೆ ಲಭಿಸಿದರೆ ಮೌಲ್ಯಮಾಪನ ಚುರುಕಾಗಬಹುದು ಎಂದರು.

ನಿಯಮಾವಳಿ ಬದಲಾವಣೆ..

ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಪಿಎಚ್‌ಡಿ ಪದವಿ ಕಾರ್ಯಕ್ರಮಗಳಿಗೂ ಕನಿಷ್ಠ ಮಾನದಂಡ ಮತ್ತು ಕಾರ್ಯವಿಧಾನವನ್ನು ಪರಿಷ್ಕರಿಸಿ ನಿಗದಿಪಡಿಸುವಂತೆ ಯುಜಿಸಿ ನಿರ್ದೇಶನ ನೀಡಿದೆ. ಅದರಂತೆ ಮಂಗಳೂರು ವಿವಿಯಲ್ಲೂ ಪಿಎಚ್‌ಡಿ ಕಾರ್ಯಕ್ರಮವನ್ನು ನಿಯಂತ್ರಿಸುವ ವಿನಿಯಮದ ಬಗ್ಗೆ ಚರ್ಚೆ ನಡೆಯಿತು. ಹೊರರಾಜ್ಯಗಳ ವಿದ್ಯಾರ್ಥಿಗಳಿಗೆ ಇಲ್ಲಿ ಮೀಸಲಾತಿ ಅನ್ವಯವಾಗದ ಹಿನ್ನೆಲೆಯಲ್ಲಿ ಸೀಟುಗಳನ್ನು ಬಾಕಿ ಇರಿಸಬೇಕೇ ಬೇಡವೇ ಎನ್ನುವ ಬಗ್ಗೆ ಚರ್ಚೆ ನಡೆದಿದ್ದು, ಇನ್ನೊಂದು ಪ್ರತ್ಯೇಕ ಸಭೆ ನಡೆಸಲು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕುಲಸಚಿವ ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ಡಾ. ಎಚ್. ದೇವೇಂದ್ರಪ್ಪ, ಹಣಕಾಸು ಅಧಿಕಾರಿಪಂಚ ಲಿಂಗ ಸ್ವಾಮಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article